ಕೊರೊನಾ ಸಂಕಷ್ಟದಲ್ಲಿ ಸಿಲುಕಿರುವ ಜನರ ಸಹಾಯಕ್ಕೆ ನಟ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ನಿಂತಿದ್ದಾರೆ.
ಕಳೆದ ಒಂದು ವಾರದಿಂದ ಭುವನ್ ಪೊನ್ನಣ್ಣ ಮತ್ತು ಹರ್ಷಿಕಾ ಪೂಣಚ್ಚ ಭುವನ್ ಪೊನ್ನಣ್ಣ ಫೌಂಡೇಶನ್ ವತಿಯಿಂದ ಆಹಾರ ಕಿಟ್ಗಳು ಹಾಗೂ ಬೆಂಗಳೂರಿನಲ್ಲಿ ಆಕ್ಸಿಜನ್ ಸಿಗದೆ ಪರದಾಡುತ್ತಿರುವ ಜನರಿಗೆ, ತಮ್ಮ ಕೈಲಾದ ಸಹಾಯ ಮಾಡುತ್ತಿದ್ದಾರೆ.
ಇದೀಗ ಭುವನ್ ಪೊನ್ನಣ್ಣ ಹಾಗೂ ಹರ್ಷಿಕಾ ಮತ್ತೊಂದು ಮಹತ್ವದ ಕೆಲಸಕ್ಕೆ ಮುಂದಾಗಿದ್ದಾರೆ. ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ, ಆರ್ಥಿಕ ಸಂಕಷ್ಟದಿಂದ ರೇಷನ್ ಇಲ್ಲದೇ ಒದ್ದಾಡುತ್ತಿರುವವರಿಗಾಗಿ ಭುವನ್ ಪೊನ್ನಣ್ಣ ಫೌಂಡೇಶನ್ ಮೂಲಕ ಉಚಿತ ಆಕ್ಸಿಜನ್ ಮತ್ತು ಆಟೋ ವ್ಯವಸ್ಥೆ ಮಾಡಲಾಗಿದೆ.
ಇದರ ಜೊತೆಗೆ ರೇಷನ್, ಔಷಧಿಗಳನ್ನು ಸಹ ಒದಗಿಸಲಾಗುತ್ತದೆ. ‘’ಈ ಅಪ್ಲಿಕೇಶನ್ಗಳನ್ನ ಬಳಸಿದರೆ ನಿಮ್ಮ ಸ್ಮಾರ್ಟ್ಫೋನ್ ಬ್ಯಾಟರಿ ಬಾಳಿಕೆ ಹೆಚ್ಚಾಗಲಿದೆ''. ಈ ಅಭಿಯಾನಕ್ಕೆ ಕರ್ನಾಟಕ ಆರೋಗ್ಯ ಸಚಿವ ಡಾ ಸುಧಾಕರ್ ಚಾಲನೆ ನೀಡಿ ಭುವನ್, ಹರ್ಷಿಕಾ ಕೆಲಸಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ತುರ್ತು ಪರಿಸ್ಥಿತಿಯಲ್ಲಿ ಸಾರಿಗೆ ಅಥವಾ ಆ್ಯಂಬುಲೆನ್ಸ್ ಸಿಗದೇ ಕಷ್ಟಪಡುತ್ತಿರುವ ಜನರಿಗೆ ನೆರವಾಗಲು ನಾಲ್ಕೈದು ಆಟೋಗಳು ನಗರದಲ್ಲಿ ಕೆಲಸ ಮಾಡಲಿವೆ. ಇದರ ಜೊತೆಗೆ ಆಕ್ಸಿಜನ್ ಸಿಗದೆ ಸಾವು,ಬದುಕಿಗಾಗಿ ಕಷ್ಟಪಡುವವರಿಗಾಗಿ ಆಕ್ಸಿಜನ್ ಬಸ್ ವ್ಯವಸ್ಥೆ ಮಾಡಲಾಗಿದೆ.
ಇದಕ್ಕೂ ಮುಂಚೆ ಭುವನ್ ಪೊನ್ನಣ್ಣ ಹೆಲ್ಫ್‌ಲೈನ್ ಆರಂಭಿಸಿದ್ದರು. ಸಹಾಯ ಬೇಕು ಅಂದ್ರೆ ಕಾಲ್ ಮಾಡಿ ಎಂದು ಖಾಸಗಿ ನಂಬರ್ ಕೊಟ್ಟಿದ್ದರು. ಇದರಿಂದ ದಿನಕ್ಕೆ 3-4 ಸಾವಿರ ಕಾಲ್ ಬರಲು ಶುರುವಾಯ್ತು. ಈಗ ಫ್ರೀ ಆಟೋ ಆಕ್ಸಿಜನ್ ವ್ಯವಸ್ಥೆ ಮಾಡುವ ಮೂಲಕ ಕೊರೊನಾ ಕಷ್ಟದಲ್ಲಿರುವ ಜನರ ಸಹಾಯ ಮಾಡ್ತಾ ಇರೋದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.