ಕರ್ನಾಟಕ

karnataka

ETV Bharat / sitara

ಖ್ಯಾತ ಹಾಸ್ಯನಟ ವಿವೇಕ್​ಗೆ ಹೃದಯಾಘಾತ; ನುರಿತ ವೈದ್ಯರಿಂದ ಚಿಕಿತ್ಸೆ - ತಮಿಳು ಚಿತ್ರೋದ್ಯಮದ ಮೂಲಗಳು

ರಜನಿಕಾಂತ್, ವಿಜಯ್, ಅಜಿತ್ ಕುಮಾರ್ ಸೇರಿದಂತೆ ಖ್ಯಾತ ತಮಿಳು ನಟರೊಂದಿಗೆ ಪರದೆ ಹಂಚಿಕೊಂಡ ಹಾಸ್ಯ ಕಲಾವಿದ ಹಾಗೂ ಪದ್ಮಶ್ರೀ ಪುರಸ್ಕೃತ ವಿವೇಕ್​ ಅವರಿಗೆ ಹೃದಯಾಘಾತ ಸಂಭವಿಸಿದೆ. ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ದಾಖಲಿಸಲಾಗಿದ್ದು ನುರಿತ ವೈದ್ಯರು ಚಿಕಿತ್ಸೆ ಮುಂದುವರೆಸಿದ್ದಾರೆ.

Actor Vivek Hospitalized due to heart attack
ಹಾಸ್ಯನಟ ವಿವೇಕ್

By

Published : Apr 16, 2021, 1:41 PM IST

ಚೆನ್ನೈ: ಜನಪ್ರಿಯ ತಮಿಳು ಹಾಸ್ಯನಟ ವಿವೇಕ್​ ಅವರಿಗೆ ಇಂದು ಹೃದಯಾಘಾತ ಸಂಭವಿಸಿದ್ದು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಇಲ್ಲಿನ ಚಿತ್ರೋದ್ಯಮದ ಮೂಲಗಳು ತಿಳಿಸಿವೆ.

ಹೃದಯಾಘಾತ ಕಾಣಿಡಿಕೊಂಡ ತಕ್ಷಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಅವರಿಗೆ ನುರಿತ ಆಸ್ಪತ್ರೆ ವೈದ್ಯರು ಚಿಕಿತ್ಸೆ ಕೊಡುತ್ತಿದ್ದಾರೆ ಎನ್ನಲಾಗುತ್ತಿದೆ. ವಿವೇಕ್ ಅವರು ಗುರುವಾರ ಕೋವಿಡ್​ ಲಸಿಕೆಯನ್ನು ತೆಗೆದುಕೊಂಡಿದ್ದರು. ಲಸಿಕೆ ಪಡೆದ ನಂತರ ಈ ಬಗ್ಗೆ ಜಾಗೃತಿ ಸಹ ಮೂಡಿಸಿದ್ದರು.

ಕೋವಿಡ್​ ಲಸಿಕೆ ತೆಗೆದುಕೊಂಡ ನಟ ವಿವೇಕ್

ಸದ್ಯ ಅವರು ಲಸಿಕೆ ಪಡೆದುಕೊಂಡಿದ್ದಕ್ಕೂ ಹೃದಯಾಘಾತಕ್ಕೂ ಯಾವುದೇ ಸಂಬಂಧ ಇಲ್ಲ ಎನ್ನಲಾಗಿದೆ. ವೈದ್ಯರಷ್ಟೇ ಈ ಬಗ್ಗೆ ಸ್ಪಷ್ಟನೆ ನೀಡಬೇಕಿದೆ. ಪದ್ಮಶ್ರೀ ಪುರಸ್ಕೃತ ವಿವೇಕ್​ ಅವರು, ರಜನಿಕಾಂತ್, ವಿಜಯ್, ಅಜಿತ್ ಕುಮಾರ್ ಸೇರಿದಂತೆ ಖ್ಯಾತ ನಾಯಕ ನಟರೊಂದಿಗೆ ಸಾಕಷ್ಟು ಸಿನಿಮಾಗಳಲ್ಲಿ ಪರದೆ ಹಂಚಿಕೊಂಡಿದ್ದಾರೆ.

ABOUT THE AUTHOR

...view details