ಕನ್ನಡ ಚಿತ್ರರಂಗಕ್ಕೆ ರಂಗಭೂಮಿ ಹಾಗೂ ಕಿರುತೆರೆ ಸಾಕಷ್ಟು ಪ್ರತಿಭೆಗಳನ್ನು ನೀಡಿದೆ. ರಂಗಭೂಮಿ - ಕಿರುತೆರೆ ಹಿನ್ನೆಲೆಯುಳ್ಳ ರಾಕಿಂಗ್ ಸ್ಟಾರ್ ಯಶ್, ರಾಧಿಕಾ ಪಂಡಿತ್, ರಚಿತಾ ರಾಮ್ ಸೇರಿದಂತೆ ಸಾಕಷ್ಟು ಕಲಾವಿದರು ಇಂದು ಬೆಳ್ಳಿ ಪರದೆಯ ಮೇಲೆ ಮಿನುಗುವ ನಕ್ಷತ್ರಗಳಾಗಿದ್ದಾರೆ. ಈಗ ವಿವೇಕ್ ಸಿಂಹ ಯುವ ಪ್ರತಿಭೆ ಸ್ಮಾಲ್ ಸ್ಕ್ರೀನ್ ಹಾಗು ಬಿಗ್ ಸ್ಕ್ರೀನ್ ಬಡ್ತಿ ಪಡೆದಿದ್ದಾರೆ.
ಶಂಕರ್ನಾಗ್ ಅವರಂತೆ ದೊಡ್ಡನಟನಾಗಬೇಕು ಎನ್ನುವ ಕನಸು ಹೊತ್ತು ವಿವೇಕ್ ಸಿಂಹ ಗ್ಲ್ಯಾಮರ್ ಪ್ರಪಂಚಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈಗಾಗ್ಲೇ ಪ್ರೀಮಿಯರ್ ಪದ್ಮಿನಿ ಸಿನಿಮಾ ನೋಡಿದವರಿಗೆ ಇವರ ಪರಿಚಯವಿರುತ್ತೆ. ಚಿತ್ರರಂಗಕ್ಕೆ ಪದಾರ್ಪಣೆ ಮಾಡಿರುವ ಈ ನಟನಿಗೆ ಕನ್ನಡದ ಲೆಜೆಂಡರಿ ನಟ ಶಂಕರ್ ನಾಗ್ ಹಾಗೂ ಉಪೇಂದ್ರ ಅವರೇ ಸ್ಫೂರ್ತಿಯಂತೆ.
ಚಿಕ್ಕವಯಸ್ಸಿನಲ್ಲೇ ನಾಟಕಗಳಲ್ಲಿ ಅಭಿನಯಿಸುತ್ತ, ಡೊಳ್ಳು ಕುಣಿತ, ವೀರಾಗಾಸೆ, ಕಂಸಾಳೆ ಕಲಿತುಕೊಂಡಿದ್ದ ವಿವೇಕ್ನಿಗೆ ಸಿನಿಮಾ ಹಿನ್ನೆಲೆಯಿಲ್ಲ. ಒಂದು ವರ್ಷ ರಂಗಾಯಣದಲ್ಲಿ ನಾಟಕ ಬಗ್ಗೆ ಕೋರ್ಸ್ ಮಾಡಿದ ಇವರಿಗೆ ಒಂದು ಬಂಪರ್ ಲಾಟರಿ ಹೊಡೆಯುತ್ತೆ. ನಿರ್ಮಾಪಕ ರಾಕ್ ಲೈನ್ ಬ್ಯಾನರ್ನ 'ಜನುಮದ ಜೋಡಿ' ಸೀರಿಯಲ್ನಲ್ಲಿ ವಿವೇಕ್ನಿಗೆ ನಾಯಕನ ಪಾತ್ರ ಸಿಗುತ್ತದೆ. ಅಲ್ಲಿಂದ ಸಾಕಷ್ಟು ಅವಕಾಶಗಳು ಅರಸಿ ಬರುತ್ತವೆ. ಅದೇ ಟೈಮಲ್ಲಿ ನಿರ್ದೇಶಕ ರಾಘು ಶಿವಮೊಗ್ಗ ನಿರ್ದೇಶನದ 'ಚೂರಿಕಟ್ಟೆ' ಚಿತ್ರದಲ್ಲಿ ನಾಯಕ ನಟನ ಸ್ನೇಹಿತನ ಪಾತ್ರಕ್ಕೆ ಆಯ್ಕೆಯಾಗುತ್ತಾರೆ.
ಈಟಿವಿ ಭಾರತ್ ಜತೆ ನಟ ವಿವೇಕ್ ಮಾತು ನಂತರ ಮತ್ತೆ ಕಿರುತೆಗೆ ಮರಳುವ ವಿವೇಕ್ 'ಮಹಾದೇವಿ' ಧಾರವಾಹಿಯಲ್ಲಿ ನೆಗೆಟಿವ್ ಶೇಡ್ನಲ್ಲಿ ಕಾಣಿಸಿಕೊಳ್ಳುತ್ತಾರೆ. ಇದರಲ್ಲಿ ಅಭಿನಯಿಸುತ್ತಲೇ ನವರಸ ನಾಯಕ ಜಗ್ಗೇಶ್ ಅವರ ಪ್ರೀಮಿಯರ್ ಪದ್ಮಿನಿ ಸಿನಿಮಾಗೆ ಚಾನ್ಸ್ ಪಡೆದುಕೊಳ್ಳುತ್ತಾರೆ. ಸದ್ಯ ಈ ಚಿತ್ರ ಯಶಸ್ವಿ ಐವತ್ತು ದಿನಗಳನ್ನು ಪೂರೈಯಿಸಿದೆ. ಹಿರಿತೆರೆ - ಕಿರುತೆರೆಗಳಿಂದ ಬೇಡಿಕೆ ಹೆಚ್ಚಿಸಿಕೊಂಡಿರುವ ವಿವೇಕ್ ಸಿಂಹ, ತಮ್ಮ ಸಿನಿ ಪಯಣವನ್ನು ಈಟಿವಿ ಭಾರತ್ ಜತೆ ಹಂಚಿಕೊಂಡಿದ್ದಾರೆ.