ಕರ್ನಾಟಕ

karnataka

ETV Bharat / sitara

ಸ್ಟೈಲಿಷ್ ಅವತಾರದಲ್ಲಿ ರಾಕಿ ಬಾಯ್: ಅಭಿಮಾನಿಗಳ ತಲೆಯಲ್ಲಿ ಹುಳಬಿಟ್ಟ ನ್ಯೂ ಲುಕ್

ರಾಕಿಂಗ್ ಸ್ಟಾರ್ ಸ್ಟೈಲಿಷ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಸದ್ಯ ಯಶ್ ಈ ಲುಕ್​ಗೆ ಕಾರಣವೇನು ಎಂಬುದು ಅಭಿಮಾನಿಗಳ ಕುತೂಹಲಕ್ಕೆ ಕಾರಣವಾಗಿದೆ.

By

Published : Jul 7, 2021, 8:18 PM IST

ಸ್ಟೈಲಿಷ್ ಅವತಾರದಲ್ಲಿ ರಾಕಿ ಬಾಯ್
ಸ್ಟೈಲಿಷ್ ಅವತಾರದಲ್ಲಿ ರಾಕಿ ಬಾಯ್

ಕನ್ನಡ ಚಿತ್ರರಂಗ ಅಲ್ಲದೇ ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಭಾರಿ ಡಿಮ್ಯಾಂಡ್ ಹೊಂದಿರುವ ನಟ ರಾಕಿಂಗ್ ಸ್ಟಾರ್ ಯಶ್. ಯಾವಾಗ ಕೆಜಿಎಫ್ ಸಿನಿಮಾ ಭಾರತೀಯ ಚಿತ್ರರಂಗದಲ್ಲಿ ಹೊಸ ದಾಖಲೆ ಬರೆಯಿತೋ ಅಂದಿನಿಂದ ರಾಕಿ ಬಾಯ್ ಸ್ಟಾರ್‌ಡಮ್ ಕೂಡ ನ್ಯಾಷನಲ್ ಮಟ್ಟದಲ್ಲಿದೆ.

ಕೆಜಿಎಫ್ ಚಾಪ್ಟರ್-2 ಸಿನಿಮಾದಲ್ಲಿ ನಟಿಸಿದ ಬಳಿಕ ನಟ ಯಶ್, ಇತ್ತೀಚೆಗಷ್ಟೇ ಹೊಸ ಮನೆಯ ಗೃಹ ಪ್ರವೇಶದ ಸಂಭ್ರಮದಲ್ಲಿದ್ರು. ಇದೀಗ ರಾಕಿಂಗ್ ಸ್ಟಾರ್ ಸ್ಟೈಲಿಷ್ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅಷ್ಟಕ್ಕೂ ಯಶ್ ಇಷ್ಟು ರಾಯಲ್ ಆಗಿ ಕಾಣಿಸಿಕೊಂಡಿದ್ದು, ಮುಂದಿನ ಸಿನಿಮಾ ಯಾವುದೆಂಬ ಕುತೂಹಲ ಕೆರಳಿದೆ.

ಯಶ್

ಆದರೆ ಸಿನಿಮಾ ಜೊತೆ ಜೊತೆಗೆ ಯಶ್ ಸಾಕಷ್ಟು ಜಾಹೀರಾತುಗಳನ್ನು ಮಾಡುತ್ತಿದ್ದಾರೆ. ಈಗ ಮತ್ತೊಂದು ಹೊಸ ಜಾಹೀರಾತಿನಲ್ಲಿ ಯಶ್ ಕಾಣಿಸಿಕೊಳ್ಳುತ್ತಿದ್ದಾರೆ. ಈ ಜಾಹೀರಾತಿನಲ್ಲಿ ರಾಕಿ ಬಾಯ್ ಸಖತ್ ಸ್ಟೈಲಿಷ್ ಆಗಿ ಮಿಂಚಿದ್ದಾರೆ.

ಸದ್ಯ ಯಶ್ ಅಭಿನಯಿಸಿರುವ ಜಾಹೀರಾತು ಯಾವುದು ಅನ್ನೋ ಬಗ್ಗೆ ಮಾಹಿತಿ ಇಲ್ಲ. ಆದರೆ ಈ ಮಾಸ್ಟರ್ ಪೀಸ್ ಯಾಡ್​ನಲ್ಲಿ ನಟಿಸಿರುವ ಕೆಲವೊಂದು ಫೋಟೋಗಳು ರಿವೀಲ್ ಆಗಿದ್ದು. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿವೆ.

ABOUT THE AUTHOR

...view details