ಕನ್ನಡತಿ ಧಾರಾವಾಹಿಯ ಹರ್ಷ ಪಾತ್ರಧಾರಿ ಕಿರಣ್ ಕೊರೊನಾ ಬಗ್ಗೆ ಜಾಗೃತಿಯ ಸಂದೇಶ ಸಾರಿದ್ದಾರೆ. ಶೂಟಿಂಗ್ ಸಮಯದಲ್ಲೂ ಮಾಸ್ಕ್ ಧರಿಸಿರುವ ಕಿರಣ್ ರಾಜ್ ಕಾಯಿಲೆಯಿಂದ ಪಾರಾಗಬೇಕು, ಕಾಯಿಲೆ ಬಾರದಂತೆ ತಡೆಯಬೇಕು ಎಂದರೆ ಸುರಕ್ಷತಾ ಕ್ರಮ ಪಾಲಿಸುವುದು ತುಂಬಾ ಮುಖ್ಯ. ಪದೇ ಪದೆ ಕೈ ತೊಳೆಯಬೇಕು, ಕೈ ತೊಳೆಯುವಾಗ ಸ್ಯಾನಿಟೈಸರ್ ಬಳಸಲು ಮರೆಯದಿರಿ ಎಂದು ಹೇಳಿದ್ದಾರೆ.
ಕೊರೊನಾ ಕಾಟ: ಇದು ನಿಜವಾದ ಬಿಗ್ ಬಾಸ್ ಆಟ ಎಂದ ಆರ್ಜೆ ಪೃಥ್ವಿ - ವಿಜಯ್ ಸೂರ್ಯ
ಬಿಗ್ ಬಾಸ್ ಮೂಲಕ ಕಿರುತೆರೆಗೆ ಪರಿಚಿತರಾದ ಆರ್ಜೆ ಪೃಥ್ವಿ ಕೂಡ ತಮ್ಮ ಇನ್ಸ್ಟಾಗ್ರಾಂ ಸ್ಟೇಟಸ್ನಲ್ಲಿ ಕೊರೊನಾ ಬಗ್ಗೆ ಹೇಳಿದ್ದಾರೆ. ಇದು ನಿಜವಾದ ಬಿಗ್ ಬಾಸ್ ಆಟ. ಕುಟುಂಬಗಳ ಸದಸ್ಯರು ಇದೇ ಮೊದಲ ಬಾರಿಗೆ ಮನೆಯೊಳಗೆ ಲಾಕ್ ಆಗಿದ್ದಾರೆ ಎಂದು ಬರೆದುಕೊಂಡಿದ್ದಾರೆ.
ಕೊರೊನಾ ಭೀತಿ : ಇದು ನಿಜವಾದ ಬಿಗ್ ಬಾಸ್ ಆಟ ಅಂತಿದ್ದಾರೆ ಆರ್ಜೆ ಪೃಥ್ವಿ
ಇನ್ನು ಪ್ರೇಮಲೋಕ ಧಾರಾವಾಹಿಯಲ್ಲಿ ಸೂರ್ಯಕಾಂತ್ ಆಗಿ ಅಭಿನಯಿಸುತ್ತಿರುವ ವಿಜಯ್ ಸೂರ್ಯ, ಸದಾ ಕಾಲ ಸುರಕ್ಷತೆಯಿಂದ ಇರಿ ಎಂದು ಮನವಿ ಮಾಡಿದ್ದು ತಾವು ಕೂಡ ಮಾಸ್ಕ್ ಮತ್ತು ಕೈಗೆ ಗ್ಲೌಸ್ ಧರಿಸಿರುವ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಹಾಕಿದ್ದಾರೆ.