ಕರ್ನಾಟಕ

karnataka

ETV Bharat / sitara

ಸುದೀಪ್​ಗೆ ಅನಾರೋಗ್ಯ.. ಈ ವಾರದ ಕತೆಯಲ್ಲಿ ಕಿಚ್ಚನ ಸ್ಥಾನಕ್ಕೆ ಯಾರು? - ವಾರದ ಕತೆ ಕಿಚ್ಚನ ಜೊತೆ

ವೈದ್ಯರು ಇನ್ನೂ ಕೆಲ ದಿನಗಳ ಕಾಲ ಸಂಪೂರ್ಣ ರೆಸ್ಟ್ ಮಾಡಬೇಕೆಂದು ಹೇಳಿದ್ದಾರೆ. ಹೀಗಾಗಿ, ಬಿಗ್​ಬಾಸ್ ಕನ್ನಡ 8ನೇ ಸೀಸನ್​ನ ಈ ವೀಕೆಂಡ್​ನ ಎಪಿಸೋಡ್​ನಲ್ಲಿ ನಾನು ಪಾಲ್ಗೊಳ್ಳುವುದಿಲ್ಲ..

actor sudeep tweet about his health
ಸುದೀಪ್​ಗೆ ಅನಾರೋಗ್ಯ: 'ವಾರದ ಕತೆ ಕಿಚ್ಚನ ಜೊತೆ' ಯಲ್ಲಿ ಅಭಿನಯ ಚಕ್ರವರ್ತಿಸ್ಥಾನ ತುಂಬುವವರಾರು?

By

Published : Apr 16, 2021, 5:28 PM IST

ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್ ಸದ್ಯ ಬಿಗ್ ಬಾಸ್ ಶೋ ಮತ್ತು ಕೋಟಿಗೊಬ್ಬ 3, ವಿಕ್ರಾಂತ್ ರೋಣ ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಆದ್ರೆ, ಈ ವಾರದ ಬಿಗ್ ಬಾಸ್ ಶೋ ನಡೆಸಿಕೊಡಲು ಕಿಚ್ಚ ಸುದೀಪ್ ಬರುತ್ತಿಲ್ಲ.

ನಿನ್ನೆಯಷ್ಟೇ ಕಿಚ್ಚ ಸುದೀಪ್ ಆರೋಗ್ಯ ಸರಿಯಿಲ್ಲ ಎಂಬ ಕಾರಣಕ್ಕೆ, ಬಿಗ್ ಬಾಸ್ ವಾರದ ಕಾರ್ಯಕ್ರಮ ಇರಲ್ಲ ಅಂತ ಹೇಳಲಾಗಿತ್ತು. ಇದೀಗ ಈ ಬಗ್ಗೆ ಸ್ವತಃ ಕಿಚ್ಚ ಸುದೀಪ್ ಟ್ವೀಟ್ ಮಾಡಿದ್ದು, ನನಗೆ ಆರೋಗ್ಯ ಸರಿಯಿಲ್ಲ. ಸದ್ಯದಲ್ಲೇ ಗುಣಮುಖನಾಗುತ್ತೇನೆ ಎಂಬ ಭರವಸೆಯಿದೆ.

ನಟ ಸುದೀಪ್​ ಟ್ವೀಟ್

ಆದರೆ, ವೈದ್ಯರು ಇನ್ನೂ ಕೆಲ ದಿನಗಳ ಕಾಲ ಸಂಪೂರ್ಣ ರೆಸ್ಟ್ ಮಾಡಬೇಕೆಂದು ಹೇಳಿದ್ದಾರೆ. ಹೀಗಾಗಿ, ಬಿಗ್​ಬಾಸ್ ಕನ್ನಡ 8ನೇ ಸೀಸನ್​ನ ಈ ವೀಕೆಂಡ್​ನ ಎಪಿಸೋಡ್​ನಲ್ಲಿ ನಾನು ಪಾಲ್ಗೊಳ್ಳುವುದಿಲ್ಲ ಎಂದು ತಿಳಿಸಿದ್ದಾರೆ.

ಬಿಗ್​ ಬಾಸ್​ ಕನ್ನಡ-8ನೇ ಸೀಸನ್​ ದಿನದಿಂದ ದಿನಕ್ಕೆ ಪ್ರೇಕ್ಷಕರನ್ನು ಸೆಳೆಯುತ್ತಿದೆ. ಬಿಗ್​ಬಾಸ್​ನಿಂದ ಈಗಾಗಲೇ 6 ಸ್ಪರ್ಧಿಗಳು ಎಲಿಮಿನೇಟ್ ಆಗಿದ್ದಾರೆ. ನಾಳೆ ಹಾಗೂ ಭಾನುವಾರ ನಡೆಯಲಿರುವ ವೀಕೆಂಡ್​ ಎಪಿಸೋಡ್​ನಲ್ಲಿ ಇನ್ನೊಬ್ಬರು ಸ್ಪರ್ಧಿ ಬಿಗ್ ಬಾಸ್​ ಮನೆಯಿಂದ ಹೊರ ಹೋಗುವುದು ಖಚಿತ.

ಅಭಿನಯ ಚಕ್ರವರ್ತಿ ಸುದೀಪ್​​

ಇದನ್ನೂ ಓದಿ:ಕಿಚ್ಚ ಸುದೀಪ್​ಗೆ ಅನಾರೋಗ್ಯ: ಬಿಗ್​ಬಾಸ್​​ ಮನೆಗೆ ವಾರಾಂತ್ಯದ ನಿರೂಪಕರಾಗಿ ಮತ್ತೊಬ್ಬರು ಎಂಟ್ರಿ!?

ಆದರೆ, ಕಿಚ್ಚ ಸುದೀಪ್ ನಡೆಸಿಕೊಡುವ ವಾರದ ಕತೆ ಕಿಚ್ಚನ ಜೊತೆ ಎಪಿಸೋಡ್​ಗಾಗಿ ಕಂಟೆಸ್ಟೆಂಟ್ಸ್​ ಸೇರಿ ಅನೇಕ ಪ್ರೇಕ್ಷಕರು ಕಾಯುತ್ತಿದ್ದರು. ಇದೀಗ ಕಿಚ್ಚ ಸುದೀಪ್ ಅವರ ಆರೋಗ್ಯ ಸರಿ ಇಲ್ಲದ ಕಾರಣ ಈ ವಾರ ಅವರ ಸ್ಥಾನವನ್ನು ಯಾರು ತುಂಬಲಿದ್ದಾರೆ ಎಂಬ ಕುತೂಹಲ ಹೆಚ್ಚಿದೆ‌.

ABOUT THE AUTHOR

...view details