ಕರ್ನಾಟಕ

karnataka

ETV Bharat / sitara

ಕೊಟ್ಟ ಮಾತು ಉಳಿಸಿಕೊಂಡ ವಿಜಯ್​ ದೇವರಕೊಂಡ.. ಇಂಡಿಯನ್​ ಐಡಲ್​​ ಸ್ಪರ್ಧಿಗೆ ತಮ್ಮ ಚಿತ್ರದಲ್ಲಿ ಹಾಡಲು ಅವಕಾಶ.. - ಷಣ್ಮಖಪ್ರಿಯಾ

13ನೇ ಆವೃತ್ತಿ ಜನಪ್ರಿಯ ಸಂಗೀತ ರಿಯಾಲಿಟಿ ಶೋದಲ್ಲಿ ತೆಲುಗು ದೇಶದ ಷಣ್ಮಖಪ್ರಿಯಾ ಭಾಗಿಯಾಗಿದ್ದರು. ಅದ್ಭುತ ಕಂಠದಿಂದ ಫೈನಲ್​ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಇವರು, ಫೈನಲ್​​ನಲ್ಲಿ ಸೋಲು ಕಂಡಿದ್ದರು..

actor vijay devarakonda
actor vijay devarakonda

By

Published : Sep 7, 2021, 9:34 PM IST

ಹೈದರಾಬಾದ್ ​:ಟಾಲಿವುಡ್​ನ ಸ್ಟಾರ್​ ನಟ ವಿಜಯ್​ ದೇವರಕೊಂಡ ನಡೆದುಕೊಂಡಿರುವ ರೀತಿಗೆ ಇನ್ನಿಲ್ಲದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಹಿಂದಿಯ ರಿಯಾಲಿಟಿ ಶೋ ಇಂಡಿಯನ್​ ಐಡಲ್‌ನಲ್ಲಿ ಭಾಗಿಯಾಗಿದ್ದ ಸ್ಪರ್ಧಿಗೆ ತಮ್ಮ ಮುಂಬರುವ ಚಿತ್ರದಲ್ಲಿ ಹಾಡುವ ಅವಕಾಶ ನೀಡಿದ್ದು, ಅದರ ಬಗ್ಗೆ ಇನ್​​ಸ್ಟಾಗ್ರಾಂನಲ್ಲಿ ಬರೆದುಕೊಂಡಿದ್ದಾರೆ.

ಕಾರ್ಯಕ್ರಮದಲ್ಲಿ 'ನೀನು ಗೆದ್ದರೂ ಸರಿ ಸೋತರೂ ಸರಿ, ನೀನು ಹೈದರಾಬಾದ್‌ಗೆ ಬರುತ್ತೀಯಾ, ನನ್ನನ್ನು ಭೇಟಿ ಮಾಡುತ್ತೀಯಾ. ನನ್ನ ಸಿನಿಮಾದಲ್ಲಿ ಹಾಡು ಹಾಡುತ್ತೀಯಾ,' ಎಂದು ಹೇಳಿದ್ದರು. ಇದೀಗ ತಾವು ಕೊಟ್ಟಿರುವ ಮಾತು ಉಳಿಸಿಕೊಂಡಿದ್ದಾರೆ.

13ನೇ ಆವೃತ್ತಿ ಜನಪ್ರಿಯ ಸಂಗೀತ ರಿಯಾಲಿಟಿ ಶೋದಲ್ಲಿ ತೆಲುಗು ದೇಶದ ಷಣ್ಮಖಪ್ರಿಯಾ ಭಾಗಿಯಾಗಿದ್ದರು. ಅದ್ಭುತ ಕಂಠದಿಂದ ಫೈನಲ್​ ಪ್ರವೇಶ ಪಡೆದುಕೊಳ್ಳುವಲ್ಲಿ ಯಶಸ್ವಿಯಾಗಿದ್ದ ಇವರು, ಫೈನಲ್​​ನಲ್ಲಿ ಸೋಲು ಕಂಡಿದ್ದರು.

ಆದರೆ, ತೆಲುಗು ನಟ ವಿಜಯ್​ ದೇವರಕೊಂಡ ಅವರು ಷಣ್ಮುಷಪ್ರಿಯಾರ ಪಕ್ಕಾ ಅಭಿಮಾನಿಯಾಗಿರುವುದಾಗಿ ಹೇಳಿಕೊಂಡಿದ್ದರು. ಇವರಿಗೆ ಸಪೋರ್ಟ್ ಕೂಡ ಮಾಡಿದ್ದ ದೇವರಕೊಂಡ, ಈ ರಿಯಾಲಿಟಿ ಶೋನಲ್ಲಿ ನೀವೂ ಗೆದ್ದರೂ, ಸೋತರೂ ಕೂಡ ಸಿನಿಮಾದಲ್ಲಿ ಹಾಡುವ ಅವಕಾಶ ನೀಡುವುದಾಗಿ ತಿಳಿಸಿದ್ದರು.

ಇಂಡಿಯನ್​ ಐಡಲ್​​ ಸ್ಪರ್ಧಿಗೆ ಸಿನಿಮಾದಲ್ಲಿ ಹಾಡುವ ಅವಕಾಶ ನೀಡಿದ ನಟ

ಇದನ್ನೂ ಓದಿರಿ: ಬೀಚ್​ನಲ್ಲಿ ಮಗಳ ಜೊತೆ ಜಾಲಿ ರೈಡ್ ಮಾಡಿದ ಸಿಂಪಲ್ ಬೆಡಗಿ

ಅದರಂತೆ ವಿಜಯ್​​ ದೇವರಕೊಂಡ ಅವರ ಮುಂಬರುವ ಚಿತ್ರ ಲೈಗರ್​ ಸಿನಿಮಾದಲ್ಲಿ ಷಣ್ಮುಖಪ್ರಿಯಾ ಹಾಡೊಂದನ್ನ ಹಾಡಿದ್ದಾರೆ. ಇದಕ್ಕೆ ಸಂಬಂಧಿಸಿದಂತೆ ವಿಡಿಯೋ ತುಣಕುವೊಂದನ್ನ ನಟ ಶೇರ್ ಮಾಡಿಕೊಂಡಿದ್ದಾರೆ.

ABOUT THE AUTHOR

...view details