ಹೈದರಾಬಾದ್ (ತೆಲಂಗಾಣ): ಅರ್ಜುನ್ ರೆಡ್ಡಿ ಖ್ಯಾತಿಯ ತೆಲುಗು ನಟ ವಿಜಯ್ ದೇವರಕೊಂಡ(Vijay Deverakonda) ತಮ್ಮ ಪ್ಯಾನ್ - ಇಂಡಿಯಾ ಚಿತ್ರ 'ಲೈಗರ್'(Liger) ಬಿಡುಗಡೆಗೆ ಸಜ್ಜಾಗಿದ್ದಾರೆ.
ಬಾಕ್ಸರ್ ಮೈಕ್ ಟೈಸನ್ ಅವರೊಂದಿಗಿನ ಫೋಟೋ ಶೇರ್ ಮಾಡಿದ ವಿಜಯ್ ದೇವರಕೊಂಡ - ಲೈಗರ್ ಫಿಲ್ಮ್ ಅಪ್ಡೆಟ್ಸ್
ನಟ ವಿಜಯ್ ದೇವರಕೊಂಡ(Vijay Deverakonda) ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಾಕ್ಸರ್ ಮೈಕ್ ಟೈಸನ್ (Mike Tyson)ಅವರೊಂದಿಗಿನ ಫೋಟೋ ಶೇರ್ ಮಾಡಿದ್ದಾರೆ.
![ಬಾಕ್ಸರ್ ಮೈಕ್ ಟೈಸನ್ ಅವರೊಂದಿಗಿನ ಫೋಟೋ ಶೇರ್ ಮಾಡಿದ ವಿಜಯ್ ದೇವರಕೊಂಡ Vijay Deverakonda shares pic with Mike Tyson](https://etvbharatimages.akamaized.net/etvbharat/prod-images/768-512-13646957-thumbnail-3x2-cxgbfhg.jpg)
ವಿಜಯ್ ದೇವರಕೊಂಡ ಮತ್ತು ಮೈಕ್ ಟೈಸನ್
ಇದೀಗ ವಿಜಯ್ ದೇವರಕೊಂಡ, ಈ ಚಿತ್ರದ ಮೂಲಕ ಬಾಲಿವುಡ್‌ಗೆ ಪದಾರ್ಪಣೆ ಮಾಡಲಿರುವ ಬಾಕ್ಸರ್ ಮೈಕ್ ಟೈಸನ್(boxing legend Mike Tyson) ಅವರೊಂದಿಗಿನ ಫೋಟೋವನ್ನು ಹಂಚಿಕೊಂಡಿದ್ದಾರೆ.
ಇಂದು ವಿಜಯ್ ದೇವರಕೊಂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಬಾಕ್ಸರ್ ಮೈಕ್ ಟೈಸನ್ ಅವರೊಂದಿಗಿನ ಫೋಟೋ ಶೇರ್ ಮಾಡಿದ್ದಾರೆ. ಜೊತೆಗೆ, " ಈ ವ್ಯಕ್ತಿ ಅಂದರೆ ಪ್ರೀತಿ, ಪ್ರತಿ ಕ್ಷಣಗಳನ್ನು ನೆನೆಪು ಮಾಡಿಕೊಳ್ಳುತ್ತೇನೆ, ಎಂದೆಂದಿಗೂ ಈ ನೆನಪುಗಳು ನನಗೆ ವಿಶೇಷವಾಗಿರುತ್ತದೆ ಎಂದು ಬರೆದುಕೊಂಡಿದ್ದಾರೆ.