ಕರ್ನಾಟಕ

karnataka

ETV Bharat / sitara

ಮಹಾಬಲೀಪುರಂನಲ್ಲಿ ಭೀಕರ ಅಪಘಾತ: ನಟಿ ಯಶಿಕಾ ಆನಂದ್‌ ಆರೋಗ್ಯ ಸ್ಥಿತಿ ಗಂಭೀರ - tamil actress yashika aanand injured news

Actress Yashika Anand: ತಮಿಳು ನಟಿ ಯಶಿಕಾ ಆನಂದ್ ಸಂಚರಿಸುತ್ತಿದ್ದ ಕಾರು ಮಹಾಬಲೀಪುರಂನ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ಅಪಘಾತಕ್ಕೀಡಾಗಿದೆ.

critical
ಅಪಘಾತಕ್ಕೀಡಾದ ಕಾರು

By

Published : Jul 25, 2021, 4:31 PM IST

ಚೆನ್ನೈ:ತಮಿಳು ಬಿಗ್‌ಬಾಸ್‌ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ನಟಿ ಯಶಿಕಾ ಆನಂದ್ ರಸ್ತೆ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದಾರೆ.

ನಟಿ ಯಶಿಕಾ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿರುವುದು.

ಶನಿವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಚೆನ್ನೈನ ಮಹಾಬಲೀಪುರಂನ ಈಸ್ಟ್ ಕೋಸ್ಟ್ ರಸ್ತೆಯಲ್ಲಿ ನಟಿ ಯಶಿಕಾ ತಮ್ಮ ಗೆಳೆಯರ​​ ಜೊತೆ ಪ್ರಯಾಣಿಸುತ್ತಿದ್ದಾಗ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದು ಹಳ್ಳಕ್ಕೆ ಉರುಳಿ ಬಿದ್ದಿತ್ತು.

ತಮಿಳು ನಟಿ ಯಶಿಕಾ ಆನಂದ್

ದುರಂತದಲ್ಲಿ ಸ್ನೇಹಿತೆ ವಲ್ಲಿಚಟ್ಟಿ ಭವಾನಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಯಶಿಕಾ ತೀವ್ರವಾಗಿ ಗಾಯಗೊಂಡಿದ್ದು, ಅವರ ಸ್ಥಿತಿ ಗಂಭೀರವಾಗಿದೆ. ಮಾಮಲ್ಲಾಪುರಂನಿಂದ ಚೆನ್ನೈಗೆ ಹಿಂತಿರುಗುತ್ತಿದ್ದ ವೇಳೆ ದುರ್ಘಟನೆ ಸಂಭವಿಸಿದೆ.

ಕಾರಿನಲ್ಲಿದ್ದ ಇತರರ ಸ್ಥಿತಿ ಸಹ ಚಿಂತಾಜನಕವಾಗಿದ್ದು, ಚೆನ್ನೈನ ಖಾಸಗಿ ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆ ಯಶಿಕಾ ತಂದೆ ದೆಹಲಿಯಿಂದ ಚೆನ್ನೈಗೆ ಧಾವಿಸಿದ್ದಾರೆ. ಘಟನೆ ಸಂಬಂಧ ಮಾಮಲ್ಲಾಪುರಂ ಪೊಲೀಸರು ಪ್ರಕರಣ ದಾಖಲಿಸಿದ್ದು, ತನಿಖೆ ನಡೆಸುತ್ತಿದ್ದಾರೆ.

ಯಶಿಕಾ ಆನಂದ್​ ಧುರುವಂಗಲ್​ ಪತಿನಾರು ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. ಅಲ್ಲದೇ ತಮಿಳಿನ ಬಿಗ್​ಬಾಸ್​​-2 ಸೀಸನ್​​ನಲ್ಲಿ ಸಹ ಭಾಗವಹಿಸಿದ್ದರು.

ABOUT THE AUTHOR

...view details