ಯಶ್ ಅಭಿಮಾನಿಗಳ ಮೆಸೇಜ್ಗೆ ನಟಿ ಸಂಗೀತಾ ಭಟ್ ಸೋಷಿಯಲ್ ಮೀಡಿಯಾದಲ್ಲಿ ಬೇಸರ ವ್ಯಕ್ತಪಡಿಸಿದ್ದಾರೆ. ಕೆಲವು ಕಿಡಿಗೇಡಿಗಳು ಯಶ್ ಫ್ಯಾನ್ಸ್ ಅಂತ ಹೆಸರೇಳಿಕೊಂಡು ಅಶ್ಲೀಲ ಪದಗಳಿಂದ ಸಂಗೀತಾ ಭಟ್ ಅವರನ್ನು ನಿಂದಿಸುತ್ತಿದ್ದು, ಸೋಷಿಯಲ್ ಮೀಡಿಯಾದಲ್ಲಿ ನಟಿ ಸಂಗೀತಾ ಭಟ್ ನೋವು ತೋಡಿಕೊಂಡಿದ್ದಾರೆ.
ಯಶ್ ಅಭಿಮಾನಿಗಳು ಅಂತಾ ಹೇಳಿಕೊಂಡು ಕೆಲವರು ನನಗೆ ಅಶ್ಲೀಲ ಸಂದೇಶ ಕಳಸ್ತಿದ್ದಾರೆ: ನಟಿ ಆರೋಪ - Actress accused she is getting Vulgar Messages from Yash fans
ಯಶ್ ಅಭಿಮಾನಿಗಳು ನಮಗೆ ಮಾನಸಿಕವಾಗಿ ನೋವು ಕೊಡುತ್ತಿದ್ದಾರೆ ಎಂದು ನಟಿ ಸಂಗೀತಾ ಭಟ್ ಆರೋಪ ಮಾಡಿದ್ದಾರೆ. ಅಲ್ಲದೆ ಈ ಹುಚ್ಚಾಟಕ್ಕೆ ಯಶ್ ಬುದ್ಧಿ ಹೇಳಬೇಕು ಎಂದು ಕೂಡಾ ಮನವಿ ಮಾಡಿದ್ದಾರೆ.
![ಯಶ್ ಅಭಿಮಾನಿಗಳು ಅಂತಾ ಹೇಳಿಕೊಂಡು ಕೆಲವರು ನನಗೆ ಅಶ್ಲೀಲ ಸಂದೇಶ ಕಳಸ್ತಿದ್ದಾರೆ: ನಟಿ ಆರೋಪ](https://etvbharatimages.akamaized.net/etvbharat/prod-images/768-512-4855032-thumbnail-3x2-giri.jpg)
ಯಶ್
ಯಶ್ ಅವರು ತಮ್ಮ ಅಭಿಮಾನಿಗಳ ಈ ಹುಚ್ಚಾಟಕ್ಕೆ ಬುದ್ಧಿ ಹೇಳಬೇಕು ಅಂತ ಮನವಿ ಮಾಡಿದ್ದಾರೆ. ಇತ್ತೀಚೆಗಷ್ಟೇ ಇದೇ ವಿಚಾರಕ್ಕೆ ಸಂಗೀತಾ ಭಟ್ ಪತಿ ಸುದರ್ಶನ್ ಕೂಡಾ ಅಸಮಾಧಾನ ವ್ಯಕ್ತಪಡಿಸಿದ್ದರು. ಎರಡು ವರ್ಷಗಳ ಹಿಂದೆ ಯಶ್ ಅವರ ಡೈಲಾಗ್ ಒಂದನ್ನು ಬಳಸಿ ಸಂಗೀತ ಪತಿ ಸುದರ್ಶನ್ ರಂಗಪ್ರಸಾದ್ ಒಂದು ಸ್ಟೇಜ್ ಶೋ ಮಾಡಿದ್ದರು. ಹಾಸ್ಯವನ್ನು ಹಾಸ್ಯವಾಗಿ ಸ್ವೀಕರಿಸದೆ ಆ ಶೋ ಒಂದನ್ನೇ ಗುರಿಯಾಗಿಸಿಕೊಂಡು ನಮಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ.
Last Updated : Oct 24, 2019, 5:02 PM IST