ಕಬ್ಜ ಸಿನಿಮಾ ಶೂಟಿಂಗ್ ವೇಳೆ ಅವಘಡವೊಂದು ನಡೆದಿದ್ದು, ಫೈಟಿಂಗ್ ಸೀನ್ ಚಿತ್ರೀಕರಣದ ವೇಳೆ ನಟ ಉಪೇಂದ್ರ ತಲೆಗೆ ಪೆಟ್ಟಾಗಿದೆ ಎಂದು ತಿಳಿದು ಬಂದಿದೆ.
ಕಬ್ಜ ಸಿನಿಮಾ ಶೂಟಿಂಗ್ ವೇಳೆ ಗಾಯಗೊಂಡ ನಟ ಉಪೇಂದ್ರ ನಿರ್ದೇಶಕ ಆರ್. ಚಂದ್ರು ಕಳೆದ ಕೆಲ ದಿನಗಳಿಂದ ಬೆಂಗಳೂರಿನ ಮಿನರ್ವ ಫ್ಯಾಕ್ಟರಿಯಲ್ಲಿ ಅದ್ಧೂರಿಯಾದ ಸೆಟ್ಟು ಹಾಕಿ ಕಬ್ಜ ಸಿನಿಮಾದ ಆಕ್ಷನ್ ಸಿಕ್ವೇನ್ಸ್ಗಳನ್ನು ಚಿತ್ರೀಕರಿಸುತ್ತಿದ್ದಾರೆ. ಕಳೆದ ರಾತ್ರಿ ಕಬ್ಬಿಣದ ರಾಡ್ನಿಂದ ಉಪೇಂದ್ರ ಅವರಿಗೆ ಹೊಡೆಯುವ ಸೀನ್ ಚಿತ್ರೀಕರಣ ಮಾಡಲಾಗುತ್ತಿತ್ತು. ಈ ವೇಳೆ ಫೈಟರ್ ಹಿಂದಿನಿಂದ ಬಿಸಿದ ರಾಡ್ ಹೊಡೆತದಿಂದ ಉಪೇಂದ್ರ ತಪ್ಪಿಸಿಕೊಳ್ಳಬೇಕಾದ ಸೀನ್ ಇತ್ತು. ಈ ವೇಳೆ ಮೀಸ್ ಆಗಿ ರಾಡ್ ಉಪೇಂದ್ರ ತಲೆಗೆ ಬಡಿದಿದೆ. ಅದೃಷ್ಟವಶಾತ್ ಉಪೇಂದ್ರಗೆ ಯಾವುದೇ ಗಂಭೀರ ಗಾಯವಾಗಿಲ್ಲ ಎನ್ನಲಾಗುತ್ತಿದೆ.
ಘಟನೆ ಬಗ್ಗೆ ಸ್ಪಷ್ಟನೆ ನೀಡಿದ ನಿರ್ದೇಶಕ ಚಂದ್ರು ಓದಿ: 'ಚಲಿ ಚಲಿ' ಹಾಡಿಗಾಗಿ ತಲೈವಿಯ ಪೂರ್ವ ತಯಾರಿ ಹೇಗಿತ್ತು ಗೊತ್ತಾ..?
ಘಟನೆ ಬಳಿಕ ಉಪೇಂದ್ರ ಅವರು ಕೆಲಕಾಲ ವಿಶ್ರಾಂತಿ ಪಡೆದು ಮತ್ತೆ ಆಕ್ಷನ್ ಸಿಕ್ವೇನ್ಸ್ ಮುಗಿಸಿದ್ದಾರೆ. ಸ್ಟಂಟ್ ಮಾಸ್ಟರ್ ರವಿವರ್ಮ ಅವರ ನಿರ್ದೇಶನದಲ್ಲಿ ನಡೆಯುತ್ತಿದ್ದ ಆ್ಯಕ್ಷನ್ ಬ್ಲಾಕ್ ಇದಾಗಿದೆ. ಬಳಿಕ ನಿರ್ದೇಶಕ ಆರ್. ಚಂದ್ರು ಮಾತನಾಡಿ, ಉಪ್ಪಿ ಸಾರ್ ದೊಡ್ಡ ಸ್ಟಾರ್ ನಟ. ಶೂಟಿಂಗ್ಗೆ ತೊಂದರೆ ಆಗಬಾರದು ಎಂದು ತಮಗೆ ನೋವಾಗಿದ್ದರೂ ಕೂಡ ಶೂಟಿಂಗ್ ಮಾಡ್ತಾ ಇದ್ದಾರೆ ಎಂದರು.
ಕಬ್ಜ ಸಿನಿಮಾವನ್ನು ಬಹು ಕೋಟಿ ವೆಚ್ಚದಲ್ಲಿ ನಿರ್ದೇಶಕ ಆರ್. ಚಂದ್ರು ನಿರ್ಮಾಣ ಮಾಡುತ್ತಿದ್ದು, ಉಪೇಂದ್ರ ಅವರ ಜೊತೆ ಸುದೀಪ್ ಕೂಡ ಒಂದು ವಿಶೇಷ ಪಾತ್ರ ಮಾಡುತ್ತಿದ್ದಾರೆ.