ಸೋಷಿಯಲ್ ಮೀಡಿಯಾದಲ್ಲಿ ಈ ಸೆಲೆಬ್ರಿಟಿಗಳು ಪರಸ್ಪರ ಫಾಲೋವ್ ಮಾಡ್ತಿದ್ದಾರೆ. ಟ್ವಿಟ್ಟರ್ಲ್ಲಿ ಪ್ರೇಮಂ ಚೆಲುವೆ ಅನುಪಮಾ ಅವರು ಬುಮ್ರಾ ಅವರನ್ನು ಹಿಂಬಾಲಿಸುತ್ತಿದ್ದಾರೆ. ಇದೇ ಒಂದು ಕಾರಣಕ್ಕೆ ಈ ಜೋಡಿಗಳು ಡೇಟಿಂಗ್ನಲ್ಲಿದ್ದಾರೆ ಎನ್ನುವ ವದಂತಿ ಹಬ್ಬಿದೆ.
'ನಾವು ಜಸ್ಟ್ ಫ್ರೆಂಡ್ಸ್, ನಮ್ಮ ನಡುವೆ ಅಂತಹದ್ದು ಏನಿಲ್ಲ' - ಸೌಥ್ ಸುಂದರಿ ಅನುಪಮಾ
ಕ್ರಿಕೆಟರ್ ಜಸ್ಪ್ರೀತ್ ಬುಮ್ರಾ ಹಾಗೂ ಸೌಥ್ ಸುಂದರಿ ಅನುಪಮಾ ಪರಮೇಶ್ವರನ್ ಡೇಟಿಂಗ್ನಲ್ಲಿದ್ದಾರೆ ಎನ್ನುವುದು ಸದ್ಯ ಟಾಕ್ ಆಫ್ ದಿ ಟೌನ್ ಆಗಿದೆ.
!['ನಾವು ಜಸ್ಟ್ ಫ್ರೆಂಡ್ಸ್, ನಮ್ಮ ನಡುವೆ ಅಂತಹದ್ದು ಏನಿಲ್ಲ'](https://etvbharatimages.akamaized.net/etvbharat/prod-images/768-512-3795971-thumbnail-3x2-anu.jpg)
ಈ ವದಂತಿ ಬಗ್ಗೆ ಜಸ್ಪ್ರೀತ್ ಎಲ್ಲಿಯೂ ತುಟಿ ಬಿಚ್ಚಿಲ್ಲ. ಆದರೆ, ನಟಸಾರ್ವಭೌಮನ ಹುಡುಗಿ ಪರಮೇಶ್ವರನ್ ಈ ವದಂತಿಯನ್ನು ತಳ್ಳಿ ಹಾಕಿದ್ದಾರೆ. ಹಿಂದಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಅವರು ನಾವು ಜಸ್ಟ್ ಫ್ರೆಂಡ್ಸ್, ನಮ್ಮ ನಡುವೆ ಅಂತಹದ್ದು ಏನಿಲ್ಲ ಎಂದು ಅಂತೆ-ಕಂತೆಗಳಿಗೆ ಫುಲ್ ಸ್ಟಾಪ್ ಹೇಳಿದ್ದಾರೆ.
ಇನ್ನು, ಭಾರತೀಯ ಕ್ರಿಕೆಟ್ ತಂಡದ ಬೆಸ್ಟ್ ಬೌಲರ್ ಬುಮ್ರಾ ಡೇಟಿಂಗ್ ವಿಚಾರವಾಗಿ ಸದ್ದು ಮಾಡ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ನಟಿ ರಾಶಿ ಖನ್ನಾ ಜತೆ ಇವರ ಹೆಸರು ತಳುಕು ಹಾಕಿಕೊಂಡಿತ್ತು. ರಾಶಿ ಕೂಡ ಇದನ್ನು ಅಲ್ಲಗಳೆದು 'ಬುಮ್ರಾ ಓರ್ವ ಭಾರತೀಯ ಕ್ರಿಕೆಟರ್ ಎಂಬುದಷ್ಟೆ ನಂಗೆ ಗೊತ್ತು' ಎಂದಿದ್ದರು.