ಕರ್ನಾಟಕ

karnataka

ETV Bharat / sitara

ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ನಟಿ ಅಮೂಲ್ಯ.. - ಮಗುವಿನ ನಿರೀಕ್ಷೆಯಲ್ಲಿ ನಟಿ ಅಮೂಲ್ಯ

ಇತ್ತೀಚೆಗಷ್ಟೇ ಅಮೂಲ್ಯ ಹಾಗೂ ಜಗದೀಶ್ ಬೇಬಿ ಬಂಪ್​ ಫೋಟೋಶೂಟ್ ಮಾಡಿ ಗಮನ ಸೆಳೆದಿದ್ದರು. ಇಂದು ಖಾಸಗಿ ರೆಸಾರ್ಟ್​ವೊಂದರಲ್ಲಿ ಸೀಮಂತ ಶಾಸ್ತ್ರ ನೆರವೇರಿತು.

actress-amulya-baby-shower-program-in-bengaluru
ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ನಟಿ ಅಮೂಲ್ಯ

By

Published : Jan 20, 2022, 7:49 PM IST

Updated : Jan 20, 2022, 9:35 PM IST

ಕನ್ನಡ ಚಿತ್ರರಂಗದಲ್ಲಿ ಬಾಲ ನಟಿಯಾಗಿ ಸಾಕಷ್ಟು ಸಿನಿಮಾಗಳಲ್ಲಿ ನಟಿಸಿ, ಬಳಿಕ 'ಚೆಲುವಿನ ಚಿತ್ತಾರ' ಸಿನಿಮಾದಿಂದ ಹೀರೋಯಿನ್ ಆದ ನಟಿ ಅಮೂಲ್ಯ. ಚಿಕ್ಕ ವಯಸ್ಸಿನಲ್ಲೇ ಸ್ಟಾರ್ ನಟಿಯಾಗಿ ಮಿಂಚುತ್ತಿದ್ದ ಸಮಯದಲ್ಲಿ, 2017ರಲ್ಲಿ ರಾಜಕೀಯ ಹಿನ್ನೆಲೆಯ ಕುಟುಂಬದವರಾದ ಜಗದೀಶ್​ ಜೊತೆ ಅಮೂಲ್ಯ ಹಸೆಮಣೆ ಏರಿದ್ದರು. ಈಗ ಈ ದಂಪತಿ ಮೊದಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಸೀಮಂತ ಶಾಸ್ತ್ರದ ಸಂಭ್ರಮದಲ್ಲಿ ಅಮೂಲ್ಯ

ಇತ್ತೀಚೆಗಷ್ಟೇ ಅಮೂಲ್ಯ ಹಾಗೂ ಜಗದೀಶ್ ಬೇಬಿ ಬಂಪ್​ ಫೋಟೋಶೂಟ್ ಮಾಡಿ ಗಮನ ಸೆಳೆದಿದ್ದರು. ಇಂದು ಖಾಸಗಿ ರೆಸಾರ್ಟ್​ವೊಂದರಲ್ಲಿ ಸೀಮಂತ ಶಾಸ್ತ್ರ ಮಾಡಲಾಗಿದೆ. ಏಳು ತಿಂಗಳ ಗರ್ಭೀಣಿಯಾಗಿರುವ ಅಮೂಲ್ಯಗೆ ಅಲಂಕೃತ ಹಸಿರು ಸೆಟ್​​ನಲ್ಲಿ ಅದ್ಧೂರಿಯಾಗಿ ಸೀಮಂತ ಕಾರ್ಯಕ್ರಮ ನಡೆದಿದೆ.

ನಟಿ ಅಮೂಲ್ಯ ಸೀಮಂತ ಶಾಸ್ತ್ರ

ಜಾಹೀರಾತು:ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ಸೀಮಂತ ಶಾಸ್ತ್ರದಲ್ಲಿ ಅಮೂಲ್ಯ ಹಾಗೂ ಜಗದೀಶ್ ಕುಟುಂಬದವರು, ಆತ್ಮೀಯ ಸ್ನೇಹಿತರು ಮಾತ್ರ ಭಾಗವಹಿಸಿದ್ದಾರೆ. ಗಣೇಶ್​, ಯಶ್​, ಲವ್ಲೀ ಸ್ಟಾರ್​ ಪ್ರೇಮ್​, ಕೃಷ್ಣ ಅಜಯ್​ ರಾವ್​, ದುನಿಯಾ ವಿಜಯ್​, ಬಹುಭಾಷೆ ನಟ ಪ್ರಕಾಶ್ ರೈ ಸೇರಿದಂತೆ ಸ್ಟಾರ್ ನಟರ ಜೊತೆ ಅಮೂಲ್ಯ ಅಭಿನಯಿಸಿದ್ದಾರೆ.

ಅಮೂಲ್ಯ ಫೋಟೋಶೂಟ್

2017ರಲ್ಲಿ ಜಗದೀಶ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಅಮೂಲ್ಯ, ಬಳಿಕ ಯಾವುದೇ ಸಿನಿಮಾ ಒಪ್ಪಿಕೊಂಡಿರಲಿಲ್ಲ. ಈಗ ಅವರು ಸದ್ಯದಲ್ಲೇ ತಾಯಿಯಾಗುವ ಸಂಭ್ರಮದಲ್ಲಿದ್ದಾರೆ.

ಅಮೂಲ್ಯ ಫೋಟೋಶೂಟ್

ಇದನ್ನೂ ಒದಿ:ಹಿಮಾಲಯದಿಂದ ಅಪ್ಪು ಸಮಾಧಿವರೆಗೆ 3,350 ಕಿ.ಮೀ ಸೈಕಲ್ ಯಾತ್ರೆ: ಅಭಿಮಾನ ಕಂಡು ರಾಘಣ್ಣ ಭಾವುಕ..

Last Updated : Jan 20, 2022, 9:35 PM IST

ABOUT THE AUTHOR

...view details