ಕರ್ನಾಟಕ

karnataka

ETV Bharat / sitara

ಭಿನ್ನ ವಿಭಿನ್ನವಾಗಿ ರಾಮನವಮಿ ಶುಭಾಶಯ ಕೋರಿದ ನಟ ವಿಜಯ್ ಸೂರ್ಯ‌ - Ramanavami wishes

ರಾಮ ನವಮಿಯ ಸಂಭ್ರಮದಂದು ವಿಜಯ್ ಸೂರ್ಯ, ಮುದ್ದು ಮಗನಿಗೆ ಮಡಿ ವಸ್ತ್ರ ಹಾಕಿದ ಫೋಟೋ ವನ್ನು ಇನ್ ಸ್ಟಾಗ್ರಾಂನಲ್ಲಿ ಶೇರ್​ ಮಾಡಿಕೊಂಡಿದ್ದು, ಎಲ್ಲರಿಗೂ ರಾಮ ನವಮಿಯ ಶುಭಾಶಯ ಕೋರಿದ್ದಾರೆ.

Actor Vijay Surya Conway Ramanavami festival wishes in different way
ರಾಮನವಮಿ ಹಬ್ಬದ ಶುಭಾಶಯಗಳನ್ನು ಕೊಂಚ ಭಿನ್ನವಾಗಿ ಹೇಳಿಕೊಂಡಿದ್ದಾರೆ ನಟ ವಿಜಯ್ ಸೂರ್ಯ‌

By

Published : Apr 3, 2020, 6:10 PM IST

ವಿಜಯ್ ಸೂರ್ಯ ಮನೆಗೆ ರಾಜಕುಮಾರನ ಆಗಮನವಾಗಿರುವುದು ಎಲ್ಲರಿಗೂ ತಿಳಿದೇ ಇದೆ. ರಾಮ ನವಮಿಯ ಸಂಭ್ರಮದಂದು ಮುದ್ದು ಮಗನಿಗೆ ಮಡಿ ವಸ್ತ್ರ ಹಾಕಿದ ಪೋಟೋ ವನ್ನು ಇನ್ ಸ್ಟಾಗ್ರಾಂನಲ್ಲಿ ವಿಜಯ ಸೂರ್ಯ ಹಾಕಿ ಎಲ್ಲರಿಗೂ ರಾಮ ನವಮಿಯ ಶುಭಾಶಯಗಳು ಎಂದು ಶುಭ ಕೋರಿದ್ದಾರೆ.

ರಾಮನವಮಿ ಹಬ್ಬದ ಶುಭಾಶಯಗಳನ್ನು ಕೊಂಚ ಭಿನ್ನವಾಗಿ ಹೇಳಿಕೊಂಡಿದ್ದಾರೆ ನಟ ವಿಜಯ್ ಸೂರ್ಯ‌

ಕಳೆದ ವರ್ಷ ಪ್ರೇಮಿಗಳ ದಿನದಂದೇ ದಾಂಪತ್ಯ ಜೀವನಕ್ಕೆ ಕಾಲಿರಿಸಿದ ವಿಜಯ್ ಸೂರ್ಯ ಮತ್ತು ಚೈತ್ರಾ ದಂಪತಿಗಳ ಬಾಳಿನಲ್ಲಿ ಜನವರಿ 1 ರಂದು ರಾಜಕುಮಾರನ ಆಗಮನವಾಗಿತ್ತು. ಆದರೆ, ತಮಗೆ ಮಗುವಾದ ಸುದ್ದಿಯನ್ನು ಗೌಪ್ಯವಾಗಿ ಇರಿಸಿದ್ದ ವಿಜಯ್ ಸೂರ್ಯ ಆ ವಿಚಾರವನ್ನು ಹೇಳಿಕೊಂಡಿದ್ದು ಒಂದು ತಿಂಗಳ ಬಳಿಕ.

ರಾಮನವಮಿ ಹಬ್ಬದ ಶುಭಾಶಯಗಳನ್ನು ಕೊಂಚ ಭಿನ್ನವಾಗಿ ಹೇಳಿಕೊಂಡಿದ್ದಾರೆ ನಟ ವಿಜಯ್ ಸೂರ್ಯ‌
ರಾಮನವಮಿ ಹಬ್ಬದ ಶುಭಾಶಯಗಳನ್ನು ಕೊಂಚ ಭಿನ್ನವಾಗಿ ಹೇಳಿಕೊಂಡಿದ್ದಾರೆ ನಟ ವಿಜಯ್ ಸೂರ್ಯ‌

ತಮ್ಮ ಮದುವೆಯ ಮೊದಲ ವರ್ಷದ ವಾರ್ಷಿಕೋತ್ಸವದಂದು ಮಗ ಹುಟ್ಟಿದ ಬಗ್ಗೆ ಅಧಿಕೃತವಾಗಿ ಅನೌನ್ಸ್ ಮಾಡಿದ್ದರು, ಗುಳಿ ಕೆನ್ನೆಯ ಚೆಲುವ ವಿಜಯ್​ ಸೂರ್ಯ. ಮಗುವಿಗೆ ಸೋಹನ್ ಸೂರ್ಯ ಎಂದು ಹೆಸರಿಡಲಾಗಿದ್ದು, ಅಪ್ಪ ಅಮ್ಮನ ರೀತಿ ಮಗುವಿಗೂ ಕೂಡಾ ಕೆನ್ನೆಯ ಮೇಲೆ ಗುಳಿ ಬೀಳುತ್ತದೆಯಂತೆ!.

ರಾಮನವಮಿ ಹಬ್ಬದ ಶುಭಾಶಯಗಳನ್ನು ಕೊಂಚ ಭಿನ್ನವಾಗಿ ಹೇಳಿಕೊಂಡಿದ್ದಾರೆ ನಟ ವಿಜಯ್ ಸೂರ್ಯ‌

ಇದೀಗ ಇನ್ ಸ್ಟಾಗ್ರಾಂನಲ್ಲಿ ಆಗಲೋ ಈಗಲೋ ಸದ್ದು ಮಾಡುತ್ತಿರುವ ಸೊಹನ್ ಸೂರ್ಯ ಅಪ್ಪನಂತೆ ಅದೆಷ್ಟು ಹುಡುಗಿಯರ ಮನ ಕದಿಯುತ್ತಾನೆ ಕಾದು ನೋಡಬೇಕಾಗಿದೆ.

ABOUT THE AUTHOR

...view details