ಸಿನಿಮಾ ಸ್ಟಾರ್ಗಳು ಏನು ಮಾಡಿದರೂ ಅದು ದೊಡ್ಡ ಸುದ್ದಿಯಾಗಿ ಬಿಡುತ್ತದೆ. ಅವರು ಕೂತರೂ ಸುದ್ದಿ, ನಿಂತರೂ ಸುದ್ದಿ, ಕೆಮ್ಮಿದರೂ ಸುದ್ದಿ ಅನ್ನುವಂತೆ ಅವರು ತಿಳಿದೂ ತಿಳಿಯದೆಯೋ ಮಾಡುವ ಕೆಲವೊಂದು ಕೆಲಸಗಳು ಅವರನ್ನು ನಗೆಪಾಟಲಿಗೆ ಒಳಗಾಗುವಂತೆ ಮಾಡಿಬಿಡುತ್ತದೆ.
ನಟಿ ತ್ರಿಶಾಗೆ ಚಾರ್ಮಿಕೌರ್ ಪ್ರಪೋಸ್: ಇಬ್ಬರ ಮದುವೆ ಯಾವಾಗ ಎಂದು ಕಾಯುತ್ತಿರುವ ಫ್ಯಾನ್ಸ್..! - undefined
ನಟಿ ತ್ರಿಶಾಗೆ ಚಾರ್ಮಿಕೌರ್ ಪ್ರಪೋಸ್ ಮಾಡಿದ್ದು ನಾವಿಬ್ಬರೂ ಬೇಗ ಮದುವೆಯಾಗೋಣ ಎಂದು ಕೇಳಿದ್ದಾರೆ. ಇವರಿಬ್ಬರ ಈ ತಮಾಷೆ ಟ್ವೀಟ್ಗೆ ಕೆಲವರು ನಕ್ಕು ಸುಮ್ಮನಾದರೆ ಮತ್ತೆ ಕೆಲವರು ಇದು ನಿಜ ಎಂದು ಶಾಕ್ ಆಗಿದ್ದಾರೆ.
ನಿನ್ನೆ ನಟಿ ತ್ರಿಶಾ ತಮ್ಮ ಬರ್ತಡೇ ಆಚರಿಸಿಕೊಂಡಿದ್ದಾರೆ. ತ್ರಿಶಾಗೆ ಅವರ ಸ್ನೇಹಿತರು, ಸಿನಿ ಇಂಡಸ್ಟ್ರಿಯವರು ಶುಭಾಶಯ ಕೋರಿದ್ದಾರೆ. ಆದರೆ ನಟಿ ಚಾರ್ಮಿಕೌರ್ 'ಬೇಬಿ ನಾನು ನಿನ್ನನ್ನು ಯಾವಾಗಲೂ ತುಂಬಾ ಪ್ರೀತಿಸುತ್ತೇನೆ. ಮಂಡಿಯೂರಿ ನನ್ನ ಕೋರಿಕೆಯನ್ನು ನೀನು ಸ್ವೀಕರಿಸುವುದನ್ನೇ ಕಾಯುತ್ತಿದ್ದೇನೆ. ನಾವು ಬೇಗನೆ ಮದುವೆಯಾಗಿಬಿಡೋಣ (ಕಾನೂನಿನ ಪ್ರಕಾರ ಅದು ಸಾಧ್ಯ) , ಹ್ಯಾಪಿ ಬರ್ತಡೇ' ಎಂದು ಟ್ವೀಟ್ ಮಾಡಿದ್ದಾರೆ. ಇದಕ್ಕೆ ರೀ ಟ್ವೀಟ್ ಮಾಡಿರುವ ತ್ರಿಶಾ 'ನಾನು ಈಗಾಗಲೇ ನಿನಗೆ ಯೆಸ್ ' ಹೇಳಿದ್ದೇನೆ ಎಂದಿದ್ದಾರೆ.
ಇವರಿಬ್ಬರ ಈ ಟ್ವೀಟ್ಗಳು ಕೆಲವು ಅಭಿಮಾನಿಗಳಿಗೆ ನಗೆತರಿಸಿದರೆ ಮತ್ತೆ ಕೆಲವರು ಇವರು ಅದಾ...? ಎಂದು ತಲೆ ಕೆರೆದುಕೊಂಡು ಯೋಚಿಸುತ್ತಿದ್ದಾರಂತೆ.