ನವದೆಹಲಿ: ದಕ್ಷಿಣ ಭಾರತದ ಚಿತ್ರರಂಗದಲ್ಲಿ ತನ್ನದೇ ಛಾಪು ಮೂಡಿಸಿರುವ ಬಹುಭಾಷಾ ನಟಿ ನಯನತಾರಾ ಇಂದು 37ನೇ ವಸಂತಕ್ಕೆ (Nayanthara Turns 37) ಕಾಲಿಟ್ಟಿದ್ದಾರೆ. ತಮ್ಮ ಜನ್ಮದಿನವನ್ನು ತಮ್ಮ ಭಾವಿ ಪತಿ, ನಿರ್ದೇಶಕ ವಿಘ್ನೇಶ್ ಶಿವನ್ ಅವರೊಂದಿಗೆ ಆಚರಿಸಿಕೊಂಡಿದ್ದಾರೆ (Nayanthara Celebrates birthday With Vignesh Shivan).
ಕೇಕ್ ಕತ್ತರಿಸುವಾಗ ಹಳದಿ ಟಾಪ್ ಮತ್ತು ನೀಲಿ ಜೀನ್ಸ್‌ನಲ್ಲಿ ಮಿಂಚುತ್ತಿರುವ ನಟಿಯನ್ನು ವಿಘ್ನೇಶ್ ತಬ್ಬಿಕೊಂಡು ವಿಶ್ ಮಾಡುವ ದೃಶ್ಯದ ವಿಡಿಯೋ ತುಣುಕು ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗಿದೆ.
ಇತ್ತ ವಿಘ್ನೇಶ್ ಶಿವನ್ ಕೂಡ ಮುಂಬಲಿರುವ 'ಕಾತುವಾಕುಲ ರೆಂಡು ಕಾದಲ್' (Kaathuvaakula Rendu Kaadhal) ಸಿನಿಮಾದಲ್ಲಿನ ನಯನತಾರಾ ಅವರ ಹೊಸ ಲುಕ್ ಅನ್ನು ತಮ್ಮ ಇನ್ಟಾಗ್ರಾಮ್ ಹಾಗೂ ಟ್ವಿಟರ್ನಲ್ಲಿ ಹಂಚಿಕೊಂಡಿದ್ದು, ತಮ್ಮ 'ಕಣ್ಮಣಿ'ಗೆ ಜನ್ಮದಿನದ ಶುಭಾಶಯ ತಿಳಿಸಿದ್ದಾರೆ.