ದಕ್ಷಿಣ ಭಾರತದ ಅತೀ ದೊಡ್ಡ ಪ್ರಶಸ್ತಿ ಸೈಮಾ ಅವಾರ್ಡ್ 2019 ಪ್ರಕಟಗೊಂಡಿದ್ದು, ಕನ್ನಡದ ಬ್ಲಾಕ್ ಬಸ್ಟರ್ ಸಿನಿಮಾ ಕೆಜಿಎಫ್ ಪಾರುಪತ್ಯ ಮೆರೆದಿದೆ.
ಪ್ರಶಸ್ತಿಯ ಎಲ್ಲ ವಿಭಾಗಗಳಿಗೂ ನಾಮನಿರ್ದೇಶನಗೊಂಡಿದ್ದ ಕೆಜಿಎಫ್ ಸದ್ಯಕ್ಕೆ ಮೂರು ಪ್ರಶಸ್ತಿಗಳಿಗೆ ಮುತ್ತಿಕ್ಕಿದೆ. ರಾಕಿಂಗ್ ಸ್ಟಾರ್ ಯಶ್ ಕನ್ನಡದ ಅತ್ಯುತ್ತಮ ನಟ ಪ್ರಶಸ್ತಿ ಬಾಚಿಕೊಂಡಿದ್ದರೆ, ಬೆಸ್ಟ್ ಡೈರೆಕ್ಟರ್ ಅವಾರ್ಡ್ಅನ್ನು ನಿರ್ದೇಶಕ ಪ್ರಶಾಂತ್ ನೀಲ್ ಮುಡಿಗೇರಿಸಿಕೊಂಡಿದ್ದಾರೆ. ಕೆಜಿಎಫ್ನಲ್ಲಿ ಯಶ್ ತಾಯಿ ಪಾತ್ರಧಾರಿ ಅರ್ಚನಾ ಅತ್ಯುತ್ತಮ ಸಪೋರ್ಟಿಂಗ್ ರೋಲ್ ಪ್ರಶಸ್ತಿ ಪಡೆದಿದ್ದಾರೆ. ಮೊನ್ನೆಯಷ್ಟೇ ಎರಡು ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಈ ಚಿತ್ರಕ್ಕೆ ಸಂದಿದ್ದವು.