ಕಾವೇರಿ ನದಿಯ ಪುನಶ್ಚೇತನದ ಸಲುವಾಗಿ ನಡೆಯುತ್ತಿರುವ ‘ಕಾವೇರಿ ಕೂಗು’ ಅಭಿಯಾನಕ್ಕೆ ಸ್ಯಾಂಡಲ್ವುಡ್ ಬ್ಯೂಟಿ ಕ್ವೀನ್ ಹರಿಪ್ರಿಯಾ ಕೈ ಜೋಡಿಸಿದ್ದಾರೆ. ಶತಮಾನದಿಂದ ಕೋಟ್ಯಂತರ ಕನ್ನಡಿಗರಿಗೆ ಜೀವನದಿ ಕಾವೇರಿ. ಆದರೆ ಕಳೆದ 17 ವರ್ಷಗಳಿಂದ ಕಾವೇರಿ ಹರಿವು ತುಂಬಾ ಕಡಿಮೆಯಾಗಿದೆ. ಇದಕ್ಕೆ ಕಾರಣ ಅಂದ್ರೆ ನಿರಂತರವಾಗಿ ಅರಣ್ಯ ನಾಶ. ನಮ್ಮ ವ್ಯವಸಾಯ ಭೂಮಿಯಲ್ಲಿ ಫಲವತ್ತತೆ ಕಡಿಮೆಯಾಗಿ ರಾಸಾಯನಿಕ ಗೊಬ್ಬರಗಳನ್ನು ಬಳಸುತ್ತಿರುವುದು.
ನಮ್ಮ ತಾತ, ಮುತ್ತಾತಂದಿರು ನಮ್ಮ ಕಾವೇರಿಯನ್ನು ಸ್ವಚ್ಛವಾಗಿ ನಮಗೆ ಕೊಟ್ಟಿದ್ದರು. ಈಗ ನಾವು ಸಹ ನಮ್ಮ ಮುಂದಿನ ಪೀಳಿಗೆಗೆ ಸ್ವಚ್ಛವಾಗಿ ಕೊಡಬೇಕು. ಈಗ ಇದಕ್ಕಾಗಿ ‘ಕಾವೇರಿ ಕೂಗು’ ಅಭಿಯಾನ ಶುರುವಾಗಿದೆ. ಈ ಅಭಿಯಾನಕ್ಕೆ ನಾನು ಕೈ ಜೋಡಿಸುತ್ತೇನೆ. ನೀವು ಸಹ ಕೈ ಜೋಡಿಸಿ. ವ್ಯವಸಾಯದಲ್ಲಿ ರಾಸಾಯನಿಕ ಬಳಕೆ ಕಡಿಮೆ ಮಾಡಿ. ನಿಮ್ಮ ಬೇಸಾಯದ ಭೂಮಿಯಲ್ಲಿ ಮರಗಳನ್ನು ಬೆಳೆಸಿ ಎಂದು ಕನ್ನಡಿಗರಿಗೆ ಬೆಲ್ ಬಾಟಮ್ ಕುಸುಮ ಮನವಿ ಮಾಡಿದ್ದಾರೆ.