ದಕ್ಷಿಣ ಭಾರತದ ಇಮ್ರಾನ್ ಹಸ್ಮಿ ಎಂದೇ ಖ್ಯಾತಿ ಪಡೆದಿರುವ ನಟ ವಿಜಯ್ ದೇವರಕೊಂಡ ತಮ್ಮ ಚಿತ್ರಗಳಲ್ಲಿ ಕಿಸ್ ಸೀನ್ಗಳ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ ಕನ್ನಡತಿ ರಶ್ಮಿಕಾ ಮಂದಣ್ಣ ಜತೆಗಿನ ಲಿಪ್ -ಲಾಕ್ಗಳ ಬಗ್ಗೆ ಪ್ರತಿಕ್ರಿಯಿಸಿದ್ದಾರೆ.
ಕೇವಲ ರಶ್ಮಿಕಾ ಅಲ್ಲ, ಯಾರೇ ಇದ್ರೂ ಕಿಸ್ ಮಾಡ್ತೀನಿ : ವಿಜಯ್ ದೇವರಕೊಂಡ - ನಟಿ ರಶ್ಮಿಕಾ
ಒಂದು ವೇಳೆ ಅಲ್ಲಿ ಖಾಲಿ ಚೇರ್ ಇದ್ದರೂ ಕೂಡ ಅದೇ ರೀತಿ ರೊಮ್ಯಾನ್ಸ್ ಮಾಡ್ತೇನೆ. ಒಬ್ಬ ನಟನಾಗಿ ಈ ರೀತಿ ನಾನು ಮಾಡಲೇಬೇಕು.

ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ 'ಒಂದು ಸಿನಿಮಾದಲ್ಲಿ ಅಂತಹ ಸೀನ್ಗಳ ಅಗತ್ಯವಿದ್ದರೆ ಕೇವಲ ರಶ್ಮಿಕಾ ಮಾತ್ರವಲ್ಲ, ಆ ಜಾಗದಲ್ಲಿ ಯಾರೇ ಇದ್ದರೂ ನಾನು ಚುಂಬಿಸುತ್ತೇನೆ. ಒಂದು ವೇಳೆ ಅಲ್ಲಿ ಖಾಲಿ ಚೇರ್ ಇದ್ದರೂ ಕೂಡ ಅದೇ ರೀತಿ ರೊಮ್ಯಾನ್ಸ್ ಮಾಡ್ತೇನೆ. ಒಬ್ಬ ನಟನಾಗಿ ಈ ರೀತಿ ನಾನು ಮಾಡಲೇಬೇಕು. ಅದಾಗ್ಯೂ ಇದೆಲ್ಲ ರೀಲ್. ಆದರೆ, ಪ್ರೇಕ್ಷಕರಿಗೆ ಅದು ನಿಜ ಎಂದು ನಂಬುವಂತೆ ನಾವು ತೋರಿಸಬೇಕು. ಅದು ಎಮೋಷನಲ್ ಅಥವಾ ರೊಮ್ಯಾನ್ಸ್ ಸೀನ್ ಆಗಿರಬಹುದು, ಜನರು ಪರದೆಯ ಮೇಲೆ ನೋಡುತ್ತಿರುವುದು ನಿಜವೆಂದು ನಂಬುವಂತೆ ಒಬ್ಬ ನಟ ಮಾಡಬೇಕು ಎಂದಿದ್ದಾರೆ.
ಇನ್ನು ಸೆಂಟಿಮೆಂಟ್, ಪ್ರಚಾರ ಗಿಟ್ಟಿಸಿಕೊಳ್ಳಲು ಲಿಪ್-ಲಾಕ್ ದೃಶ್ಯ ಸೇರಿಸಲಾಗುತ್ತದೆ ಎಂಬುವುದು ಮೂರ್ಖತನದ ಮಾತು. ಮುತ್ತಿಕ್ಕುವ ದೃಶ್ಯಗಳಿರುವ ಸಿನಿಮಾಗಳೆಲ್ಲವು ಹಿಟ್ ಆಗುತ್ತವೆ ಎಂದು ನಂಬುವುದು ಕೂಡ ಮುಠ್ಠಾಳತನ ಎಂದಿದ್ದಾರೆ.