ಟೀಸರ್ ಮತ್ತು ಹಾಡುಗಳಿಂದಲೇ ಸ್ಯಾಂಡಲ್ವುಡ್ ನಲ್ಲಿ ಸದ್ದು ಮಾಡುತ್ತಿರುವ ಸಿನಿಮಾ 'ನಿನ್ನ ಸನಿಹಕೆ'. ಮದುವೆಯ ಮಮತೆಯ ಕರೆಯೋಲೆ ಚಿತ್ರ ಖ್ಯಾತಿಯ ಸೂರಜ್ ಗೌಡ ನಟಿಸಿ, ಮೊದಲ ಬಾರಿಗೆ ನಿರ್ದೇಶನ ಮಾಡುತ್ತಿರುವ ನಿನ್ನ ಸನಿಹಕೆ ಸಿನಿಮಾ, ಗಾಂಧಿನಗರದ ಅಂಗಳದಲ್ಲಿ ಹೊಸ ಭರವಸೆ ಹುಟ್ಟಿಸಿದೆ. ದೊಡ್ಮನೆ ಕುಡಿ ಧನ್ಯಾ ರಾಮ್ಕುಮಾರ್ ನಾಯಕಿಯಾಗಿ ಕನ್ನಡ ಚಿತ್ರರಂಗಕ್ಕೆ ಈ ಸಿನಿಮಾದ ಮೂಲಕ ಪದಾರ್ಪಣೆ ಮಾಡಿದ್ದಾರೆ.
ಈ ಚಿತ್ರ ಅಕ್ಟೋಬರ್ 8ರಂದು ರಾಜ್ಯಾದ್ಯಂತ ತೆರೆ ಕಾಣೋದಕ್ಕೆ ರೆಡಿಯಾಗಿದೆ. ಇನ್ನು ಸಿನಿಮಾದ ವಿಶೇಷತೆ ಬಗ್ಗೆ ನಟ, ನಿರ್ದೇಶಕ ಸೂರಜ್ ಗೌಡ, ನಾಯಕಿ ಧನ್ಯಾ ರಾಮ್ಕುಮಾರ್, ಸಂಗೀತ ನಿರ್ದೇಶಕ ರಘು ದೀಕ್ಷಿತ್, ನಿರ್ಮಾಪಕರಾದ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ಮಾತನಾಡಿದ್ದಾರೆ.
ನಟ, ನಿರ್ದೇಶಕ ಸೂರಜ್ ಗೌಡ ಮಾತನಾಡಿ, ಲಿವಿಂಗ್ ಟುಗೆದರ್ ರಿಲೇಷನ್ ಶಿಪ್ ಒಳಗೆ, ಕ್ಯೂಟ್ ಲವ್ ಸ್ಟೋರಿ ಕಥೆಯನ್ನ ನಿನ್ನ ಸನಿಹಕೆ ಸಿನಿಮಾ ಒಳಗೊಂಡಿದೆ. ಚಿತ್ರಮಂದಿರಗಳಲ್ಲಿ ಶೇ.100ರಷ್ಟು ಪ್ರೇಕ್ಷಕರಿಗೆ ಅನುಮತಿ ನೀಡಿದ ಮೇಲೆ, ಧೈರ್ಯ ಮಾಡಿ, ನಿನ್ನ ಸನಿಹಕೆ ಚಿತ್ರವನ್ನ ಬಿಡುಗಡೆ ಮಾಡುತ್ತಿದ್ದೇವೆ ಎಂದರು.