ಕರ್ನಾಟಕ

karnataka

ETV Bharat / sitara

ದುಬೈನಲ್ಲಿ ಯಶ್​-ರಾಧಿಕಾ ಮಿಂಚಿಂಗ್​.. ಸಿಂಹಕ್ಕೆ ಮಾಂಸ ತಿನ್ನಿಸಿದ ರಾಕಿಭಾಯ್​ - ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್

ರಾಕಿಂಗ್​ ಸ್ಟಾರ್​ ಯಶ್​ ಹಾಗೂ ರಾಧಿಕಾ ಪಂಡಿತ್​ ಅವರ ದುಬೈ ಭೇಟಿಯ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಕತ್​ ವೈರಲ್​ ಆಗಿವೆ. ನಟ ಯಶ್​ ಸಿಂಹಕ್ಕೆ ಮಾಂಸಾಹಾರ ತಿನ್ನಿಸಿದ ವಿಡಿಯೋ ಭಾರಿ ಸದ್ದು ಮಾಡುತ್ತಿದೆ.

yash radhika
ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್

By

Published : Oct 19, 2021, 7:54 PM IST

Updated : Oct 19, 2021, 8:00 PM IST

ಕನ್ನಡ ಚಿತ್ರರಂಗದಲ್ಲಿ ಸ್ಟಾರ್ ಜೋಡಿ ಅಂತಾ ಕರೆಸಿಕೊಂಡಿರುವ ಕಪಲ್ ಅಂದ್ರೆ ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್. ಆಗಾಗ ಅವರು ಶೇರ್​ ಮಾಡುವ ಮಕ್ಕಳ ಜೊತೆ ಕಾಲ ಕಳೆಯುವ ಫೋಟೋಗಳು ಹಾಗೂ ವಿಡಿಯೋಗಳು ಅಭಿಮಾನಿಗಳಿಗೆ ಸಿಕ್ಕಾಪಟ್ಟೆ ಇಷ್ಟ ಆಗುತ್ತಿವೆ. ಸದ್ಯ ಅವರು ದುಬೈ ಪ್ರವಾಸದಲ್ಲಿದ್ದು, ಅಲ್ಲಿ ಕ್ಲಿಕ್ಕಿಸಿಕೊಂಡಿರುವ ಫೋಟೋ ಮತ್ತು ವಿಡಿಯೋಗಳು ಸದ್ದು ಮಾಡ್ತಿವೆ.

ಯಶ್​ ರಾಧಿಕಾ ಜೋಡಿ

ಕೆಲವು ತಿಂಗಳು ಹಿಂದೆಯಷ್ಟೇ ಕುಟುಂಬ ಸಮೇತ ಮಾಲ್ಡೀವ್ಸ್​​ಗೆ ಹೋಗಿ ಬಂದಿದ್ದ ಯಶ್ ಮತ್ತು ರಾಧಿಕಾ ಪಂಡಿತ್ ಇದೀಗ ದುಬೈ ಪ್ರವಾಸ ಕೈಗೊಂಡಿದ್ದಾರೆ. ದುಬೈನಲ್ಲಿ ಇತ್ತೀಚಿಗೆ ವಿಜ್ಞಾನ ಹಾಗೂ ತಂತ್ರಜ್ಞಾನ ಎಕ್ಸ್ ಪೋ ನಡೆಯುತ್ತಿದ್ದು, ಈ ಎಕ್ಸ್ ಫೋಗೆ ಅತಿಥಿಯಾಗಿ ಯಶ್ ಮತ್ತು ರಾಧಿಕಾ ಪಂಡಿತ್ ಹೋಗಿದ್ದಾರೆ‌.

ದುಬೈನಲ್ಲಿ ಕೆಜಿಎಫ್​ ಹೀರೋ

ಯಶ್ ಮತ್ತು ರಾಧಿಕಾ ಪಂಡಿತ್ ಡಿಫರೆಂಟ್ ಆಗಿ ಹೇರ್‌ ಮೇಕ್‌ಓವರ್ ಮಾಡಿಸಿಕೊಂಡಿದ್ದಾರೆ. ಹೀಗಾಗಿ ಸ್ಟೈಲಿಶ್ ಆಗಿ ಕಾಣ್ತಾ ಇದ್ದಾರೆ.

ಅಲ್ಲಿರುವ ಕನ್ನಡಿಗರು ಕೂಡ ಈ ತಾರಾ ಜೋಡಿಯನ್ನ ನೋಡಿ ಥ್ರಿಲ್ ಆಗಿದ್ದಾರೆ. ಅಷ್ಟೇ ಅಲ್ಲ, ಈ ಜೋಡಿ ಅಲ್ಲಿನ ಕನ್ನಡಿಗರ ಜೊತೆ ಫೋಟೋಗೆ ಪೋಸ್ ಕೊಟ್ಟಿದ್ದಾರೆ.

ಸ್ಟೈಲಿಶ್​ ಲುಕ್​ನಲ್ಲಿ ರಾಧಿಕಾ ಪಂಡಿತ್​

ಯಶ್ ಮತ್ತು ರಾಧಿಕಾ ಪಂಡಿತ್ ಸಖತ್ ಸ್ಟೈಲಿಶ್ ಆಗಿರುವ ಕಾಸ್ಟೂಮ್​​ನಲ್ಲಿ ಮಿಂಚಿದ್ದಾರೆ.

ರಾಧಿಕಾ ಪಂಡಿತ್​​ ಬ್ಯೂಟಿಫುಲ್​ ಫೋಟೋ

ಯಶ್ ಮತ್ತು ರಾಧಿಕಾ ದುಬೈನಲ್ಲಿರುವ ಬ್ಯೂಟಿಫುಲ್ ಸ್ಥಳಗಳಿಗೆ ಭೇಟಿ ಕೊಡ್ತಾ ಇದ್ದಾರೆ. ದುಬೈನಲ್ಲಿರುವ ಮೃಗಾಲಯದಲ್ಲಿರುವ ಸಿಂಹಕ್ಕೆ ಯಶ್ ಆಹಾರ ತಿನ್ನಿಸಿರುವ ವಿಡಿಯೋ ಕೂಡ ಭಾರಿ ವೈರಲ್​ ಆಗ್ತಿದೆ.

ಸಿಂಹಕ್ಕೆ ಮಾಂಸಾಹಾರ ನೀಡುತ್ತಿರುವ ಯಶ್​
ದುಬೈನಲ್ಲಿ ರಾಮಾಚಾರಿ ಜೋಡಿ

ಸದ್ಯ ದುಬೈನಲ್ಲಿ ಕೋವಿಡ್ ನಿಯಮಗಳು ಅಚ್ಚುಕಟ್ಟಾಗಿದ್ದು, ಸುರಕ್ಷಿತ ವಾತಾವರಣವಿರುವ ಕಾರಣ ಯಶ್ ಮತ್ತು ರಾಧಿಕಾ ಪಂಡಿತ್ ಸಾಕಷ್ಟು ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಿದ್ದಾರೆ‌.

ದುಬೈನಲ್ಲಿ ಯಶ್​ ದಂಪತಿ ಮಿಂಚಿಂಗ್​

ಈ ಸ್ಯಾಂಡಲ್​ವುಡ್​ ತಾರಾ ದಂಪತಿ ದುಬೈನಲ್ಲಿ ಸದ್ಯ ನಾಲ್ಕೈದು ದಿನಗಳಿಂದ ಎಂಜಾಯ್ ಮಾಡ್ತಾ ಇದ್ದಾರೆ‌. ಸದ್ಯ ಯಶ್ ಮತ್ತು ರಾಧಿಕಾ ಪಂಡಿತ್ ದುಬೈ ಫೋಟೋಗಳು ಸಖತ್ ವೈರಲ್ ಆಗುತ್ತಿವೆ.

ಅಭಿಮಾನಿಗಳ ಜೊತೆಗೆ ಫೋಟೋ
Last Updated : Oct 19, 2021, 8:00 PM IST

ABOUT THE AUTHOR

...view details