ಸ್ಯಾಂಡಲ್ವುಡ್ ಲಕ್ಕಿಸ್ಟಾರ್, ಮೋಹಕ ತಾರೆ ಎಂದರೆ ನೆನಪಾಗುವುದು ನಟಿ ರಮ್ಯಾ. ಸದ್ಯಕ್ಕೆ ಚಿತ್ರರಂಗದಿಂದ ದೂರ ಇರುವ ರಮ್ಯಾ ತಮ್ಮ ಗೆಳೆಯನೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ ಎಂಬ ವಿಷಯ ಕೆಲವು ದಿನಗಳ ಹಿಂದೆ ಹರಿದಾಡುತ್ತಿತ್ತು.
'ಪರಿಮಳ ಲಾಡ್ಜ್'ನಲ್ಲಿ ಮೋಹಕ ತಾರೆ ದಿಢೀರ್ ಪ್ರತ್ಯಕ್ಷ..! - ಮಾಜಿ ಸಂಸದೆ ರಮ್ಯಾ
ಬಹಳ ದಿನಗಳಿಂದ ಚಿತ್ರರಂಗದಿಂದ ದೂರ ಇದ್ದ ನಟಿ ರಮ್ಯಾ ದಿಢೀರ್ ಎಂದು 'ಪರಿಮಳ ಲಾಡ್ಜ್' ಚಿತ್ರದಲ್ಲಿ ಪ್ರತ್ಯಕ್ಷ ಆಗಿದ್ದಾರೆ. ಆದರೆ ಈ ಸಿನಿಮಾದಲ್ಲಿ ರಮ್ಯಾ ನಟಿಸುತ್ತಿಲ್ಲ. ರಮ್ಯಾ ಫೋಟೋವನ್ನು ನಿರ್ದೇಶಕ ವಿಜಯ್ ಪ್ರಸಾದ್ ಈ ಚಿತ್ರಕ್ಕಾಗಿ ಬಳಸಿಕೊಂಡಿದ್ದಾರೆ.
ಬಹಳ ದಿನಗಳಿಂದ ಎಲ್ಲೂ ಕಾಣಿಸಿಕೊಳ್ಳದ ನಟಿ, ಮಾಜಿ ಸಂಸದೆ ರಮ್ಯಾ ಇದ್ದಕ್ಕಿದ್ದಂತೆ ನಿರ್ದೇಶಕ ವಿಜಯ್ಪ್ರಸಾದ್ ಅವರ 'ಪರಿಮಳ ಲಾಡ್ಜ್'ನಲ್ಲಿ ಪ್ರತ್ಯಕ್ಷವಾಗಿದ್ದಾರೆ. ಈ ಹಿಂದೆ ವಿಜಯ್ ಅವರೇ ನಿರ್ದೇಶಿಸಿದ್ದ 'ನೀರ್ದೋಸೆ' ಸಿನಿಮಾದಿಂದ ರಮ್ಯಾ ಹೊರಬಂದಿದ್ದರು. ಇದೀಗ 'ಪರಿಮಳ ಲಾಡ್ಜ್' ಸಿನಿಮಾದಲ್ಲಿ ರಮ್ಯಾ ಪೋಟೋವನ್ನು ಬಳಸಿಕೊಳ್ಳಲಾಗಿದೆ. ಈ ಸಿನಿಮಾ ರಮ್ಯಾ ಪೋಟೋದೊಂದಿಗೆ ಆರಂಭ ಆಗುತ್ತಂತೆ. ಟೀಸರ್ ನೋಡಿದಾಗ ಟೇಬಲ್ ಮೇಲೆ ನೀವು ರಮ್ಯಾ ಪೋಟೋವನ್ನು ಗಮನಿಸಬಹುದು. ಇನ್ನೊಂದು ಕಡೆ ನಿರ್ದೇಶಕ ವಿಜಯ್ ಪ್ರಸಾದ್ ರಮ್ಯಾ ಪೋಟೋವನ್ನು ಬಳಸಿಕೊಂಡು ಸಿನಿಮಾವನ್ನು ಮೇಲೆ ತರಲು ಪ್ರಯತ್ನಿಸುತ್ತಿದ್ದಾರೆ ಎಂಬ ಗುಸುಗುಸು ಆರಂಭವಾಗಿದೆ.
ಆದರೆ ಈ ಬಗ್ಗೆ ವಿಜಯ್ ಪ್ರಸಾದ್ ಹೇಳುವುದೇ ಬೇರೆ. ಇದರಲ್ಲಿ ಯಾವುದೇ ಗಿಮಿಕ್ ಇಲ್ಲ. ಪೋಟೋ ಬಗ್ಗೆ ರಮ್ಯಾ ಕೇಳಿದರೆ ನಾನು ಉತ್ತರ ಕೊಡುತ್ತೇನೆ ಎಂದು ವಿಜಯ್ ಪ್ರಸಾದ್ ಹೇಳುತ್ತಾರೆ. ಈ ಸಿನಿಮಾರಂಗದಲ್ಲಿ ಯಾರೂ ಮಿತ್ರರಲ್ಲ..ಯಾರೂ ಶತ್ರುಗಳಲ್ಲ ಎನ್ನೋದು ವಿಜಯ ಪ್ರಸಾದ್ ಮಾತು. ಸಿನಿಮಾದಲ್ಲಿ ರಮ್ಯಾ ಪೋಟೋ ಏಕೆ ಬಳಸಿಕೊಂಡಿದ್ದೇವೆ ಎಂಬುದನ್ನು ನೀವು ತಿಳಿಯಲು ಸಿನಿಮಾ ನೋಡಬೇಕು ಎನ್ನುತ್ತಾರೆ ವಿಜಯ್. ಇನ್ನು ರಮ್ಯಾ ಅಭಿನಯಿಸಿದ್ದ ವಿಜಯ್ ಪ್ರಸಾದ್ ನಿರ್ದೇಶನದ 'ಸಿದ್ಲಿಂಗು' ಸಿನಿಮಾ ಯಶಸ್ಸು ಕಂಡಿತ್ತು. ಇದೇ ಸಕ್ಸಸ್ ಖುಷಿಯಲ್ಲಿ ಸೆಟ್ಟೇರಿದ ಚಿತ್ರವೇ 'ನೀರ್ದೋಸೆ'. ಆದ್ರೆ ಈ ಸಿನಿಮಾದಿಂದ ರಮ್ಯಾ ಹೊರ ಬಂದರೂ ಕೂಡಾ ನಿರ್ದೇಶಕ ವಿಜಯ ಪ್ರಸಾದ್ ಮಾತ್ರ ಇನ್ನೂ ರಮ್ಯಾ ಅವರನ್ನು ಬಿಡುತ್ತಿಲ್ಲ ಎನ್ನುವುದು ವಿಪರ್ಯಾಸ.