ಕರ್ನಾಟಕ

karnataka

ETV Bharat / sitara

"ನಾಥೂರಾಮ್ ಗೋಡ್ಸೆಗೆ ಜೈ" ಎಂದ ನಟಿ ಅನಿತಾ ಭಟ್​.. ನೆಟ್ಟಿಗರ ಕಟು ನುಡಿಗೆ ಬೆಡಗಿಯ ಖಾರದ ಉತ್ತರ

ಗಾಂಧೀಜಿ ಅವರನ್ನು ಕೊಂದು ಎಂಥಾ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಗೊತ್ತಿದ್ದರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ ಎಂದು ನಟಿ ಅನಿತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ. ಅದಕ್ಕೆ ಕೆಲ ನೆಟ್ಟಿಗರು "ಗೋಡ್ಸೆ ಜಿಂದಾಬಾದ್" ಎಂದು ಕಾಮೆಂಟ್ ಮಾಡಿದ್ದರೆ, ಇನ್ನೂ ಕೆಲವರು ಅಸಮಾಧಾನ ಹೊರಹಾಕಿದ್ದಾರೆ.

ನೆಟ್ಟಿಗರ ಕಟುಕು ನುಡಿಗೆ ಬೆಡಗಿಯ ಖಾರದ ಉತ್ತರ
ನೆಟ್ಟಿಗರ ಕಟುಕು ನುಡಿಗೆ ಬೆಡಗಿಯ ಖಾರದ ಉತ್ತರ

By

Published : Aug 18, 2021, 8:04 PM IST

‘ಸೈಕೊ’ ಸಿನಿಮಾದ ಮೂಲಕ ಸ್ಯಾಂಡಲ್​ವುಡ್​ಗೆ ಎಂಟ್ರಿ ಕೊಟ್ಟು, ವಿಭಿನ್ನ ಸಿನಿಮಾಗಳ ಮೂಲಕ ಗಮನ ಸೆಳೆಯುತ್ತಿರುವ ನಟಿ ಅನಿತಾ ಭಟ್. ಆಗಾಗ ಯೋಗ ಮತ್ತು ಸಿನಿಮಾಗಳ ವಿಚಾರವಾಗಿ ನಟಿ ಅನಿತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಆ್ಯಕ್ಟೀವ್ ಆಗಿರುತ್ತಾರೆ. ಇದೀಗ ನಾಥೂರಾಮ್ ಗೋಡ್ಸೆ ಮತ್ತು ಬ್ರಾಹ್ಮಣರ ಬಗ್ಗೆ ಅನಿತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಬಗ್ಗೆ ಹಂಚಿಕೊಂಡಿದ್ದು, ಈ ಕುರಿತು ಪರ - ವಿರೋಧದ ಬಗ್ಗೆ ಚರ್ಚೆ ಆಗುತ್ತಿದೆ.

ನಟಿ ಅನಿತಾ ಭಟ್ ತಮ್ಮ ಟ್ವಿಟರ್​ನಲ್ಲಿ, "ಗಾಂಧೀಜಿ ಕೊಂದು ಎಂಥಾ ದುರಂತಕ್ಕೆ ಸಿಕ್ಕಿ ಹಾಕಿಕೊಳ್ಳಬಹುದು ಎಂದು ಗೊತ್ತಿದ್ದರೂ, ಅದನ್ನ ಮಾಡಿದ ಗೋಡ್ಸೆಯ ದೇಶಪ್ರೇಮಕ್ಕೆ ಜೈ. ದೇಶಕ್ಕಿಂತ ಏನೂ ದೊಡ್ಡದಲ್ಲ. ಇನ್ನೆಷ್ಟು ಚೂರಾಗ್ತಾ ಇತ್ತೋ ನಮ್ಮ ಭಾರತ?" ಎಂದು ಪೋಸ್ಟ್ ಮಾಡಿದ್ದು, ಅದಕ್ಕೆ ಕೆಲ ನೆಟ್ಟಿಗರು "ಗೋಡ್ಸೆ ಜಿಂದಾಬಾದ್" ಎಂದು ಕಾಮೆಂಟ್ ಮಾಡಿದ್ದಾರೆ.

"ಸ್ವಾತಂತ್ರ್ಯ ಹೋರಾಟದಲ್ಲಿ ಪಾಲುಗೊಂಡಿದ್ದ ಗೋಡ್ಸೆ ಅವರು ದೇಶಭಕ್ತನೇ. ಅವರನ್ನ ಭಯೋತ್ಪಾದಕ ಅಂತ ಕರೆಯೋದು ನಿಮ್ಮಗಳ ಅಜ್ಞಾನ. ಯಾರೋ ಒಬ್ಬರಿಂದ ದೇಶಕ್ಕೆ ಸ್ವಾತಂತ್ರ್ಯ ಬಂದಿಲ್ಲ. ಕೋಟಿಗಟ್ಟಲೆ ವೀರರು ನಮ್ಮ ದೇಶಕ್ಕಾಗಿ ಬಲಿದಾನ ಮಾಡಿದ್ದಾರೆ ಅನ್ನೋದನ್ನು ಅರಿತುಕೊಂಡರೆ ಸಾಕು" ಎಂದು ಅನಿತಾ ಭಟ್ ಹೇಳಿದ್ದಾರೆ.

ನಾನೇನಾದ್ರೂ ಬ್ರಾಹ್ಮಣ ನಟಿ ಅಂತ ಹಾಕಿದ್ದೇನಾ?:

ನಾಥೂರಾಮ್ ಗೋಡ್ಸೆ ಜೊತೆಗೆ ಬ್ರಾಹ್ಮಣ್ಯದ ಕುರಿತು ಮಾತನಾಡಿರುವ ಅನಿತಾ ಭಟ್, "ಇವರುಗಳು ತಮ್ಮ ಪದವಿ ಮುಂದೆ ಜಾತಿ ಹೆಸರು ಹಾಕಿದ ಹಾಗೆ ನಾನೇನಾದ್ರೂ ಬ್ರಾಹ್ಮಣ ನಟಿ ಅಂತ ಹಾಕಿದ್ದೇನಾ? ಜಾತಿ ಹೆಸರು ಹೇಳಿ ಕೆಲಸ ಗಿಟ್ಟಿಸೋ ಗತಿ ಇನ್ನು ನನಗೆ ಬಂದಿಲ್ಲ. ದೇವಸ್ಥಾನದ ಪ್ರಸಾದ ತಿಂದು ಬದುಕಿದ್ರೂ ಸರಿ. ಅದಕ್ಕೆ ಬ್ರಾಹ್ಮಣ್ಯ ಅನ್ನೋ ಹೆಸರು ಯಾಕ್ರೀ? ಬೇರೆ ಜಾತಿಯವರೂ ಮಾಡ್ತಾರೆ ಅಂದ್ರೆ ಅವರವರ ಜಾತಿ ಹೆಸರು ಹಾಕಿ" ಎಂದು ಕಾಮೆಂಟ್ ಒಂದಕ್ಕೆ ಅನಿತ್ ಭಟ್ ಖಾರವಾಗಿ ಉತ್ತರಿಸಿದ್ದಾರೆ.

ಅದಕ್ಕೆ ಒಬ್ಬ ನೆಟ್ಟಿಗ, "ತಾವೇ ಸರ್ವಶ್ರೇಷ್ಠರು ಅನ್ನೋ ವಾದ, ಮಡಿವಂತಿಕೆ ಆಚರಣೆಗಳು ಇದೆಯಲ್ಲ ಅದೇ ಬ್ರಾಹ್ಮಣ್ಯ. ಅದಕ್ಕೆ ಎಲ್ಲರ ವಿರೋಧ ಅಷ್ಟೇ. ಅದು ಬಿಟ್ಟರೆ ಎಲ್ಲರೂ ಒಂದೇ ಯಾರು ಸಹ ಮೇಲಿಲ್ಲ ಕೀಳಿಲ್ಲ" ಎಂದು ಕಾಮೆಂಟ್ ಮಾಡಿದ್ದಾರೆ.

"ನನ್ನ ಅಮ್ಮ ಎಷ್ಟೋ ವರ್ಷಗಳ ಹಿಂದೇನೆ ಜಾತಿ ಪದ್ಧತಿಯನ್ನ ದೂರ ಇಟ್ಟಿದ್ದಾರೆ. ಒಂದು ಲಂಬಾಣಿ ಹುಡುಗಿ ನಮ್ಮ ಮನೆಯಲ್ಲಿ ಓದೋಕೆ ಅಂತ 4 ವರ್ಷ ಇದ್ದಳು. ನಮ್ಮನೇ ದೇವರ ಪೂಜೆ ಕೂಡ ಮಾಡಿದ್ದಾಳೆ. ನನಗೆ ಇದರಲ್ಲಿ ವಿಶೇಷತೆ ಏನು ಕಂಡಿಲ್ಲ. ಸಂದರ್ಭ ಬಂದಿದ್ದರಿಂದ ಹೇಳಿದೆ ಅಷ್ಟೇ" ಅಂತಾ ಅನಿತಾ ಭಟ್ ತಮ್ಮ ಟ್ವಿಟರ್​ ಖಾತೆಯಲ್ಲೂ ಉತ್ತರಿಸಿದ್ದಾರೆ.

ಕನ್ನಡದಲ್ಲಿ ದೊಡ್ಮನೆ ಹುಡುಗ, ಟಗರು, ಡಿಎನ್‍ಎ. ಕನ್ನೇರಿ, ಕಲಿವೀರ ಸೇರಿದಂತೆ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿರುವ ಅನಿತಾ ಭಟ್, ಸದ್ಯ ಬೆಂಗಳೂರು -69, ಬಳೆಪೇಟೆ ಸಿನಿಮಾಗಳಲ್ಲಿ ನಟಿಸಿದ್ದು, ಬಿಡುಗಡೆಗೆ ರೆಡಿಯಾಗಿವೆ.

ABOUT THE AUTHOR

...view details