ಕರ್ನಾಟಕ

karnataka

ETV Bharat / sitara

Jai Bhim : ಪಾರ್ವತಿ ಅಮ್ಮಾಳ್​ಗೆ 15 ಲಕ್ಷ ರೂ. ಚೆಕ್​​ ನೀಡಿದ ನಟ ಸೂರ್ಯ

ತಮಿಳು ನಟ ಸೂರ್ಯ, ಪ್ರಕಾಶ್‌ರಾಜ್ ಅಭಿನಯದ 'ಜೈಭೀಮ್' ಚಿತ್ರಕ್ಕೆ OTTಯಲ್ಲಿ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಚಿತ್ರದ ನಿಜ ಸ್ಫೂರ್ತಿ ಪಾರ್ವತಿ ಅಮ್ಮಾಳ್​ಗೆ ನಟ ಸೂರ್ಯ ಹಾಗೂ 2D ಪ್ರೊಡಕ್ಸನ್‌ನಿಂದ 15 ಲಕ್ಷ ರೂ. ಸಹಾಯ ನೀಡಲಾಗಿದೆ..

Actor Surya presents a cheque
Actor Surya presents a cheque

By

Published : Nov 17, 2021, 3:03 PM IST

ಚೆನ್ನೈ :ತಮಿಳು ಸೂಪರ್‌ಸ್ಟಾರ್ ಸೂರ್ಯ ಅವರ ನಟನೆಯ ‘ಜೈ ಭೀಮ್’(Jai Bhim) ಚಿತ್ರಕ್ಕೆ ಈಗಾಗಲೇ ಒಳ್ಳೆಯ ಪ್ರತಿಕ್ರಿಯೆ ವ್ಯಕ್ತವಾಗಿದೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ.

ಇದರ ಬೆನ್ನಲ್ಲೇ ನಟ ಸೂರ್ಯ(Actor Suriya) ಹಾಗೂ 2D ಪ್ರೊಡಕ್ಸನ್​​ ಸೇರಿಕೊಂಡು ಚಿತ್ರದ ಪ್ರೇರಣೆಯಾಗಿರುವ ಪಾರ್ವತಿ ಅಮ್ಮಾಳ್​ಗೆ 15 ಲಕ್ಷ ರೂ. ಚೆಕ್​ ನೀಡಿದ್ದಾರೆ.

ಜೈ ಭೀಮ್​(Jai Bhim movie) ಚಿತ್ರ ಪಾರ್ವತಿ ಅಮ್ಮಾಳ್(Parvati Ammal)​​​ ನಿಜ ಜೀವನ ಚರಿತ್ರೆಯಿಂದ ಪ್ರೇರಣೆಯಾಗಿದೆ. ಚಿತ್ರ ಯಶಸ್ಸು ಕಾಣುತ್ತಿದ್ದಂತೆ ಅನೇಕ ಸಂಘ-ಸಂಸ್ಥೆಗಳು ಪಾರ್ವತಿ ಅಮ್ಮಾಳ್​ಗೆ ಸಹಾಯಹಸ್ತ ನೀಡುತ್ತಿವೆ.

ಈ ವಿಚಾರವಾಗಿ ಕಳೆದ ಮೂರು ದಿನಗಳ ಹಿಂದೆ ಟ್ವೀಟ್ ಮಾಡಿದ್ದ ನಟ ಸೂರ್ಯ ಪಾರ್ವತಿ ಅಮ್ಮಾಳ್​ ಹೆಸರಿನಲ್ಲಿ 10 ಲಕ್ಷ ರೂ. ಠೇವಣಿ ಇಡುವುದಾಗಿ ತಿಳಿಸಿದ್ದರು. ಅದರಂತೆ ನಿನ್ನೆ ಅವರನ್ನ ಭೇಟಿ ಮಾಡಿರುವ ನಟ ಹಾಗೂ 2D ಪ್ರೊಡಕ್ಷನ್​​ ಬ್ಯಾನರ್​​ 15 ಲಕ್ಷ ರೂ. ಚೆಕ್​ ನೀಡಿದ್ದಾರೆ.

ನವೆಂಬರ್​​ 2ರಂದು ಜೈ ಭೀಮ್​ ಚಿತ್ರ ರಿಲೀಸ್​ ಆಗಿದೆ. ಪಾರ್ವತಿ ಅಮ್ಮಾಳ್ ಅವರ​ ನಿಜ ಜೀವನದ ಸ್ಟೋರಿ ಇದಾಗಿದೆ. ಆಕೆಯ ಪತಿ ಪೊಲೀಸ್​ ಕಸ್ಟಡಿಯಲ್ಲಿ ಸಾವನ್ನಪ್ಪಿದ ಬಳಿಕ ನ್ಯಾಯಕ್ಕಾಗಿ ಅವಿರತ ಹೋರಾಟ ನಡೆಸಿದ್ದರು.

ಇದರ ಆಧಾರದ ಮೇಲೆ ಚಿತ್ರ ನಿರ್ಮಾಣಗೊಂಡಿದೆ. ಇದರಲ್ಲಿ ಚಿತ್ರದಲ್ಲಿ ಪ್ರಕಾಶ್ ರಾಜ್, ರಜಿಶಾ ವಿಜಯನ್, ಮಣಿಕಂಜನ್ ರಾವ್ ರಮೇಶ್ ಮತ್ತು ಲಿಜೋ ಮೋಲ್ ಜೋಸ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

ಇದನ್ನೂ ಓದಿರಿ:'ಜೈ ಭೀಮ್'​ ಚಿತ್ರದ ಸ್ಫೂರ್ತಿ ಪಾರ್ವತಿ ಅಮ್ಮಾಳ್​ಗೆ 10 ಲಕ್ಷ ರೂ. ನೀಡಿದ ನಟ ಸೂರ್ಯ

ಜೈಭೀಮ್​ 1993ರಲ್ಲಿ ಮದ್ರಾಸ್​ ಹೈಕೋರ್ಟ್​​ನಲ್ಲಿ ನಿವೃತ್ತ ನ್ಯಾಯಮೂರ್ತಿ ಕೆ. ಚಂದ್ರ ಅವರು ವಕೀಲರಾಗಿದ್ದಾಗ ಹೋರಾಡಿರುವ ಪ್ರಕರಣವಾಗಿದೆ. ತಮ್ಮ ಅವಧಿಯಲ್ಲಿ ವಕೀಲ ಚಂದ್ರು ಅವರು 96,000ಕ್ಕೂ ಹೆಚ್ಚು ಪ್ರಕರಣ ವಿಲೇವಾರಿ ಮಾಡಿದ್ದಾರೆ. ಅದರಲ್ಲಿ ಅನೇಕ ಮಹತ್ವದ ತೀರ್ಪು ಸೇರಿಕೊಂಡಿವೆ.

ABOUT THE AUTHOR

...view details