ಕುಶಾಲನಗರ ಚೆಲುವೆ ಆಶಾ ಮಾಡೆಲಿಂಗ್ ಕ್ಷೇತ್ರದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಚಂದನವನಕ್ಕೆ ಬಲಗಾಲಿಟ್ಟು ಒಳಬರುತ್ತಿರು ಕೊಡಗಿನ ಈ ಕುವರಿ ಈಗಾಗಲೇ ಮೂರು ಚಿತ್ರಗಳಲ್ಲಿ ನಟಿಸಿದ್ದಾರೆ. ಇವರು ಮುಖ್ಯಭೂಮಿಕೆಯಲ್ಲಿ ಕಾಣಿಸಿಕೊಂಡಿರುವ ಅಂಬಾನಿ ಪುತ್ರ, ಆಡಿಸಿನೋಡು ಬೀಳಿಸಿನೋಡು ಹಾಗೂ ಜೆರ್ಕ್ ಚಿತ್ರಗಳು ಶೂಟಿಂಗ್ ಮುಗಿಸಿಕೊಂಡು ಬಿಡುಗಡೆಗೆ ಸಿದ್ದವಾಗಿವೆ.
ಚಂದನವನಕ್ಕೆ ಬಂದ್ಲು ಮತ್ತೋರ್ವ ಕೊಡಗಿನ ಕುವರಿ...! - undefined
ಕೊಡಗು: ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಕೊಡಗಿನ ಸಾಕಷ್ಟು ಕಲಾವಿದರು ಕಲಾ ಸೇವೆ ಮಾಡುತ್ತಿದ್ದಾರೆ. ಇದೀಗ ಈ ಪಟ್ಟಿಗೆ ಯುವ ಮಾಡೆಲ್ ಆಶಾ ಭಂಡಾರಿ ಸ್ಯಾಂಡಲ್ವುಡ್ಗೆ ಗ್ರ್ಯಾಂಡ್ ವೆಲ್ಕಮ್ ಕೊಟ್ಟಿದ್ದಾರೆ.
![ಚಂದನವನಕ್ಕೆ ಬಂದ್ಲು ಮತ್ತೋರ್ವ ಕೊಡಗಿನ ಕುವರಿ...!](https://etvbharatimages.akamaized.net/etvbharat/images/768-512-2696834-1077-988af806-b89d-43fa-a67e-14a80eab64f5.jpg)
ಯುವ ಮಾಡೆಲ್ ಆಶಾ ಭಂಡಾರಿ
ಯುವ ಮಾಡೆಲ್ ಆಶಾ ಭಂಡಾರಿ
ಕೇವಲ ರೂಪದರ್ಶಿಯಾಗಿರದ ಆಶಾ ಚಿಕ್ಕಂದಿನಿಂದಲೂ ಭರತನಾಟ್ಯ ಪ್ರವೀಣೆ. ಅಭಿನಯ,ಮಾಡಲಿಂಗ್ ಗೀಳು ಹಚ್ಚಿಸಿಕೊಂಡಿದ್ದ ಆಶಾ, ತನ್ನ ಆಸೆಯಂತೆ ಈಗ ಸಿನಿಮಾ ಮತ್ತು ಮಾಡಲಿಂಗ್ ಕ್ಷೇತ್ರದಲ್ಲಿ ಮುಂದುವರೆಯುತ್ತಿದ್ದಾರೆ.
ಇನ್ನು ಒಂದು ತವರಿಗೆ ಆಗಮಿಸಿದ್ದ ಆಶಾ, ತನ್ನ ಸಿನಿ ಕರಿಯರ್ ಬಗ್ಗೆ ಮನಬಿಚ್ಚಿ ಮಾತನಾಡಿದ್ರು. ಮುಂದಿನ ದಿನಗಳಲ್ಲಿ ಒಂದು ಹಾರರ್ ಸಿನಿಮಾ ಮತ್ತು ಕಿರುತೆರೆಯಲ್ಲಿ ಅಭಿನಯಿಸುವ ಅವಕಾಶ ಕೂಡ ಸಿಕ್ಕಿದ್ದು.ಸದ್ಯದಲ್ಲೇ ಇವುಗಳ ಶೂಟಿಂಗ್ ಆರಂಭವಾಗಲಿದೆ. ನಿಮ್ಮೆಲ್ಲರ ಅಶೀರ್ವಾದ ನನ್ನ ಮೇಲಿರಲಿ ಎಂದು ಕೇಳಿಕೊಂಡ್ರು.