ಕರ್ನಾಟಕ

karnataka

ETV Bharat / sitara

'ರಾಜ್​ಕುಮಾರ್ ಫ್ಯಾಮಿಲಿ ಅಂತ ಧನ್ಯಾ ರಾಮ್​​​ಕುಮಾರ್​ ಅವರನ್ನು ಆಯ್ಕೆ ಮಾಡಲಿಲ್ಲ'

ಸೂರಜ್‌ ಗೌಡ ಹಾಗೂ ಧನ್ಯಾ ರಾಮ್‌ಕುಮಾರ್‌ ಅಭಿನಯದ 'ನಿನ್ನ ಸನಿಹಕೆ' ಚಿತ್ರ ಅಕ್ಟೋಬರ್ 8ರಂದು ರಾಜ್ಯಾದ್ಯಂತ ರಿಲೀಸ್​ ಆಗಲಿದೆ. ಈ ನಡುವೆ ಚಿತ್ರದ ಕುರಿತ ಇಂಟ್ರೆಸ್ಟಿಂಗ್ ವಿಚಾರಗಳನ್ನು ನಟ ಸೂರಜ್ ಹಂಚಿಕೊಂಡರು.

Suraj gowda
ಸೂರಜ್‌ ಗೌಡ

By

Published : Oct 6, 2021, 10:27 AM IST

‘ನಿನ್ನ ಸನಿಹಕೆ’ ಸೂರಜ್ ಗೌಡ ನಟನೆಯ ಜೊತೆಗೆ ಚೊಚ್ಚಲ ಬಾರಿಗೆ ನಿರ್ದೇಶನ ಮಾಡಿರೋ ಚಿತ್ರ. ಇದೇ ಅಕ್ಟೋಬರ್‌ 8ಕ್ಕೆ ರಾಜ್ಯಾದ್ಯಂತ ತೆರೆಕಾಣುತ್ತಿದೆ.

ನಟ ಸೂರಜ್ ಗೌಡ ಸಂದರ್ಶನ

'ಮದುವೆಯ ಮಮತೆಯ ಕರೆಯೋಲೆ' ಸಿನಿಮಾದಿಂದ ಕನ್ನಡ ಚಿತ್ರರಂಗ ಪ್ರವೇಶಿಸಿದ ಸೂರಜ್ ಗೌಡ, ಮೂರು ಸಿನಿಮಾಗಳಲ್ಲಿ ನಟನೆಯ ಜೊತೆಗೆ ನಿರ್ದೇಶಕರಾಗುತ್ತಾರೆ ಅಂತಾ ಅಂದುಕೊಂಡಿರಲಿಲ್ವಂತೆ. ನಿನ್ನ ಸನಿಹಕೆ ಸಿನಿಮಾದ ಕಥೆ, ಚಿತ್ರಕಥೆ ಬರೆದಿದ್ದ ಸೂರಜ್ ಗೌಡರಿಗೆ, ನಿರ್ದೇಶನ ಮಾಡುವಂತೆ ನಿರ್ಮಾಪಕರು ಹೇಳಿದ್ದರಂತೆ.

ನಟ ಸೂರಜ್ ಗೌಡ ಸಂದರ್ಶನ

ನನಗೆ ಚಿಕ್ಕವಯಸ್ಸಿನಿಂದಲೇ ಸಿನಿಮಾ ನೋಡುವ ಹವ್ಯಾಸ ಇತ್ತು. ಪುನೀತ್ ರಾಜ್ ಕುಮಾರ್, ಸುದೀಪ್, ಶಿವರಾಜ್ ಕುಮಾರ್, ದರ್ಶನ್ ಸಾರ್ ಸಿನಿಮಾಗಳನ್ನು ನೋಡಿ ಕಥೆ ಬರೆಯೋದಕ್ಕೆ ಶುರು ಮಾಡಿದೆ. ಆಗ ಬರೆದ ಕಥೆಯೇ ನಿನ್ನ ಸನಿಹಕೆ ಸಿನಿಮಾ ಅಂತ ಹೇಳಿದರು.

'ಟೈಟಲ್ ಸಿಕ್ಕಿದ್ದೇ ಅಚ್ಚರಿ'

ಸೂರಜ್ ಗೌಡ ಅವರ ಸ್ನೇಹಿತನೊಬ್ಬ ತನ್ನ ಗರ್ಲ್ ಫ್ರೆಂಡ್ ಜೊತೆ ಮನೆಗೆ ಬಂದಿದ್ರಂತೆ. ಆಗ ಸೂರಜ್ ಗೌಡರ ಸ್ನೇಹಿತ ನನ್ನ ಗರ್ಲ್ ಫ್ರೆಂಡ್ ಸನಿಹ ಅಂತಾ ಪರಿಚಯಿಸಿದ್ದಾರೆ. ಈ ಸಂದರ್ಭದಲ್ಲಿ​​​ ‘ನಿನ್ನ ಸನಿಹಕೆ’ ಟೈಟಲ್ ಹುಟ್ಟಿಕೊಂಡಿತು ಎನ್ನುತ್ತಾರೆ ಸೂರಜ್​.

ನಟ ಸೂರಜ್ ಗೌಡ ಸಂದರ್ಶನ

ನಾಯಕಿ ಧನ್ಯಾ ರಾಮ್​​ಕುಮಾರ್ ಕುರಿತು ಮಾತನಾಡಿ, ಈ ಸಿನಿಮಾ ರಾಜ್​​ಕುಮಾರ್ ಮೊಮ್ಮಳಿಗೆ ಅಂತ ಮಾಡಿದ್ದಲ್ಲ. ಆದರೆ ಧನ್ಯಾ ರಾಮ್​​ಕುಮಾರ್​ಗೆ ಈ ಪಾತ್ರ ಒಪ್ಪುತ್ತದೆ. ಧನ್ಯಾ ಭವಿಷ್ಯದಲ್ಲಿ ದೊಡ್ಡ ಮಟ್ಟಕ್ಕೆ ಬೆಳೆಯುತ್ತಾರೆ. ಅಷ್ಟು ಟ್ಯಾಲೆಂಟ್ ಅವರಲ್ಲಿದೆ. ನಿಜ ಜೀವನದಲ್ಲಿಯೂ ನಾನು ಮತ್ತು ಧನ್ಯಾ ನಡುವೆ ಒಳ್ಳೆಯ ಸ್ನೇಹ ಇದೆ. ಇದೇ ಗೆಳೆತನ ನಿನ್ನ ಸನಿಹಕೆ ಸಿನಿಮಾದಲ್ಲಿ ಆನ್ ಸ್ಕ್ರೀನ್ ತುಂಬಾ ಚೆನ್ನಾಗಿ ವರ್ಕ್ ಔಟ್ ಆಗಿದೆ ಎಂದರು.

ಈ ಸಿನಿಮಾ ಚಿತ್ರೀಕರಣದ ಸಂದರ್ಭದಲ್ಲಿ ಪುನೀತ್ ರಾಜ್ ಕುಮಾರ್ ವಿಸಿಟ್ ಮಾಡಿದರು. ಆಗ ನನಗೆ ಸ್ವಲ್ಪ ಟೆನ್ಷನ್ ಆಗಿತ್ತು. ಯಾಕಂದ್ರೆ ಅಪ್ಪು ಸಾರ್ ಅವರ ಮಾಸ್ ಸಿನಿಮಾಗಳನ್ನು ನೋಡಿ ನಾವು ಕಲಿತಿಕೊಂಡಿದ್ವಿ. ಅಂತಹ ನಟ ನಮ್ಮ ಸಿನಿಮಾ ಶೂಟಿಂಗ್ ಸ್ಪಾಟ್​​​ಗೆ ಬಂದಿದ್ದು ಅಚ್ಚರಿ ಅನಿಸಿತ್ತು. ಈ ಸಿನಿಮಾವನ್ನು ಯಾವುದೇ ಮುಜುಗರ ಇಲ್ಲದೆ ಇಡೀ ಫ್ಯಾಮಿಲಿ ನೋಡಬಹುದು. ಚಿತ್ರವನ್ನು ಓಟಿಟಿಯವರು ತುಂಬಾ ಆಫರ್ ಮಾಡಿದ್ರೂ ಕೊಡಲಿಲ್ಲ, ಫೈನಲಿ ಈಗ ಚಿತ್ರಮಂದಿರದಲ್ಲಿ ಪ್ರೇಕ್ಷಕರ ಮುಂದೆ ಬರ್ತಿದೆ ಎಂದು ಸೂರಜ್ ಗೌಡ ಹೇಳಿದರು.

ABOUT THE AUTHOR

...view details