ಕರ್ನಾಟಕ

karnataka

ETV Bharat / sitara

ಡೆಡ್ಲಿ ಸೋಮನ ಜೊತೆಯಾದ ಅದಿತಿ ಪ್ರಭುದೇವ - Adithi prabhudeva

ಶ್ಯಾನೆ ಟಾಪ್​ ಆಗವ್ಳೆ ಖ್ಯಾತಿಯ ನಟಿ ಅದಿತಿ ಪ್ರಭುದೇವ ಇದೀಗ ಸಾಲು ಸಾಲು ಚಿತ್ರಗಳಲ್ಲಿ ಬ್ಯುಸಿಯಾಗಿದ್ದು, ಈ ನಡುವೆ ಡೆಡ್ಲಿ ಸೋಮ ಖ್ಯಾತಿಯ ಆದಿತ್ಯ ಜೊತೆ ಹೊಸ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದಾರೆ.

Aditya
ಆದಿತ್ಯ-ಅದಿತಿ ಪ್ರಭುದೇವ

By

Published : Dec 31, 2020, 11:43 AM IST

ಈಗಾಗಲೇ ಅದಿತಿ ಪ್ರಭುದೇವ ತ್ರಿಬಲ್ ರೈಡಿಂಗ್, ಭಗವಾನ್ ಶ್ರೀಕೃಷ್ಣ ಪರಮಾತ್ಮ, ಗಜಾನನ ಆ್ಯಂಡ್ ಗ್ಯಾಂಗ್ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸುತ್ತಿದ್ದಾರೆ. ಇನ್ನು ಅದಿತಿ ನಟಿಸಿರುವ ಒಂದಿಷ್ಟು ಚಿತ್ರಗಳು ಬಿಡುಗಡೆಯಾಗಬೇಕಿದೆ. ಈ ಮಧ್ಯೆ, ಅದಿತಿ ಇನ್ನೊಂದು ಹೊಸ ಚಿತ್ರವನ್ನು ಒಪ್ಪಿಕೊಂಡಿದ್ದಾರೆ. ಈ ಬಾರಿ ಅವರು ನಾಯಕಿಯಾಗುತ್ತಿರುವುದು ಯಾರಿಗೆ ಗೊತ್ತಾ? ಡೆಡ್ಲಿ ಸೋಮ ಖ್ಯಾತಿಯ ಆದಿತ್ಯಗೆ.

ಆದಿತ್ಯ-ಅದಿತಿ ಪ್ರಭುದೇವ

ಹಿರಿಯ ನಿರ್ದೇಶಕ ಎಸ್. ನಾರಾಯಣ್ ನಿರ್ದೇಶನದಲ್ಲಿ ಆದಿತ್ಯ ಒಂದು ಚಿತ್ರದಲ್ಲಿ ನಟಿಸುತ್ತಾರೆ ಎಂಬುದು ಲಾಕ್‍ಡೌನ್ ಸಮಯದ ಸುದ್ದಿ. ಆ ಸಂದರ್ಭದಲ್ಲಿ ನಾರಾಯಣ್ ಅವರನ್ನು ಕೇಳಿದರೆ, ಚಿತ್ರ ಮಾಡುತ್ತಿರುವುದು ಹೌದು ಎಂದು ಹೇಳಿದ್ದರು. ಸದ್ಯಕ್ಕೆ ಚಿತ್ರದ ಬಗ್ಗೆ ಏನೂ ಹೇಳುವುದಕ್ಕೆ ಸಾಧ್ಯವಿಲ್ಲ ಎಂದಿದ್ದರು.

ಇದೀಗ ಚಿತ್ರದ ಪ್ರಿ-ಪ್ರೊಡಕ್ಷನ್ ಕೆಲಸಗಳು ಮುಗಿದಿದ್ದು, ಜನವರಿಯಿಂದ ಈ ಚಿತ್ರ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ. ಚಿತ್ರದಲ್ಲಿ ಮುಂಚೆ ಆದಿತ್ಯ ನಟಿಸುತ್ತಾರೆ ಎಂಬ ಸುದ್ದಿ ಇತ್ತು. ಇದೀಗ ಆದಿತ್ಯಗೆ ನಾಯಕಿಯಾಗಿ ಅದಿತಿ ಸಹ ಚಿತ್ರತಂಡ ಸೇರಿಕೊಂಡಿದ್ದಾರೆ.

ಅದಿತಿ ಪ್ರಭುದೇವ

ಅಂದಹಾಗೆ, ಈ ಚಿತ್ರದ ಹೆಸರೇನು ಎಂಬ ಪ್ರಶ್ನೆ ಸಹಜವಾಗಿಯೇ ಬರಬಹುದು. ಆ ಪ್ರಶ್ನೆಗೆ ಜನವರಿ ಒಂದರಂದು ಉತ್ತರ ಸಿಗಲಿದೆ. ಸದ್ಯಕ್ಕೆ ಚಿತ್ರವನ್ನು ಗೌಪ್ಯವಾಗಿಟ್ಟಿರುವ ಎಸ್. ನಾರಾಯಣ್, ಚಿತ್ರದ ಶೀರ್ಷಿಕೆ ಸೇರಿದಂತೆ ಒಂದಿಷ್ಟು ವಿಷಯಗಳನ್ನು ಜನವರಿ ಒಂದರ ಸಂಜೆ ಬಹಿರಂಗ ಮಾಡಲಿದ್ದಾರೆ. ಅಷ್ಟೇ ಅಲ್ಲ, ಚಿತ್ರದ ಬಗ್ಗೆ ಇನ್ನಷ್ಟು ವಿಷಯಗಳನ್ನು ಅವರು ಇದೇ ಸಂದರ್ಭದಲ್ಲಿ ಹಂಚಿಕೊಳ್ಳುವ ಸಾಧ್ಯತೆ ಇದೆ.

ABOUT THE AUTHOR

...view details