ವಿಶ್ವದಾದ್ಯಂತ ಕೊರೊನಾ ಎಂಬ ಹೆಮ್ಮಾರಿಗೆ ಜನರು ತತ್ತರಿಸಿ ಹೋಗಿದ್ದಾರೆ. ಈ ಸಾಂಕ್ರಾಮಿಕ ರೋಗವು ಸಾವಿರಾರು ಜನರ ಉಸಿರು ನಿಲ್ಲಿಸುತ್ತಿದ್ದು, ಇದಕ್ಕೆ ಕಡಿವಾಣ ಹಾಕುವ ದೃಷ್ಟಿಯಿಂದ ಕೇರಳದ ಪೊಲೀಸ್ ಇಲಾಖೆ ಹೊಸ ಹೆಜ್ಜೆ ಇಟ್ಟಿದೆ.
ಕೊರೊನಾ ಜಾಗೃತಿಗೆ ಮುಂದಾದ ರಾಕಿಭಾಯ್! - Kerala Police Department
ದೇಶದಲ್ಲಿ ಕೊರೊನಾ ಮಟ್ಟ ಹಾಕಿದ ರಾಜ್ಯಗಳ ಪೈಕಿ ಕೇರಳ ಮೊದಲ ಸ್ಥಾನದಲ್ಲಿದೆ. ಅಲ್ಲಿನ ರಾಜ್ಯ ಸರ್ಕಾರ ಈ ಕೊರೊನಾವನ್ನ ಹೆಚ್ಚು ಹರಡದಂತೆ ಎಚ್ಚರಿಕೆ ವಹಿಸಿದೆ. ಸದ್ಯ ಕೊರೊನಾ ಎರಡನೇ ಅಲೆಯಿಂದ ಕೇರಳದಲ್ಲಿ ಮತ್ತೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನೆಲೆ ಅದರ ಕಡಿವಾಣಕ್ಕೆ ಮುಂದಾಗಿರುವ ಅಲ್ಲಿನ ಪೊಲೀಸ್ ಇಲಾಖೆ ಸ್ಯಾಂಡಲ್ವುಡ್ನ ನಟನ ಮೊರೆ ಹೋಗಿದೆ.
ಕೆಜಿಎಫ್ ಸಿನಿಮಾ ಮೂಲಕ ಸೌತ್ ಸ್ಟಾರ್ ಆಗಿರುವ ರಾಕಿಂಗ್ ಸ್ಟಾರ್ ಯಶ್ ಅವರನ್ನು ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ರಾಯಭಾರಿಯಾನ್ನಾಗಿ ಮಾಡಲು ನಿರ್ಧರಿಸಿದೆ. ಯಾಕೆಂದರೆ ಯಶ್ ಯೂತ್ ಐಕಾನ್ ಆಗಿದ್ದು, ಕೇರಳದಲ್ಲಿ ದೊಡ್ಡ ಅಭಿಮಾನಿಗಳ ಬಳಗವನ್ನೇ ಹೊಂದಿದ್ದು, ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ಮುಖಕ್ಕೆ ಮಾಸ್ಕ್ ಹಾಕುವ ಮೂಲಕ ಕೇರಳ ಜನರಲ್ಲಿ ಕೊರೊನಾ ಕುರಿತು ಯಶ್ ಜಾಗೃತಿ ಮೂಡಿಸಲಿದ್ದಾರಂತೆ.
ಮಾಸ್ಕ್ ಹಾಕಿರುವ ಫೋಟೋವನ್ನ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ಅಲ್ಲಿನ ಪೊಲೀಸ್ ಇಲಾಖೆ, ಯಶ್ ಅವರು ಕೊರೊನಾ ಜಾಗೃತಿಗಾಗಿ ನಮ್ಮೊಂದಿಗೆ ಕೈಜೋಡಿಸಲಿದ್ದಾರೆ ಎಂದು ಅಲ್ಲಿನ ಅಧಿಕಾರಿಗಳು ಮಾಹಿತಿ ಮಾಹಿತಿ ನೀಡಿದ್ದಾರೆ. ಸದ್ಯ ರಾಕಿಭಾಯ್ ಕೇರಳ ಪೊಲೀಸರ ರಾಯಭಾರಿ ಆಗಿದ್ದು ಕೊರೊನಾ ಕುರಿತು ಜಾಗೃತಿ ಮೂಡಿಸಲು ಮುಂದಾಗಿದ್ದಾರೆ.