ಕರ್ನಾಟಕ

karnataka

ETV Bharat / sitara

ಕೊಪ್ಪಳದ ಶ್ರೀ ಅಂಬಾ ಭವಾನಿ ದೇವಿಯ ದರ್ಶನ ಪಡೆದ ನಟಿ ಭವ್ಯ: ಸ್ಥಳೀಯರಿಂದ ಸೀರೆ ಉಡುಗೊರೆ - ಶ್ರೀ ಅಂಬಾ ದೇವಿಯ ದರ್ಶನ ಪಡೆದ ನಟಿ ಭವ್ಯ

ಚಿತ್ರ ನಟಿ ಭವ್ಯ ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಕೊಪ್ಪಳದ ಭಾಗ್ಯನಗರದ ಶ್ರೀ ಅಂಬಾ ಭವಾನಿ ದೇವಸ್ಥಾನಕ್ಕೆ ಆಗಮಿಸಿ ಅಂಬಾ ಭವಾನಿ ದೇವಿಯ ದರ್ಶನ ಪಡೆದುಕೊಂಡರು. ದೇವಸ್ಥಾನಕ್ಕೆ ಆಗಮಿಸಿದ್ದ ಅವರಿಗೆ ಇಲ್ಲಿನ ಪ್ರಸಿದ್ಧ ಭಾಗ್ಯನಗರ ಸೀರೆಯನ್ನು ಉಡುಗೊರೆಯಾಗಿ ನೀಡಲಾಯಿತು.

ಕೊಪ್ಪಳದ ಶ್ರೀ ಅಂಬಾ ದೇವಿಯ ದರ್ಶನ ಪಡೆದ ನಟಿ ಭವ್ಯ

By

Published : Oct 1, 2019, 5:02 PM IST

ಕೊಪ್ಪಳ: ನಟಿ ಭವ್ಯ ಇಂದು ನಗರದಲ್ಲಿರುವ ಭಾಗ್ಯನಗರದ ಶ್ರೀ ಅಂಬಾ ಭವಾನಿ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿಯ ದರ್ಶನ ಪಡೆದರು. 'ನಮೋ ಭಾರತ' ಚಿತ್ರದ ಚಿತ್ರೀಕರಣದ ಹಿನ್ನೆಲೆಯಲ್ಲಿ ಬಂದಿದ್ದ ನಟಿ ಭವ್ಯ, ಕೊಪ್ಪಳದ ಹೋಟೆಲ್​​ನಲ್ಲಿ ವಾಸ್ತವ್ಯ ಹೂಡಿದ್ದರು.

ಜನರ ಮಾಹಿತಿ ಮೇರೆಗೆ ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ಭಾಗ್ಯನಗರದ ಶ್ರೀ ಅಂಬಾ ಭವಾನಿ ದೇವಸ್ಥಾನಕ್ಕೆ ಆಗಮಿಸಿ ಅಂಬಾ ಭವಾನಿ ದೇವಿಯ ದರ್ಶನ ಪಡೆದುಕೊಂಡರು. ದೇವಸ್ಥಾನಕ್ಕೆ ಆಗಮಿಸಿದ್ದ ಅವರಿಗೆ ಇಲ್ಲಿನ ಪ್ರಸಿದ್ಧ ಭಾಗ್ಯನಗರ ಸೀರೆಯನ್ನು ಉಡುಗೊರೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಈಟಿವಿ ಭಾರತದೊಂದಿಗೆ ಮಾತನಾಡಿದ ನಟಿ ಭವ್ಯ, ನಮೋ ಭಾರತ ಚಿತ್ರದ ಶೂಟಿಂಗ್​​ಗೆ ಬಂದಿದ್ದೆ. ಚಿತ್ರದ ಶೂಟಿಂಗ್ ಮುಗಿದಿದೆ. ನವರಾತ್ರಿ ಆಚರಣೆ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಬಂದೆ. ತುಂಬಾ ಖುಷಿಯಾಗುತ್ತಿದೆ. ನವರಾತ್ರಿ ಅಚರಣೆಯಲ್ಲಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರೋದು ಸಂತಸದ ವಿಷಯ ಎಂದು ಖುಷಿ ವ್ಯಕ್ತಪಡಿಸಿದರು. ಅಲ್ಲದೆ ದೇವಿ ಎಲ್ಲರಿಗೂ ಸನ್ಮಂಗಳವನ್ನುಂಟು ಮಾಡಲಿ ಎಂದರು.

ಕೊಪ್ಪಳದ ಶ್ರೀ ಅಂಬಾ ಭವಾನಿ ದೇವಿಯ ದರ್ಶನ ಪಡೆದ ನಟಿ ಭವ್ಯ

ABOUT THE AUTHOR

...view details