ಕರ್ನಾಟಕ

karnataka

ETV Bharat / sitara

ವಿಡಿಯೋ ನೋಡಿ: 'ಮೈ ಆಟೋಗ್ರಾಫ್​'​ ಶೂಟಿಂಗ್ ಸ್ಥಳಕ್ಕೆ ಸುದೀಪ್​ ಭೇಟಿ - ಮೈ ಆಟೋಗ್ರಾಫ್ ಸುದ್ದಿ

'ಮೈ ಆಟೋಗ್ರಾಫ್'​ ಚಿತ್ರದ ಶೂಟಿಂಗ್ ಕೇರಳದಲ್ಲಿ ನಡೆದಿತ್ತು. ಅಲ್ಲಿನ ಒಂದು ಮನೆಯಲ್ಲಿ ಚಿತ್ರೀಕರಣ​ ನಡೆದಿದ್ದು, ಆ ಮನೆಗೆ ಸುದೀಪ್​ 'ಲತಿಕಾ ಮನೆ' ಎಂದು ಕರೆದಿದ್ದು ಏಕೆ ಅನ್ನೋದು ನಿಮಗೆ ಗೊತ್ತೇ?

ವಿಡಿಯೋ ನೋಡಿ : 'ಮೈ ಆಟೋಗ್ರಾಫ್​'​ ಶೂಟಿಂಗ್ ನಡೆದ​​ ಸ್ಥಳಕ್ಕೆ ಸುದೀಪ್​ ಭೇಟಿ
ವಿಡಿಯೋ ನೋಡಿ : 'ಮೈ ಆಟೋಗ್ರಾಫ್​'​ ಶೂಟಿಂಗ್ ನಡೆದ​​ ಸ್ಥಳಕ್ಕೆ ಸುದೀಪ್​ ಭೇಟಿ

By

Published : Dec 29, 2020, 4:15 PM IST

ಕಿಚ್ಚ ಸುದೀಪ್​​​ ಸಿನಿ ಜರ್ನಿಯಲ್ಲಿ ಅಚ್ಚಳಿಯದಂತಹ ಸಿನಿಮಾಗಳ ಪೈಕಿ 'ಮೈ ಆಟೋಗ್ರಾಫ್​'​​ ಕೂಡ ಒಂದು. ಈ ಚಿತ್ರವನ್ನು ಸುದೀಪ್​ ಅವರೇ ನಿರ್ದೇಶಿಸಿ ನಟಿಸಿದ್ದರು. 2006ರಲ್ಲಿ ತೆರೆ ಕಂಡ ಈ ಸಿನಿಮಾವನ್ನು ಸುದೀಪ್ ಇದೀಗ​​ ಮೆಲುಕು ಹಾಕಿದ್ದಾರೆ.

ಚಿತ್ರದ ಶೂಟಿಂಗ್ ಕೇರಳ ಒಂದು ಮನೆಯಲ್ಲಿ ನಡೆದಿದ್ದು, ಆ ಮನೆಗೆ ಸುದೀಪ್​ ಲತಿಕಾ ಮನೆ ಎಂದು ಕರೆದಿದ್ದಾರೆ. ಯಾಕಂದ್ರೆ ಚಿತ್ರದಲ್ಲಿ ಎರಡನೇ ನಾಯಕಿಯಾಗಿ ಲತಿಕಾ ಕಣಿಸಿಕೊಂಡಿದ್ದರು.

ಓದಿ: ಈ ಬಾರಿ ಚಿತ್ರಸಂತೆ ಉದ್ಘಾಟಿಸಲಿದ್ದಾರೆ ಇನ್ಫೋಸಿಸ್‌ ಸುಧಾಮೂರ್ತಿ

ಹೈದ್ರಾಬಾದ್​​ನಲ್ಲಿ 'ಫ್ಯಾಂಟಮ್'​​​ ಸಿನಿಮಾ ಶೂಟಿಂಗ್​ ಮುಗಿಸಿರುವ ಕಿಚ್ಚ ಕೇರಳ ಕಡೆ ಪ್ರವಾಸ ಬೆಳೆಸಿದ್ದಾರೆ. ಈ ವೇಳೆ ಲತಿಕಾ ಮನೆಗೆ ಹೋದ ವಿಡಿಯೋವನ್ನು ಅವರು​ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಆ ಮನೆಯೊಳಗೆ ಹೋದ ಸಂದರ್ಭದಲ್ಲಿ ಲತಿಕಾ ವೀಣೆ ಬಾರಿಸುವ ದೃಶ್ಯವಿದೆ. ಆ ಸ್ಥಳಕ್ಕೂ ಹೋಗಿರುವ ಸುದೀಪ್ ವೀಣೆ ಸೀನ್ ಇಲ್ಲೇ ಚಿತ್ರೀಕರಿಸಿದ್ವಿ ಎಂದು ನೆನಪಿಸಿಕೊಂಡರು.

ABOUT THE AUTHOR

...view details