ಲವ್ ಮಾಕ್ ಟೈಲ್ ಸಿನಿಮಾ ಮೂಲಕ, ಸ್ಯಾಂಡಲ್ ವುಡ್ನಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಸ್ಟಾರ್ ಜೋಡಿ ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್, ಸದ್ಯ ಜಾಲಿ ಮೂಡನಲ್ಲಿದ್ದು, ಲಡಾಖ್ನ ಬ್ಯೂಟಿಫುಲ್ ನೇಚರ್ ನಡುವೆ ಎಂಜಾಯ್ ಮಾಡುತ್ತಿದ್ದಾರೆ.
ಲಡಾಖ್ನ ಬ್ಯೂಟಿಫುಲ್ ನೇಚರ್ ನಡುವೆ 'ಮಿಲನ'ರಾದ ಡಾರ್ಲಿಂಗ್ ಕೃಷ್ಣ - ಲವ್ ಮಾಕ್ ಟೈಲ್ ಸಿನಿಮಾ
ಅನ್ಲಾಕ್ ನಂತರ ಲಡಾಖ್ಗೆ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನ ನಾಗರಾಜ್ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಲಡಾಖ್ನ ಬೆಟ್ಟಗಳ ಸಾಲು ಸುಂದರ ಪ್ರಕೃತಿ ಮಧ್ಯ ಕಾಲ ಕಳೆಯುತ್ತಿರುವ ದಂಪತಿ ತಮ್ಮ ಮಧುರ ಕ್ಷಣಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
ಕೃಷ್ಣ ಮತ್ತು ಮಿಲನ ನಾಗರಾಜ್ ಪ್ರೇಮಿಗಳ ದಿನದಂದು ಹಸೆಮಣೆ ಏರಿದರು. ಮದುವೆಯಾದ ಬಳಿಕ ಹನಿಮೂನ್ಗೆ ಮಾಲ್ಡೀವ್ಸ್ಗೆ ಹೋಗಿದ್ದರು. ಅಲ್ಲಿಂದ ಬಂದ ಬಳಿಕ, ಲವ್ ಮಾಕ್ ಟೈಲ್-2 ಸಿನಿಮಾದಲ್ಲಿ ಬ್ಯುಸಿಯಾಗಬೇಕು ಅಂದುಕೊಳ್ಳುವಷ್ಟರಲ್ಲಿ, ಕೊರೊನಾ ಎರಡನೇ ಅಲೆಯಿಂದ ಇಡೀ ಕರ್ನಾಟಕ ಲಾಕ್ ಡೌನ್ ಆಗಿತ್ತು. ಈ ಸಮಯದಲ್ಲಿ ಮಿಲನಾ ನಾಗರಾಜ್ ಹಾಗೂ ಡಾರ್ಲಿಂಗ್ ಕೃಷ್ಣ ಮನೆಯಲ್ಲೇ ಕುಟುಂಬದೊಂದಿಗೆ ಕಾಲ ಕಳೆಯುತ್ತಿದ್ದರು.
ಅನ್ಲಾಕ್ ನಂತರ ಲಡಾಖ್ಗೆ ಹಾರಿರುವ ಸೆಲೆಬ್ರಿಟಿ ಜೋಡಿ ಟ್ರಿಪ್ ಎಂಜಾಯ್ ಮಾಡುತ್ತಿದ್ದಾರೆ. ಲಡಾಖ್ನ ಬೆಟ್ಟಗಳ ಸಾಲು ಸುಂದರ ಪ್ರಕೃತಿ ಮಧ್ಯ ಕಾಲ ಕಳೆಯುತ್ತಿರುವ ದಂಪತಿ ತಮ್ಮ ಮಧುರ ಕ್ಷಣಗಳನ್ನ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಸದ್ಯ ಲವ್ ಮಾಕ್ಟೈಲ್-2 ಚಿತ್ರದ ತಯಾರಿ ಹಂತದಲ್ಲಿದೆ.