ಸ್ಯಾಂಡಲ್ವುಡ್ ನಟಿ ಹಾಗೂ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ತನ್ನ ಸ್ನೇಹಿತರ ಮೇಲೆ ಗರಂ ಆಗಿದ್ದಾರೆ.
ನಿನ್ನೆ ತಮ್ಮ ಟ್ವಿಟ್ಟರ್ನಲ್ಲಿ ಆಕ್ರೋಶ ಹೊರಹಾಕಿರುವ ಕಾಫಿ ತೋಟದ ಈ ಚೆಲುವೆ, ಕೆಲಸಕ್ಕೆ ಬಾರದವರನ್ನ ನನ್ನ ಸ್ನೇಹಿತರೆಂದು ಕರೆದು ತಪ್ಪು ಮಾಡಿದೆ. ಅವರೆಲ್ಲ ಶೋಕಿಗೋಸ್ಕರ ಪಾರ್ಟಿಗೆ ಬಂದು ಮೋಜು ಮಾಡುತ್ತಾರೆ ಎಂದು ಹರಿಹಾಯ್ದಿದ್ದಾರೆ.
ಸ್ನೇಹಿತರ ಹೆಸರು ಹೇಳದೆ ವಾಗ್ದಾಳಿ ನಡೆಸಿರುವ ಅಪೇಕ್ಷಾ, ಸಹಾಯದ ಅವಶ್ಯಕತೆ ಇರುವ ಜನರಿಗೆ ಆ ಜನರಿಂದ ಇವತ್ತಿನವರೆಗೂ ಒಂದು ಸಣ್ಣ ಸಹಾಯ ಕೂಡ ಆಗಿಲ್ಲ. ಜನಗಳ ಮುಂದೆ ಪೋಸ್ ಕೊಡುವುದ ಮಾತ್ರ ಗೊತ್ತು ಎಂದು ಜರಿದಿದ್ದಾರೆ. 'ನಿನಗೆ ಹೊಂದಿಕೆಯಾಗದ ಕೆಲಸ ಏಕೆ ಬೇಕು..?' ಎಂದು ಟ್ವಿಟ್ಟರ್ನಲ್ಲಿ ಪ್ರಶ್ನಿಸಿದ್ದಾರೆ.
ಮೊನ್ನೆಯಷ್ಟೆ ಅಪೇಕ್ಷಾ ನಟಿಸಿರುವ 'ಸಾಗುತ ದೂರ ದೂರ' ಸಿನಿಮಾ ಟ್ರೇಲರ್ ಲಾಂಚ್ ಆಯಿತು. ಇದೇ ಖುಷಿಯಲ್ಲಿರುವ ಅವರಿಗೆ ಯಾರಿಂದ ಹರ್ಟ್ ಆಗಿದೆ ಅಂತಾ ಗೊತ್ತಿಲ್ಲ. ಆದರೆ, ಪರೋಕ್ಷವಾಗಿ ಸ್ನೇಹಿತರ ಮೇಲೆ ಕಿಡಿ ಕಾರಿದ್ದಾರೆ.