ಕರ್ನಾಟಕ

karnataka

ETV Bharat / sitara

'ನಟ್ವರ್ ಲಾಲ್' ಆದ ಮಡಮಕ್ಕಿ ಹೀರೋ ತನುಷ್! - Actor Tanush Shivanna next movie Natwar lal

ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದ ತನುಷ್ ಶಿವಣ್ಣ, ಇದೀಗ ಮಾಸ್ ಸಿನಿಮಾದೊಂದಿಗೆ ಮತ್ತೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ. ಈ ಚಿತ್ರಕ್ಕೆ 'ನಟ್ವರ್ ಲಾಲ್' ಅಂತಾ ಟೈಟಲ್ ಇಟ್ಟಿದ್ದು, ಇತ್ತೀಚೆಗೆ ಈ ಚಿತ್ರದ ಫಸ್ಟ್​ಲುಕ್ ಆನಂದ್ ಆಡಿಯೋ ಮೂಲಕ ಬಿಡುಗಡೆ ಮಾಡಲಾಗಿತ್ತು.

Actor Tanush Shivanna
ನಟ ತನುಷ್ ಶಿವಣ್ಣ

By

Published : Jul 10, 2021, 10:08 AM IST

ಸ್ಯಾಂಡಲ್​ವುಡ್​ನಲ್ಲಿ ಮಡಮಕ್ಕಿ ಹಾಗೂ ನಂಜುಂಡಿ ಕಲ್ಯಾಣ ಚಿತ್ರದ ಮೂಲಕ ಗಮನ ಸೆಳೆದಿದ್ದ ನಟ ತನುಷ್ ಶಿವಣ್ಣ. ಚಿತ್ರರಂಗದಿಂದ ಸ್ವಲ್ಪ ದೂರ ಉಳಿದಿದ್ದ ತನುಷ್ ಶಿವಣ್ಣ, ಇದೀಗ ಮಾಸ್ ಸಿನಿಮಾದೊಂದಿಗೆ ಮತ್ತೆ ಗಾಂಧಿನಗರಕ್ಕೆ ಎಂಟ್ರಿ ಕೊಟ್ಟಿದ್ದಾರೆ.

ನಟ ತನುಷ್ ಶಿವಣ್ಣ

ಈ ಚಿತ್ರಕ್ಕೆ 'ನಟ್ವರ್ ಲಾಲ್' ಅಂತಾ ಟೈಟಲ್ ಇಟ್ಟಿದ್ದು, ಇತ್ತೀಚೆಗೆ ಈ ಚಿತ್ರದ ಫಸ್ಟ್​ಲುಕ್ ಆನಂದ್ ಆಡಿಯೋ ಮೂಲಕ ಬಿಡುಗಡೆ ಮಾಡಲಾಗಿತ್ತು. ಆಕ್ಷನ್ ಥ್ರಿಲ್ಲರ್ ಕಥಾಹಂದರ ಹೊಂದಿರುವ ಈ ಚಿತ್ರಕ್ಕೆ, ತನುಷ್ ಶಿವಣ್ಣ ಜೊತೆ ನಾಯಕಿಯಾಗಿ ಸೋನಾಲ್ ಮಾಂಟೆರೊ ರೊಮ್ಯಾನ್ಸ್ ಮಾಡಲಿದ್ದಾರೆ. ಇವರ ಜೊತೆಗೆ ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ವಿಜಯ್ ಚೆಂಡೂರ್, ಕೆ.ಎಸ್.ಶ್ರೀಧರ್, ಯಶ್ ಶೆಟ್ಟಿ, ಗಿರಿ ಗೌಡ, ನಾಗಭೂಷಣ್, ಕಾಕ್ರೋಜ್ ಸುಧೀ, ಕಾಮಿಡಿ ಕಿಲಾಡಿಗಳು ನಯನ, ರಾಜೇಂದ್ರ ಕಾರಂತ್, ರಘು ರಮಣಕೊಪ್ಪ, ಸುಂದರರಾಜ್, ಕಾಂತರಾಜ್ ಕಡ್ಡಿಪಡಿ, ಬಲ ರಾಜವಾಡಿ, ಹರಿಣಿ, ಪದ್ಮಾ ವಾಸಂತಿ, ನಾಗರಾಜ್ ಅರಸು, ಭೀಷ್ಮ ರಾಮಯ್ಯ, ಪ್ರಶಾಂತ್ ಸಿದ್ದಿ ಮುಂತಾದವರ ಬಹುದೊಡ್ಡ ತಾರಾಬಳಗ ಈ ಚಿತ್ರದಲ್ಲಿದೆ‌.

ಈ ಚಿತ್ರವನ್ನ ವಿ.ಲವ ನಿರ್ದೇಶಿಸುತ್ತಿದ್ದು, ಕರ್ನಾಟಕದ ಸುಂದರ ಪರಿಸರಗಳಲ್ಲಿ ಚಿತ್ರೀಕರಣ ನಡೆದಿದೆ. ಹೆಚ್ಚಿನ ಚಿತ್ರೀಕರಣ ವಿವಿಧ ಸೆಟ್​ಗಳಲ್ಲಿ ನಡೆದಿರುವುದು ಈ ಚಿತ್ರದ ವಿಶೇಷ. ನಟ್ವರ್ ಲಾಲ್ ಸಿನಿಮಾಕ್ಕೆ ಧರ್ಮ ವಿಶ್ ಸಂಗೀತ ನಿರ್ದೇಶನ, ವಿಲಿಯಂ ಡೇವಿಡ್ ಛಾಯಾಗ್ರಹಣ, ಕೆ.ಎಂ.ಪ್ರಕಾಶ್ ಸಂಕಲನ, ಪ್ರಶಾಂತ್ ಗೌಡ ಕಲಾ ನಿರ್ದೇಶನ, ಡಿಫರೆಂಟ್ ಡ್ಯಾನಿ, ಥ್ರಿಲ್ಲರ್ ಮಂಜು, ರಾ ಪುಷ್ಪರಾಜು ಸಾಹಸ ನಿರ್ದೇಶನ ಹಾಗೂ ಧನಂಜಯ್ ಅವರ ನೃತ್ಯ ನಿರ್ದೇಶನವಿದೆ‌. ಬಹುತೇಕ ಚಿತ್ರೀಕರಣ ಮುಗಿದಿದ್ದು, ಸದ್ಯ ಡಬ್ಬಿಂಗ್ ಹಂತದಲ್ಲಿದೆ.

ಇದನ್ನೂ ಓದಿ:ಸುಮಲತಾ ಏಕಾಂಗಿ ಅಲ್ಲ, ಅಮ್ಮನ ಪರವಾಗಿ‌ ಅಭಿಷೇಕ್ ಅಂಬರೀಶ್ ಬ್ಯಾಟಿಂಗ್!

ABOUT THE AUTHOR

...view details