ಕರ್ನಾಟಕ

karnataka

ETV Bharat / sitara

ಉಪ ಚುನಾವಣೆ ನಡೆದ್ರೆ ಪ್ರಜಾಕೀಯ ಸ್ಪರ್ಧೆ: ಅಖಾಡಕ್ಕೆ ಇಳಿತಾರಂತೆ ಉಪ್ಪಿ! - ನಟ ಉಪೇಂದ್ರ

ಅನರ್ಹಗೊಂಡ ಶಾಸಕರ ಕ್ಷೇತ್ರಗಳಲ್ಲಿ ನಡೆಯುವ ಉಪ ಚುನಾವಣೆ ಅಖಾಡಕ್ಕೆ ಧುಮುಕಲು ಪ್ರಜಾಕೀಯ ಪಕ್ಷವು ರೆಡಿಯಾಗಿದೆ. ಅಲ್ಲದೆ, ನಟ ಉಪೇಂದ್ರ ಕೂಡ ಸ್ಪರ್ಧಿಸುವ ಸೂಚನೆ ಸಿಕ್ಕಿದೆ.

ನಟ ಉಪೇಂದ್ರ

By

Published : Aug 2, 2019, 12:24 PM IST

ಬೆಂಗಳೂರು: ರಾಜ್ಯದ ರಾಜಕೀಯ ಬೆಳವಣಿಗೆಯಲ್ಲಿ ಸದ್ಯ ಅನರ್ಹಗೊಂಡಿರುವ ಕಾಂಗ್ರೆಸ್​ ಹಾಗೂ ಜೆಡಿಎಸ್​ ಮಾಜಿ ಶಾಸಕರ ವಿಧಾನಸಭೆ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಯವುದು ಬಹುತೇಕ ಖಚಿತವಾಗಿದ್ದು, ಉಪ್ಪಿಯ ಪ್ರಜಾಕೀಯ ಪಕ್ಷ ಸಹ ಸ್ಪರ್ಧಿಸುವ ಉತ್ಸಾಹ ತೋರಿದೆ.

ಒಂದು ವೇಳೆ ಈ ಕ್ಷೇತ್ರಗಳಲ್ಲಿ ಉಪ ಚುನಾವಣೆ ನಡೆಸುವ ಘೋಷಣೆಯಾದಲ್ಲಿ ಅಖಾಡಕ್ಕೆ ಧುಮುಕಲು ಪ್ರಜಾಕೀಯ ಪಕ್ಷವು ರೆಡಿಯಾಗಿದೆ. ಅಲ್ಲದೆ, ಸ್ವತಃ ಉಪೇಂದ್ರ ಕೂಡ ಸ್ಪರ್ಧಿಸುವ ಸೂಚನೆ ಸಿಕ್ಕಿದೆ. ಈ ವಿಚಾರವನ್ನು ಸೂಪರ್ ಸ್ಟಾರ್ ಉಪೇಂದ್ರ ಅವರೇ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ನಟ ಉಪೇಂದ್ರ ಸುದ್ದಿಗೋಷ್ಠಿ

ಐ ಲವ್ ಯು ಚಿತ್ರದ 50ನೇ ದಿನದ ಸಂಭ್ರಮ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅವರು, ಒಂದು ವೇಳೆ ಉಪ ಚುನಾವಣೆ ನಡೆದರೆ ಖಂಡಿತವಾಗಲೂ ಪ್ರಜಾಕೀಯ ಅಭ್ಯರ್ಥಿಗಳನ್ನು ಕಣಕ್ಕಿಳಿಸುತ್ತೇವೆ ಎಂದು ತಿಳಿಸಿದರು. ಯಾವುದಾದರೂ ಕ್ಷೇತ್ರದಿಂದ ಉಪೇಂದ್ರ ಸ್ಪರ್ಧಿಸುತ್ತಾರೆಯೇ? ಎಂಬ ಪ್ರಶ್ನೆಗೆ ಉತ್ತರಿಸಿದವರು ಅವರು, ಖಂಡಿತವಾಗಿಯೂ ಸಾಧ್ಯತೆ ಇದೆ ಎಂದರು. ಆದರೆ ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆ ಎಂಬ ಗುಟ್ಟು ಬಿಟ್ಟುಕೊಡಲಿಲ್ಲ.

ಅಲ್ಲದೆ ಪಕ್ಷಾಂತರಿಗಳ ವಿರುದ್ಧ ಮಾತನಾಡಿದ ಉಪೇಂದ್ರ, ಒಂದು ಪಕ್ಷದ ಚಿನ್ಹೆ ಮತ್ತು ಐಡಿಯಾಲಜಿ ಮೇಲೆ ನಿಂತ ಮೇಲೆ ಆ ಪಕ್ಷದ ಪರವಾಗಿ ನಿಲ್ಲಬೇಕು. ಒಂದು ವೇಳೆ ಅವರಿಗೆ ಆಂತರಿಕ ಸ್ವಾತಂತ್ರ್ಯ ಅನ್ನೋದು ಬೇಕಾಗಿದ್ದಾರೆ ಇಂಡಿಪೆಂಡೆಂಟ್ ಅಭ್ಯರ್ಥಿಯಾಗಿ ನಿಂತು ಚುನಾವಣೆ ಎದುರಿಸಬೇಕು. ಅದನ್ನು ಬಿಟ್ಟು ಒಂದು ಪಕ್ಷದಿಂದ ಗೆದ್ದು, ಮತ್ತೊಂದು ಪಕ್ಷಕ್ಕೆ ಬೆಂಬಲಿಸುವುದು ತಪ್ಪು ಎಂದು ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ಕೇವಲ 15 ಸೀಟುಗಳಿಂದ ಒಂದು ಸರ್ಕಾರವೇ ಬೀಳುತ್ತೆ ಅಂದ್ರೆ ಅದು ದುರಂತವೇ ಸರಿ. ಈಗ ಪ್ರಜೆಗಳಿಗೆ ಮತ್ತೊಂದು ಅಧಿಕಾರ ಸಿಕ್ಕಿದೆ. ತಮ್ಮ ಮಾತು ಕೇಳುವಂತ ಸೂಕ್ತ ವ್ಯಕ್ತಿಗಳನ್ನು ಗೆಲ್ಲಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ABOUT THE AUTHOR

...view details