ಬೆಂಗಳೂರು: ಅತಿವೃಷ್ಟಿಗೆ ಒಳಗಾಗಿರುವ ಬೆಳಗಾವಿ ಸೇರಿದಂತೆ ಉತ್ತರ ಕರ್ನಾಟಕ ಭಾಗದ ನೆರೆ ಸಂತ್ರಸ್ತರಿಗೆ ನಟ ವಶಿಷ್ಠ ಸಿಂಹ ಮತ್ತೆ ನೆರವು ನೀಡಿದ್ದಾರೆ. ಕಳೆದ ನಾಲ್ಕು ದಿನಗಳ ಹಿಂದೆ ಎರಡು ಲಾರಿಗಳಲ್ಲಿ ಪರಿಹಾರ ಸಾಮಗ್ರಿ ಕಳುಹಿಸಿದ್ದ ಅವರು, ಇದೀಗ ಮತ್ತೆರಡು ವಾಹನಗಳನ್ನು ಕಳುಹಿಸಿದ್ದಾರೆ.
2 ಸಾವಿರ ನೆರೆ ಸಂತ್ರಸ್ತ ಕುಟುಂಬಗಳಿಗೆ ನಟ ವಶಿಷ್ಠ ಸಿಂಹ ನೆರವು - ಜಲಪ್ರಳಯ
ನಟ ವಶಿಷ್ಠ ಸಿಂಹ ಎರಡು ಸಾವಿರ ನೆರೆ ಸಂತ್ರಸ್ತ ಕುಟುಂಬಗಳಿಗೆ ಅಗತ್ಯ ಸಾಮಗ್ರಿಗಳನ್ನು ಮತ್ತೆ ಕಳುಹಿಸಿದ್ದಾರೆ.
Actor Vashishtha
ಜಲಪ್ರಳಯದಿಂದ ನಲುಗಿರುವ ನೆರೆ ಸಂತ್ರಸ್ತರಿಗೆ ಅಭಿಮಾನಿಗಳು, ಸ್ನೇಹಿತರು ಹಾಗೂ ಬೆಸ್ಕಾಂ ಜತೆ ಕೈಜೋಡಿಸಿ ಅಗತ್ಯ ವಸ್ತುಗಳನ್ನು ರವಾನಿಸಿದ್ದಾರೆ. ಈ ಎಲ್ಲ ವಸ್ತುಗಳನ್ನು ಕಿಟ್ ರೂಪದಲ್ಲಿ 2000 ಕುಟುಂಬಗಳಿಗೆ ನೀಡುವ ಉದ್ದೇಶ ಹೊಂದಿದ್ದಾರೆ. ಸ್ವತಃ ತಾವೇ ಮುಂದೆ ನಿಂತು ಕಿಟ್ ತಯಾರಿಸಿದ್ದಾರೆ.
ಈ ಬಗ್ಗೆ ಮಾತಾಡಿರುವ ನಟ ವಶಿಷ್ಠ, ಸುಮಾರು 2 ಸಾವಿರ ಕುಟುಂಬಗಳಿಗೆ ಅಗತ್ಯ ವಸ್ತುಗಳನ್ನು ನೀಡುತ್ತಿದ್ದೇವೆ. ಈ ಕಿಟ್ನಲ್ಲಿ ಒಂದು ವಾರಕ್ಕೆ ಆಗುವಷ್ಟು ವಸ್ತುಗಳಿವೆ. ನಮ್ಮ ಹುಡುಗರೇ ಪ್ರತಿ ಮನೆ ಮನೆಗೆ ತೆರಳಿ ಈ ಕಿಟ್ ವಿತರಿಸಲಿದ್ದಾರೆ ಎಂದು ತಿಳಿಸಿದರು.