ಸ್ಯಾಂಡಲ್ವುಡ್ನಲ್ಲಿ ಮಾಸ್ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟ ವಿನೋದ್ ಪ್ರಭಾಕರ್, ವರದ ಸಿನಿಮಾದಲ್ಲಿಅಭಿನಹಿಸುತ್ತಿದ್ದಾರೆ. ಸದ್ಯ ವರದ ಚಿತ್ರದ ಟ್ರೇಲರ್ ಬಿಡುಗಡೆ ಆಗಿದೆ. ಟ್ರೇಲರ್ ರಿಲೀಸ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ವಿನೋದ್ ತಮ್ಮದೇ ಚಿತ್ರತಂಡದವರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪುನೀತ್ ರಾಜ್ಕುಮಾರ್ ನಿಧನದ ನಂತರ ಅನೇಕ ಚಿತ್ರತಂಡಗಳು ಅವರಿಗೆ ನಮನ ಸಲ್ಲಿಸುತ್ತಿವೆ. ಸದ್ಯ ವರದ ಚಿತ್ರದ ಟ್ರೈಲರ್ನಲ್ಲಿ ಪುನೀತ್ ನಮನ ಭಾವಚಿತ್ರ ಇಲ್ಲ. ಒಂದೇ ಒಂದು ಫೋಟೋ ಕೂಡ ಹಾಕಿಲ್ಲ ಎಂದು ವಿನೋದ್ ಪ್ರಭಾಕರ್ ಅವರು ನಿರ್ದೇಶಕ ಉದಯ್ ಪ್ರಕಾಶ್ ಮೇಲೆ ಕೋಪಗೊಂಡರು.
ಇದೇ ವೇಳೆ ಹಣದ ವಿಚಾರವಾಗಿ ವೇದಿಕೆ ಮೇಲೆ ವಿನೋದ್ ಹಾಗೂ ನಿರ್ದೇಶಕ ಉದಯ್ ಪ್ರಕಾಶ್ ಆರೋಪ-ಪ್ರತ್ಯಾರೋಪ ಮಾಡಿಕೊಂಡರು. ನಿರ್ದೇಶಕ ಉದಯ್ ಪ್ರಕಾಶ್, ವಿನೋದ್ ಪ್ರಭಾಕರ್ ವಿರುದ್ಧ ನಿರ್ಮಾಪಕರ ಸಂಘದಲ್ಲಿ ಚರ್ಚೆ ಮಾಡಿದ್ದು ಕೂಡ ಅವರಿಗೆ ಬೇಸರ ತಂದಿತ್ತು. ಇದೇ ವಿಷಯ ವೇದಿಕೆ ಮೇಲೆ ಚರ್ಚೆಗೆ ಗ್ರಾಸವಾಗಿತ್ತು.