ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಬಾಂಡಿಂಗ್ ಒಂಥಾರಾ ಡಿಫರೆಂಟ್. ಅವರ ಆ ಬಾಂಡ್ನಿಂದಲೇ ಹೆಚ್ಚು ಸುದ್ದಿಯಲ್ಲಿದ್ದಾರೆ. ಬ್ಯಾಕ್ ಕು ಬ್ಯಾಕ್ ಸಿನಿಮಾಗಳನ್ನು ನೀಡುತ್ತಿರುವ ರಾಕಿ ಭಾಯ್ ಇದೀಗ ಕೆಜಿಎಫ್-2 ಸಿನಿಮಾ ಶೂಟಿಂಗ್ನಲ್ಲಿ ಬ್ಯುಸಿ ಇದ್ದಾರೆ. ಈ ಬ್ಯುಸಿಯ ನಡುವೆಯೂ ರಾಮಚಾರಿಗೆ ಖುಷಿ ಸಿಕ್ಕಿದೆ.
ಮಗ ಬರ್ತಿದ್ದಂತೆ 'ನಾವ್ ಸ್ವಲ್ಪ ಬ್ಯುಸಿ ಕಂಡ್ರಪ್ಪ' ಎಂದ ರಾಕಿ ಭಾಯ್ - ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ಪಂಡಿತ್
ಮಗ ಹುಟ್ಟಿರುವ ಖುಷಿಯಲ್ಲಿರುವ ನಟ ಯಶ್ ಟ್ವೀಟ್ ಮಾಡಿದ್ದಾರೆ. ಈ ಟ್ವೀಟ್ನಲ್ಲಿ ಆಡಿಯೋ ಒಂದು ಲಿಂಕ್ ಆಗಿದ್ದು, ಅದ್ರಲ್ಲಿ ಯಶ್ ಮತ್ತು ಐರಾ ಫೋನ್ ಸಂಭಾಷಣೆ ಇದೆ. ಅದ್ರಲ್ಲೆ ಯಶ್ ಮಾತನಾಡಿದ್ದು, ನಿಮ್ಮೆಲ್ಲರ ಪ್ರೀತಿ ಹಾಗೂ ಹಾರೈಕೆಗೆ ಚಿರರುಣಿ. ನಿಮ್ಮ ಆಶೀರ್ವಾದ ಹೀಗೆ ಇರಲಿ. 'ನಾವ್ ಸ್ವಲ್ಪ ಬ್ಯುಸಿ ಕಂಡ್ರಪ್ಪ ನಮ್ಮ ಮಕ್ಳು ಜೊತೆ' ಎಂದು ಯಶ್ ಹೇಳಿದ್ದಾರೆ.
![ಮಗ ಬರ್ತಿದ್ದಂತೆ 'ನಾವ್ ಸ್ವಲ್ಪ ಬ್ಯುಸಿ ಕಂಡ್ರಪ್ಪ' ಎಂದ ರಾಕಿ ಭಾಯ್](https://etvbharatimages.akamaized.net/etvbharat/prod-images/768-512-4916555-thumbnail-3x2-giri.jpg)
ಹೌದು ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದು, ಐರಾಗೊಬ್ಬ ಮುದ್ದಾದ ತಮ್ಮ ಸಿಕ್ಕಿದ್ದಾನೆ. ಈ ಬಗ್ಗೆ ಟ್ವೀಟ್ ಮಾಡಿರುವ ರಾಕಿಂಗ್ ಸ್ಟಾರ್ ಯಶ್, ತಾಯಿ ಮಗು ಕ್ಷೇಮವಾಗಿದ್ದಾರೆ. ನಿಮ್ಮ ಈ ಪ್ರೀತಿ ..ಅಭಿಮಾನದ ಹಾರೈಕೆಗೆ ಹೃದಯ ತುಂಬಿ ಬಂದಿದೆ ಎಂದು ಬರೆದಿದ್ದಾರೆ.
ಅಲ್ಲದೆ ಈ ಟ್ವೀಟ್ನಲ್ಲಿ ಆಡಿಯೋ ಒಂದು ಲಿಂಕ್ ಆಗಿದ್ದು, ಅದ್ರಲ್ಲಿ ಯಶ್ ಮತ್ತು ಐರಾ ಫೋನ್ ಸಂಭಾಷಣೆ ಇದೆ. ಅದ್ರಲ್ಲೆ ಯಶ್ ಮಾತನಾಡಿದ್ದು, ನಿಮ್ಮೆಲ್ಲರ ಪ್ರೀತಿ ಹಾಗೂ ಹಾರೈಕೆಗೆ ಚಿರರುಣಿ. ನಿಮ್ಮ ಆಶೀರ್ವಾದ ಹೀಗೆ ಇರಲಿ. 'ನಾವ್ ಸ್ವಲ್ಪ ಬ್ಯುಸಿ ಕಂಡ್ರಪ್ಪ ನಮ್ಮ ಮಕ್ಳು ಜೊತೆ' ಎಂದು ಯಶ್ ಹೇಳಿದ್ದಾರೆ.