ಕನ್ನಡ ಚಿತ್ರರಂಗದಲ್ಲಿ ಒಳ್ಳೆ ಹೈಟ್, ಕಟ್ಟುಮಸ್ತಾದ ದೇಹ, ಪಾತ್ರಕ್ಕಾಗಿ ತನ್ನನ್ನು ತೊಡಗಿಸಿಕೊಳ್ಳುವ ನಟ ವಿನೋದ್ ಪ್ರಭಾಕರ್ ಸ್ಯಾಂಡಲ್ವುಡ್ನಲ್ಲಿ ತನ್ನದೇ ರೀತಿಯ ಛಾಪು ಮೂಡಿಸಿದ್ದಾರೆ. ಕಳೆದ ಕೆಲ ದಿನಗಳಿಂದ, ವಿನೋದ್ ಒಂದು ಸಿನಿಮಾ ಮಾಡಲು ಕೋಟಿ ರೂ. ಸಂಭಾವನೆ ಪಡೆಯುತ್ತಾರೆ ಎಂಬ ಸುದ್ದಿಗಳು ಹರಿದಾಡುತ್ತಿದ್ದವು. ಇದಕ್ಕೆಲ್ಲ ಮರಿ ಟೈಗರ್ ಫುಲ್ಸ್ಟಾಪ್ ಹಾಕಿದ್ದಾರೆ.
ನಾನು ಯಾವತ್ತೂ ಒಂದು ಕೋಟಿ ರೂ ಸಂಭಾವನೆ ಕೇಳಿಲ್ಲ: ವಿನೋದ್ ಪ್ರಭಾಕರ್ - ನಟ ವಿನೋದ್ ಪ್ರಭಾಕರ್ ಸ್ಪಷ್ಟನೆ
'ರಾಬರ್ಟ್' ಸಿನಿಮಾದ ಬಳಿಕ ನಟ ವಿನೋದ್ ಪ್ರಭಾಕರ್ ಹೆಚ್ಚಿನ ಸಂಭಾವನೆ ಕೇಳುತ್ತಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿತ್ತು. ಇದಕ್ಕೆಲ್ಲ ವಿನೋದ್ ಸ್ಪಷ್ಟನೆ ನೀಡಿದ್ಧಾರೆ.
![ನಾನು ಯಾವತ್ತೂ ಒಂದು ಕೋಟಿ ರೂ ಸಂಭಾವನೆ ಕೇಳಿಲ್ಲ: ವಿನೋದ್ ಪ್ರಭಾಕರ್ ವಿನೋದ್ ಪ್ರಭಾಕರ್](https://etvbharatimages.akamaized.net/etvbharat/prod-images/768-512-12398149-thumbnail-3x2-bngjpg---copy.jpg)
ಕಳೆದರಡು ವರ್ಷಗಳಿಂದ ರಗಡ್, ಟೈಸನ್ ಹಾಗೂ ಶ್ಯಾಡೋ.. ಹೀಗೆ ಬ್ಯಾಕ್ ಟು ಬ್ಯಾಕ್ ಸಿನಿಮಾಗಳನ್ನು ಮಾಡಿ ಸಕ್ಸಸ್ ಕಂಡಿರುವ ನಟ ಚಿತ್ರರಂಗದಲ್ಲಿ ಡಿಮ್ಯಾಂಡ್ ಹೆಚ್ಚಿಸಿಕೊಂಡಿದ್ದಾರೆ. ರಾಬರ್ಟ್ ಚಿತ್ರದಲ್ಲಿ ದರ್ಶನ್ ಗೆಳೆಯನ ಪಾತ್ರದಲ್ಲಿ ವಿನೋದ್ ಪ್ರಭಾಕರ್ ನ್ಯಾಚುಲರ್ ಆಗಿ ನಟಿಸುವ ಮೂಲಕ ಪ್ರೇಕ್ಷಕರ ಮನ ಗೆದ್ದಿದ್ದು, ಈ ಸಿನಿಮಾದ ಬಳಿಕ ವಿನೋದ್ ಸಂಭಾವನೆಯನ್ನು ಹೆಚ್ಚಿಸಿಕೊಂಡಿದ್ದಾರಂತೆ.
ನಾನು ಮೊದಲು ನಿರ್ಮಾಪಕರ ಹತ್ತಿರ ಸಂಭಾವನೆ ಎಷ್ಟು ಕೊಡ್ತೀರಾ ಎಂದು ಕೇಳೋಲ್ಲ. ಸಿನಿಮಾ ಕಥೆ ಕೇಳ್ತೀನಿ, ಹಾಗೆಯೇ ಸಿನಿಮಾ ಚೆನ್ನಾಗಿ ಮಾಡೋಣ ಎಂದು ನಿರ್ಮಾಪಕರ ಪರವಾಗಿ ಯೋಚನೆ ಮಾಡ್ತೀನಿ. ಯಾವತ್ತು ಒಂದು ಕೋಟಿ ಸಂಭಾವನೆ ಕೇಳಿಲ್ಲ. ಸಿನಿಮಾಗಳು ಎಷ್ಟು ಕಲೆಕ್ಷನ್ ಮಾಡುತ್ತವೆ, ಎಷ್ಟಕ್ಕೆ ಡಬ್ಬಿಂಗ್ ರೈಟ್ಸ್ ಹೋಗುತ್ತೆ ಎಂಬೆಲ್ಲಾ ಮಾಹಿತಿ ತಿಳಿದಿದೆ. ನಾನು ಇಲ್ಲೇ ಇದ್ದೀನಿ, ಸ್ಟಾರ್ ಎಂಬ ದುರಹಂಕಾರವನ್ನು ತಲೆಗೆ ಅಂಟಿಸಿಕೊಂಡಿಲ್ಲ ಎಂದು ವಿನೋದ್ ಪ್ರಭಾಕರ್ ಹೇಳಿದರು.