ಕರ್ನಾಟಕ

karnataka

ETV Bharat / sitara

ಮುಕುಂದನ ನೆರವಿಗೆ ಬಂದ ಮುರಾರಿ...! - undefined

ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ 'I Love You' ಸಿನಿಮಾ ಕನ್ನಡ ಹಾಗೂ ತೆಲುಗು ಚಿತ್ರರಂಗದಲ್ಲಿ ಸಖತ್​ ಟಾಕ್ ಆಗುತ್ತಿದೆ.

ಚಿತ್ರಕೃಪೆ: ಟ್ವಿಟ್ಟರ್​

By

Published : May 25, 2019, 7:59 PM IST

ವಿಭಿನ್ನ ಪೋಸ್ಟರ್, ಮನಸ್ಸಿಗೆ ನಾಟುವ ಡೈಲಾಗ್​ಗಳಿಂದ ಸೆನ್ಸೇಷನ್ ಕ್ರಿಯೇಟ್ ಮಾಡಿರೋ ಐ ಲವ್ ಯೂ ಸಿನಿಮಾಗೆ ಪೈಲ್ವಾನ್ ಸಾಥ್ ನೀಡಿದ್ದಾನೆ. 'ಮುಕುಂದ ಮುರಾರಿ' ಸಿನಿಮಾದಲ್ಲಿ ಉಪ್ಪಿ ಜೊತೆ ಸ್ಕ್ರೀನ್ ಶೇರ್ ಮಾಡಿದ್ದ ಕಿಚ್ಚ ಸುದೀಪ್, ಈಗ ಮತ್ತೆ ರಿಯಲ್ ಸ್ಟಾರ್ ಜೊತೆ ಜೊತೆಯಾಗಲಿದ್ದಾರೆ. ಹಾಗಂತ ಈ ಚಿತ್ರದಲ್ಲಿ ಅಭಿನಯ ಚಕ್ರವರ್ತಿ ಅಭಿನಯಿಸುತ್ತಿಲ್ಲ.

ಆರ್.ಚಂದ್ರು ನಿರ್ದೇಶನದ 'I Love You' ಸಿನಿಮಾದ ಟ್ರೇಲರ್ ಕಿಚ್ಚ ಸುದೀಪ್ ಲಾಂಚ್ ಮಾಡುದ್ದಾರೆ. ಅವರು ಮೇ 27 ರಂದು 5.30ಕ್ಕೆ ಟ್ರೇಲರ್ ಅನಾವರಣಗೊಳಿಸಿ ಚಿತ್ರತಂಡಕ್ಕೆ ಶುಭ ಹಾರೈಸಲಿದ್ದಾರೆ.

'I Love You' ಕನ್ನಡ ಹಾಗೂ ತೆಲುಗು ಭಾಷೆಯಲ್ಲಿ ಬಿಡುಗಡೆಯಾಗುತ್ತಿದ್ದು, ಮತ್ತೊಂದೆಡೆ ತೆಲುಗು ಆವತಣೆಯ ಹಾಡುಗಳನ್ನು ಪ್ರಿನ್ಸ್ ಮಹೇಶ್ ಬಾಬು ಕೈನಲ್ಲಿ ರಿಲೀಸ್​ ಮಾಡಿಸುವ ಪ್ಲ್ಯಾನ್ ಚಿತ್ರತಂಡಕ್ಕಿದೆ.

ಇನ್ನು ಈ ಚಿತ್ರದಲ್ಲಿ ರಚಿತಾ ರಾಮ್ ಹಾಗೂ ಸೋನು ಗೌಡ ನಾಯಕಿಯರಾಗಿದ್ದಾರೆ. ಮೊದಲ ಬಾರಿಗೆ ಉಪ್ಪಿಗೆ ರಚಿತಾ ಜೋಡಿಯಾಗಿದ್ದಾರೆ. ಜೂನ್ 14 ರಂದು ರಾಜ್ಯಾದ್ಯಂತ ಈ ಸಿನಿಮಾ ರಿಲೀಸ್ ಆಗುತ್ತಿದೆ.

For All Latest Updates

TAGGED:

ABOUT THE AUTHOR

...view details