ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ 25ನೇ ಸಿನಿಮಾ 'ಪ್ರೇಮಂ ಪೂಜ್ಯಂ'ಕ್ಕೆ ನಾಯಕಿಯಾಗಿ ಬೆಂಗಾಲಿ ಬೆಡಗಿ ಐಂದ್ರಿತಾ ರೇ ಫೈನಲ್ ಆಗಿದ್ದಾರೆ. ಈ ಗುಡ್ ನ್ಯೂಸ್ನ್ನು ಸ್ವತಃ ಐಂದ್ರಿತಾ ರೇ ಕನ್ಫರ್ಮ್ ಮಾಡಿದ್ದಾರೆ.
ಮದುವೆ ನಂತ್ರ ಪತ್ತೆನೇ ಇಲ್ಲ ಅಂತಾ ಕೇಳಿದ್ರೆ...ತುಂಟ ಉತ್ತರ ಕೊಟ್ರು ಐಂದ್ರಿತಾ - undefined
ನಟಿ ಐಂದ್ರಿರಾ ರೇ ಮದುವೆ ನಂತ್ರ ಪ್ರೇಮಂ ಪೂಜ್ಯಂ ಚಿತ್ರ ಒಪ್ಪಿಕೊಂಡಿದ್ದಾರೆ. ಈ ಚಿತ್ರಕ್ಕೆ ನೆನಪಿರಲಿ ಪ್ರೇಮ್ ನಾಯಕ. ಇದು ಇವರ 25 ನೇ ಸಿನಿಮಾ.
ಹೌದು, ಇಂದು ಬರ್ತ್ ಡೇ ಸಂಭ್ರಮದಲ್ಲಿರುವ ಆ್ಯಂಡಿ, ಅಭಿಮಾನಿಗಳಿಗೆ ಸ್ವೀಟಾದ ಸುದ್ದಿಯೊಂದನ್ನು ಕೊಟ್ರು. ಮದುವೆ ನಂತ್ರ ಎಲ್ಲೂ ಕಾಣಿಸಿಲ್ಲ ಎಂಬ ಮಾಧ್ಯಮಗಳ ಪ್ರಶ್ನೆಗೆ ಹನಿಮೂನ್ನಲ್ಲಿ ಬ್ಯುಸಿಯಾಗಿದ್ದೆ ಎಂದು ತುಂಟ ಉತ್ತರ ನೀಡಿದ್ರು. ಮಾತು ಮುಂದುವರೆಸಿದ ಪಾರಿಜಾತದ ಚೆಲುವೆ, ಕಳೆದ ವರ್ಷ ಎರಡು ಚಿತ್ರಗಳಲ್ಲಿ ನಟಿಸಿದೆ. ಈಗ ಈ ಎರಡು ಚಿತ್ರಗಳು ರಿಲೀಸ್ಗೆ ರೆಡಿಯಾಗಿವೆ. ಅಲ್ಲದೆ ಗರುಡ ಎಂಬ ಚಿತ್ರದಲ್ಲಿ ಹಾಗೂ ಲವ್ಲಿ ಸ್ಟಾರ್ ಪ್ರೇಮ್ ಅವರ 25ನೇ ಚಿತ್ರದಲ್ಲಿ ನಾಯಕಿಯಾಗಿ ನಟಿಸುತ್ತಿದ್ದೇನೆ ಎಂದು ಹೇಳಿದ್ರು. ಅಲ್ಲದೆ, ಮದುವೆಯ ನಂತ್ರ ನನ್ನ ಸಿನಿ ಕೆರಿಯರ್ ಗ್ರೋತ್ ಆಗುತ್ತೆ ಎಂದು ಕೊಂಡಿದ್ದೀನಿ ಎಂದ್ರು.
ಇನ್ನು ಪ್ರೇಮ್ ಅವರ ಇಪ್ಪತೈದನೆಯ ಚಿತ್ರವನ್ನು ಹೊಸ ನಿರ್ದೇಶಕ, ವೃತ್ತಿಯಲ್ಲಿ ವೈದ್ಯ ಡಾ.ರಾಘವೇಂದ್ರ ಆ್ಯಕ್ಷನ್ ಕಟ್ ಹೇಳಲು ರೆಡಿಯಾಗಿದ್ದಾರೆ. ಕೇದಂಬಾಡಿ ಕ್ರಿಯೇಷನ್ಸ್ ಬ್ಯಾನರ್ನಡಿ ಡಾ.ರಕ್ಷಿತ ಕೇದಂಬಾಡಿ ಹಾಗೂ ಡಾ,ರಾಜಕುಮಾರ್ ಜಾನಕಿರಾಮನ್ ಸಿನಿಮಾ ನಿರ್ಮಾಣ ಮಾಡ್ತಿದ್ದಾರೆ.