ಕರ್ನಾಟಕ

karnataka

ETV Bharat / sitara

ರಾಷ್ಟ್ರೀಯ ಪ್ರತಿಭಟನಾ ದಿನಕ್ಕೆ ಬೆಂಬಲ ವ್ಯಕ್ತಪಡಿಸಿದ ನಟಿ ಆಶಿಕಾ ರಂಗನಾಥ್ - ನಟಿ ಆಶಿಕಾ ರಂಗನಾಥ್ ಸುದ್ದಿ,

ರಾಷ್ಟ್ರೀಯ ಪ್ರತಿಭಟನಾ ದಿನಕ್ಕೆ ಬೆಂಬಲ ವ್ಯಕ್ತಪಡಿಸಿರುವ ನಟಿ ಆಶಿಕಾ ರಂಗನಾಥ್ #SavetheSaviours ಹ್ಯಾಶ್ ಟ್ಯಾಗ್ ಮೂಲಕ ಡಾಕ್ಟರ್ಸ್ ಜೊತೆ ನಿಲ್ಲಲು ಮನವಿ ಮಾಡಿದ್ದಾರೆ.

Actress Ashika Ranganath support, Actress Ashika Ranganath support for National Protest Day, Actress Ashika Ranganath, Actress Ashika Ranganath news, ಬೆಂಬಲ ವ್ಯಕ್ತಪಡಿಸಿದ ನಟಿ ಆಶಿಕಾ ರಂಗನಾಥ್, ರಾಷ್ಟ್ರೀಯ ಪ್ರತಿಭಟನಾ ದಿನಕ್ಕೆ ಬೆಂಬಲ ವ್ಯಕ್ತಪಡಿಸಿದ ನಟಿ ಆಶಿಕಾ ರಂಗನಾಥ್, ನಟಿ ಆಶಿಕಾ ರಂಗನಾಥ್, ನಟಿ ಆಶಿಕಾ ರಂಗನಾಥ್ ಸುದ್ದಿ,
ರಾಷ್ಟ್ರೀಯ ಪ್ರತಿಭಟನಾ ದಿನಕ್ಕೆ ಬೆಂಬಲ ವ್ಯಕ್ತಪಡಿಸಿದ ನಟಿ ಆಶಿಕಾ ರಂಗನಾಥ್

By

Published : Jun 18, 2021, 4:21 AM IST

ಬೆಂಗಳೂರು:ಕರ್ನಾಟಕ ವೈದ್ಯರು ರಾಷ್ಟ್ರೀಯ ಪ್ರತಿಭಟನಾ ದಿನವನ್ನು ಆಚರಿಸುವುದಾಗಿ ಈಗಾಗಲೇ ತಿಳಿಸಿದ್ದು, ಈ ಬಗ್ಗೆ ಸ್ಯಾಂಡಲ್​ವುಡ್ ಖ್ಯಾತ ನಟಿ ಆಶಿಕಾ ರಂಗನಾಥ್ ಮಾತನಾಡಿದ್ದಾರೆ. ಡಾಕ್ಟರ್ಸ್ ಎಂದರೆ ನನಗೆ ಮೊದಲು ನೆನಪಾಗುವ ಪದ ಸಂರಕ್ಷಕರು ಎಂದು ಹೇಳಿದರು.

ರಾಷ್ಟ್ರೀಯ ಪ್ರತಿಭಟನಾ ದಿನಕ್ಕೆ ಬೆಂಬಲ ವ್ಯಕ್ತಪಡಿಸಿದ ನಟಿ ಆಶಿಕಾ ರಂಗನಾಥ್

ವಿಶ್ವದಲ್ಲಿ ಕಳೆದ ವರ್ಷದಿಂದ ಕೋವಿಡ್ ಮಹಾಮಾರಿಯ ಆರ್ಭಟ ನಡೆಯುತ್ತಿದೆ. ಇಂತಹ ಸಂದರ್ಭದಲ್ಲಿ ವೈದ್ಯರು ತಮ್ಮ ಕುಟುಂಬ ಬಿಟ್ಟು ಜೀವವನ್ನು ಪಣಕ್ಕಿಟ್ಟು ಜನರಿಗಾಗಿ ಸೇವೆಸಲ್ಲಿಸುತ್ತಿದ್ದಾರೆ ಎಂದು ಆಶಿಕಾ ಹೇಳಿದರು.

ಎಲ್ಲಾ ಆರೋಗ್ಯ ಕಾರ್ಯಕರ್ತರ ಸೇವಾ ಮನೋಭಾವಕ್ಕೆ ಧನ್ಯವಾದ ಸಲ್ಲಿಸುತ್ತೇನೆ. ಅದು ಅವರ ಕಾರ್ಯವೆಂದು ನಮಗೆ ಅನ್ನಿಸಿದರೂ ಸಹ ಅಪಾಯದ ಮಟ್ಟ ಗಮನಿಸಿದರೆ ನಾವು ಅವರಿಗೆ ಅಭಾರಿಗಳಾಗಿರಬೇಕು ಎಂದು ಹೇಳಿದರು.

ರಾಷ್ಟ್ರೀಯ ಪ್ರತಿಭಾಟನಾ ದಿನಾಚರಣೆ ಜೂನ್ 18 ರಂದು ಡಾಕ್ಟರ್ಸ್ ಮೇಲಿನ ಹಲ್ಲೆ ಖಂಡಿಸಿ ನೆಡೆಯುತ್ತಿದೆ. ಒಂದು ಸಾಮಾಜಿಕ ತಿಳುವಳಿಕೆ ಮೂಡಿಸಲು ಪ್ರತಿಭಟನೆ ನಡೆಯುತ್ತಿದೆ. ಈ ಜಾಗೃತಿ ಕಾರ್ಯಕ್ರಮಕ್ಕೆ ನನ್ನ ಸಂಪೂರ್ಣ ಬೆಂಬಲ ನೀಡುತ್ತಿದ್ದೇನೆ. ಎಲ್ಲರೂ ಕೂಡ ಬೆಂಬಲ ನೀಡಿ ಎಂದು ವಿನಂತಿಸಿದ್ದಾರೆ.

ನಮ್ಮ ವೈದ್ಯರನ್ನು ನಾವು ಉಳಿಸಿಕೊಳ್ಳೋಣ. ಅವರ ಪ್ರಯತ್ನಗಳನ್ನು ಶ್ಲಾಘಿಸೋಣ. #SavetheSaviours ಎನ್ನುವ ಹ್ಯಾಶ್ ಟ್ಯಾಗ್ ಮುಖಾಂತರ ಈ ಪ್ರತಿಭಟನೆ ನೆಡೆಯುತ್ತಿದ್ದು, ನೀವು ಕೂಡ ಬೆಂಬಲಿಸಿ ಎಂದು ಕರ್ನಾಟಕದ ಜನತೆಗೆ ಕೇಳಿಕೊಂಡಿದ್ದಾರೆ.

ABOUT THE AUTHOR

...view details