ಬೆಂಗಳೂರು:ಕಳೆದ ಎರಡು ವರ್ಷಗಳಿಂದ ಕೊರೊನಾ ಮಹಾಮಾರಿಯ ಅಟ್ಟಹಾಸಕ್ಕೆ ಇಡೀ ಜಗತ್ತೇ ನಲುಗಿದೆ. ಒಂದನೇ ಅಲೆಯ ಭೀಕರತೆ ಮರೆಯಾಗುವ ಹೊತ್ತಲ್ಲೇ, ಎರಡನೇ ಅಲೆಯ ಅಬ್ಬರದಿಂದ ಜನರು ತೊಂದರೆಗೀಡಾದರು. ಇದೀಗ ಮೂರನೇ ಅಲೆಯ ಬಗ್ಗೆ ತಜ್ಞರು ಹಾಗೂ ಸರ್ಕಾರ ಎಚ್ಚರಿಕೆ ನೀಡುತ್ತಲೇ ಇದ್ದಾರೆ. ಈ ಬಗ್ಗೆ ಚಂದನವನದ ತಾರೆ ನಟಿ ಭಾವನಾ ಕೋವಿಡ್ ಜನರಿಗೆ ಧೈರ್ಯ ತುಂಬುವ ಮಾತುಗಳನ್ನಾಡಿದರು.
'ಕೊರೊನಾ ಬಂದ ಮೊದಲ ದಿನದಿಂದಲೂ ನಾನು ಮಾಸ್ಕ್ ಹಾಕಿಕೊಳ್ಳುತ್ತಿಲ್ಲ. ಕೊರೊನಾವನ್ನg ಧೈರ್ಯದಿಂದ ಎದುರಿಸಬೇಕು. ಬಹಳಷ್ಟು ಜನರು ಮನೆಯಿಂದ ಹೊರೆಗೆ ಈಗಲೂ ಬರುತ್ತಿಲ್ಲ. ಮಾನಸಿಕವಾಗಿ ಅವರಲ್ಲಿ ಭಯ ಕಾಡುತ್ತಿದ್ದು ಸಹಜ ಸ್ಥಿತಿಗೆ ಬರಲು ತುಂಬಾ ಜನರಿಗೆ ಸಾಧ್ಯ ಆಗುತ್ತಿಲ್ಲ' ಎಂದು ಹೇಳಿದರು.
'ಕೊರೊನಾವನ್ನು ಧೈರ್ಯದಿಂದ ಎದುರಿಸಲು ಮನಃಶಕ್ತಿ ನಿರ್ಮಿಸಿಕೊಳ್ಳಬೇಕು. ರೋಗ ಬಾಧಿಸಿದಾಗ ಯಾವುದೇ ಔಷಧಿ ತೆಗೆದುಕೊಳ್ಳಲಿಲ್ಲ. ಬದಲಿಗೆ ಆಹಾರ ಪದ್ಧತಿಯಲ್ಲೇ ಗುಣಪಡಿಸಿಕೊಂಡೆ' ಎಂದು ಭಾವನಾ ಹೇಳುತ್ತಾರೆ.
ಸಾಂಕ್ರಾಮಿಕ ಸೋಂಕು ಪ್ರತಿ ಕ್ಷೇತ್ರದಲ್ಲೂ ತನ್ನ ಕರಾಳತೆಯನ್ನು ತೋರಿಸಿದೆ. ಇದರಿಂದ ದೊಡ್ಡ ಕಾರ್ಮಿಕ ವರ್ಗ ಹೊಂದಿರುವ ಸಿನಿಮಾ ರಂಗವೂ ಹೊರತಲ್ಲ. ಕೊರೊನಾದ ಕರಿನೆರಳು ಸಿನಿಮಾ ರಂಗದ ಮೇಲೆ ಬಿದ್ದಿರುವ ಕುರಿತು ಪ್ರತಿಕ್ರಿಯಿಸಿರುವ ನಟಿ, ಬೆಂಗಳೂರು ನಗರ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮ ನಡೆಯುವ ದೊಡ್ಡ ಜಾಗ. ಆದರೆ ಇಲ್ಲಿ ಕೊರೊನಾ ಕಾರಣಕ್ಕೆ ಯಾವ ಕಾರ್ಯಕ್ರಮಗಳೂ ನಡೆಯದಂತೆ ಆಯಿತು. ನಿಜಕ್ಕೂ ಇದು ಸಿನಿಮಾ ರಂಗದವರ ಮೇಲೆ ಮಾತ್ರವಲ್ಲ, ಎಲ್ಲ ಸಾಂಸ್ಕೃತಿಕ ರಂಗಕ್ಕೂ ಹೊಡೆತ ನೀಡಿದೆ ಎಂದರು.
ಇದನ್ನೂ ಓದಿ:ಸಾಹಸ ಸಿಂಹನ ಮಡದಿ ಭಾರತಿ ಹುಟ್ಟು ಹಬ್ಬಕ್ಕೆ 'ಬಾಳೆ ಬಂಗಾರ'ದ ಗಿಫ್ಟ್ ನೀಡಿದ ಅಳಿಯ 'ಆರ್ಯವರ್ಧನ್'..