ಚೆನ್ನೈ: ಕೊರೊನಾ ವಿರುದ್ಧದ ಹೋರಾಟಕ್ಕೆ ಕೈ ಜೋಡಿಸಿರುವ ತಮಿಳು ನಟ ವಿಜಯ್, ಪಿಎಂ ಕೇರ್ಸ್ ಸೇರಿದಂತೆ ದಕ್ಷಿಣ ರಾಜ್ಯಗಳಿಗೆ ಒಟ್ಟು 1 ಕೋಟಿ 30 ಲಕ್ಷ ರೂಪಾಯಿ ದೇಣಿಗೆ ನಿಡಿದ್ದಾರೆ.
ಇಳಯದಳಪತಿ ವಿಜಯ್ ಪಿಎಂ ಕೇರ್ಸ್, ಕರ್ನಾಟಕ ಸೇರಿದಂತೆ ದಕ್ಷಿಣ ಭಾರತದ ಎಲ್ಲ ರಾಜ್ಯಗಳಿಗೂ ತಮ್ಮ ಕೊಡುಗೆ ನೀಡಿದ್ದು, ಸಿನಿ ಕಾರ್ಮಿಕರಿಗೂ ತಮ್ಮ ಸಹಾಯ ಹಸ್ತ ಚಾಚಿದ್ದಾರೆ.
- ಪಿಎಂ ಕೇರ್ಸ್ -25 ಲಕ್ಷ ರೂ.
- ತಮಿಳುನಾಡು ಮುಖ್ಯಮಂತ್ರಿ ಪರಿಹಾರ ನಿಧಿ - 50 ಲಕ್ಷ ರೂ.
- ಕೇರಳ ಮುಖ್ಯಮಂತ್ರಿ ಪರಿಹಾರ ನಿಧಿ - 10 ಲಕ್ಷ ರೂ.
- ಕರ್ನಾಟಕ ಮುಖ್ಯಮಂತ್ರಿ ಪರಿಹಾರ ನಿಧಿ - 5 ಲಕ್ಷ ರೂ.
- ಆಂಧ್ರಪ್ರದೇಶ ಮುಖ್ಯಮಂತ್ರಿ ಪರಿಹಾರ ನಿಧಿ -5 ಲಕ್ಷ ರೂ.
- ತೆಲಂಗಾಣ ಮುಖ್ಯಮಂತ್ರಿ ಪರಿಹಾರ ನಿಧಿ - 5 ಲಕ್ಷ ರೂ.
- ಪುದುಚೇರಿ ಮುಖ್ಯಮಂತ್ರಿ ಪರಿಹಾರ ನಿಧಿ - 5 ಲಕ್ಷ ರೂ.
- ದಕ್ಷಿಣ ಭಾರತದ ಸಿನಿಕಾರ್ಮಿಕರ ಒಕ್ಕೂಟ (FEFSI)- 25 ಲಕ್ಷ ರೂ.