ಕೊರೊನಾದಿಂದಾಗಿ ಕಷ್ಟ ಪಡುತ್ತಿರುವ ಸಿನಿಮಾ ರಂಗದವರಿಗೆ ಕಳೆದ ಒಂದು ವಾರದಿಂದ ರಿಯಲ್ ಸ್ಟಾರ್ ಉಪೇಂದ್ರ ಆಹಾರ ಕಿಟ್ಗಳನ್ನ ಕೊಡುವ ಮೂಲಕ ತಮ್ಮ ಕೈಲಾದ ಸಮಾಜಸೇವೆ ಮಾಡ್ತಾ ಇದ್ದಾರೆ.
ಉಪೇಂದ್ರ ಬೆಂಬಲಕ್ಕೆ, ಈಗಾಗಲೇ ಹಿರಿಯ ನಟಿ ಸರೋಜಾದೇವಿ, ನಿರ್ದೇಶಕ ಪವನ್ ಒಡೆಯರ್, ಸೇರಿದಂತೆ ಸಾಕಷ್ಟು ಚಿತ್ರರಂಗದವರು ಜೊತೆಗೂಡಿದ್ದಾರೆ.
ರಿಯಲ್ ಸ್ಟಾರ್ ಉಪೇಂದ್ರ ಅವರ ಸಹೋದರ ಸುಧೀಂದ್ರ ಮತ್ತು ಅತ್ತಿಗೆ ವೀಣಾಗೆ ಇಂದು ಮದುವೆಯಾದ ದಿನ. ಇಂದಿಗೆ ಇಬ್ಬರೂ ಮದುವೆಯಾಗಿ 26 ವರ್ಷಗಳು ಸಂದಿವೆ. ಈ ದಿನವನ್ನು ಸುಧೀಂದ್ರ ಹಾಗೂ ವೀಣಾ ದಂಪತಿ ಅರ್ಥಗರ್ಭಿತವಾದ ಆಚರಿಸಿದ್ದಾರೆ.
ಆಟೋ ಚಾಲಕರಿಗಾಗಿ ಮೂರು ಲಕ್ಷ ರೂಪಾಯಿ ದೇಣಿಗೆ ನೀಡುವ ಮೂಲಕ, ಸಹೋದರನ ಕೆಲಸಕ್ಕೆ ಸಾಥ್ ನೀಡಿದ್ದಾರೆ. ಈ ಕೊರೊನಾ ಪರಿಸ್ಥಿತಿಯಲ್ಲಿ ನಟ ಉಪೇಂದ್ರ ಕಲಾವಿದರಿಗೆ, ಬಡವರಿಗೆ ಹಾಗೂ ರೈತರಿಗೆ ನೆರವಾಗಿದ್ದಾರೆ.
ಇತ್ತ ಸಹೋದರ ಸುಧೀಂದ್ರ, ಆಟೋ ಚಾಲಕರಿಗೆ ದಿನಸಿ ಕಿಟ್‌ಗಳನ್ನು ನೀಡುವ ಸಲುವಾಗಿ ಈ ದಿನ ಮೂರು ಲಕ್ಷ ರೂಪಾಯಿಗಳನ್ನು ಉಪೇಂದ್ರರ ಕೈಗೆ ನೀಡಿದ್ದಾರೆ. ಈ ಬಗ್ಗೆ ನಟ ಉಪೇಂದ್ರ ಬಹಳ ಖುಷಿ ಹಾಗೂ ಹೆಮ್ಮೆಯಿಂದಲೇ ಅಭಿಮಾನಿಗಳಲ್ಲಿ ಹಂಚಿಕೊಂಡಿದ್ದಾರೆ.
ಈ ಬಗ್ಗೆ ಉಪೇಂದ್ರ ಸೋಷಿಯಲ್ ಮೀಡಿಯಾದಲ್ಲಿ ಅಣ್ಣ ಹಾಗೂ ಅತ್ತಿಗೆಗ ಧನ್ಯವಾದಗಳನ್ನ ಹೇಳಿದ್ದಾರೆ. ಸುಧೀಂದ್ರ ಹಾಗೂ ವೀಣಾ ದಂಪತಿಯ ಮಗನೇ ನಿರಂಜನ್ ಸುಧೀಂದ್ರ. ಸದ್ಯ ನಿರಂಜನ್ ಕನ್ನಡದಲ್ಲಿ ಎರಡು ಸಿನಿಮಾಗಳನ್ನ ಮಾಡ್ತಾ ಇದ್ದಾರೆ.