ಕನ್ನಡ ಚಿತ್ರರಂಗದಲ್ಲಿ ನಟಿಯಾಗಿ ಮಿಂಚಿದ ಅಮೂಲ್ಯ ತನ್ನದೇ ಅಭಿಮಾನಿ ಬಳಗ ಹೊಂದಿದ್ದಾರೆ. ಆಗಾಗ ಸಾಮಾಜಿಕ ಜಾಲತಾಣದಲ್ಲಿ ಗಮನ ಸೆಳೆಯುವ ಅವರೀಗ ತಾಯಿ ಆಗುತ್ತಿರುವ ಸಂತಸದಲ್ಲಿದ್ದಾರೆ. ಪತಿ ಜಗದೀಶ್ ಜೊತೆ ಸ್ಪೆಷಲ್ ಫೋಟೋ ಶೂಟ್ ಮಾಡಿಸುವ ಮೂಲಕ ಸೋಶಿಯಲ್ ಮೀಡಿಯಾದಲ್ಲಿ ಅಮೂಲ್ಯ ಗುಡ್ ನ್ಯೂಸ್ ಹಂಚಿಕೊಂಡಿದ್ದಾರೆ.
ಉದ್ಯಮಿ ಜಗದೀಶ್ ಜೊತೆ ನಟಿ ಅಮೂಲ್ಯ 2017ರಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟರು. ಮದುವೆ ಆಗಿ ನಾಲ್ಕು ವರ್ಷಗಳ ಬಳಿಕ ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿ ಸುದ್ದಿ ಕೊಟ್ಟಿದ್ದಾರೆ. ಈಗ ಈ ದಂಪತಿ ತಮ್ಮ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. 'ನಾವೀಗ ಕೇವಲ ಇಬ್ಬರಲ್ಲ..' ಎಂಬ ಕ್ಯಾಪ್ಷನ್ ಮೂಲಕ ಅಮೂಲ್ಯ ಸಂತೋಷದ ವಿಚಾರವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಈ ಶುಭಸುದ್ದಿ ಹಂಚಿಕೊಳ್ಳಲು ಅಮೂಲ್ಯ ಹಾಗು ಜಗದೀಶ್ ಮಾಡಿಸಿರುವ ಫೋಟೋಶೂಟ್ ಸಖತ್ ಗಮನ ಸೆಳೆಯುತ್ತಿದೆ.