ಕರ್ನಾಟಕ

karnataka

ETV Bharat / sitara

ನ್ಯೂಡ್​​​​​​​​ ಆಗಿ ನಟಿಸಲು ರೆಡಿ ಎಂದ ನಟಿ - ಬೆತ್ತಲೆ ನಟನೆ

ಸಿನಿಮಾಗಳಲ್ಲಿ ಬೋಲ್ಡ್ ಹಾಗೂ ಬೆತ್ತಲೆ ನಟನೆಗೆ ಸಾಕಷ್ಟು ನಟಿಯರು ಹಿಂದೇಟು ಹಾಕುತ್ತಾರೆ. ಆದರೆ, ಬೆರಳೆಣೆಕೆಯಷ್ಟು ತಾರೆಯರು ಇಂತಹ ಪಾತ್ರಗಳಲ್ಲಿ ಇಷ್ಟಪಟ್ಟು ನಟಿಸುತ್ತಾರೆ.

ಚಿತ್ರಕೃಪೆ: ಇನ್​ಸ್ಟಾಗ್ರಾಂ

By

Published : Aug 2, 2019, 1:12 PM IST

ಇತ್ತೀಚಿಗೆ ತಮಿಳಿನ ಅಡೈ ಸಿನಿಮಾದಲ್ಲಿ ನಟಿ ಅಮಲಾ ಪೌಲ್​ ನೆಕೆಡ್ ಅವತಾರದಲ್ಲಿ ನಟಿಸಿ ಸುದ್ದಿಯಾಗಿದ್ದರು. ಇದೀಗ ಬಹುಭಾಷಾ ನಟಿ ಬಿಂದು ಮಾಧವಿ ಕೂಡ ಅವಕಾಶ ಸಿಕ್ರೆ ನಾನೂ ಕೂಡ ಕ್ಯಾಮರಾ ಮುಂದೆ ಬಟ್ಟೆ ಬಿಚ್ಚುವುದಾಗಿ ಹೇಳಿದ್ದಾರೆ. ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಈ ಬ್ಯೂಟಿ, ಅಮಲಾ ಪೌಲ್​ ಧೈರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ವಿವಸ್ತ್ರಳಾಗಿ ನಟಿಸುವುದು ಸುಲಭವಲ್ಲ. ಆದರೆ, ಅಮಲಾ ಧೈರ್ಯದಿಂದ ಅದನ್ನು ಮಾಡಿದ್ದಾರೆ. ನಂಗೂ ಕೂಡ ಹಾಗೇ ನಟಿಸುವ ಆಸೆ. ಅವಕಾಶ ಸಿಕ್ಕರೆ ಖುಷಿಯಿಂದಲೇ ಕ್ಯಾಮರಾ ಮುಂದೆ ನ್ಯೂಡ್ ಆಗುವೆ ಎಂದಿದ್ದಾರೆ.

ತೆಲುಗು ಚಿತ್ರದ ಮೂಲಕ ಸಿನಿಮಾ ರಂಗಕ್ಕೆ ಕಾಲಿಟ್ಟ ಬಿಂದು ನಂತರ ತಮಿಳು ಚಿತ್ರಗಳಲ್ಲಿಯೂ ನಟಿಸಿದ್ದಾರೆ. ವೆಪ್ಪಂ, ಕೇಡಿ ಬಿಲ್ಲಾ ಕಿಲಾಡಿ ರಂಗ ಹಾಗೂ ಪ್ಯಾಸೇಜ್​ 2 ಸೇರಿದಂತೆ ಕೆಲವು ಬ್ಲಾಕ್​ಬಸ್ಟರ್​ ಚಿತ್ರಗಳಲ್ಲಿ ನಟಿಸಿರುವ ಈ ಚೆಲುವೆ ತಮಿಳಿನ ಬಿಗ್​ಬಾಸ್​ ಸೀಸನ್​​ 1ರ ಸ್ಪರ್ಧಿಯಾಗಿದ್ದರು. ಖ್ಯಾತ ನಟ ಕಮಲ್ ಹಾಸನ್ ಈ ಸೀಸನ್​ ಹೋಸ್ಟ್ ಮಾಡಿದ್ದರು.

ABOUT THE AUTHOR

...view details