ಕರ್ನಾಟಕ

karnataka

ETV Bharat / sitara

ರವಿಮಾಮನ ಮುಂದೆ ಸುದೀಪ್ ಇಟ್ರು ಆ ಬೇಡಿಕೆ - ರವಿಚಂದ್ರನ್

ಮಾಣಿಕ್ಯ ಹಾಗೂ ಹೆಬ್ಬುಲಿ ಚಿತ್ರಗಳ ನಂತರ ಕ್ರೇಜಿಸ್ಟಾರ್ ರವಿಚಂದ್ರನ್ ಹಾಗೂ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಮತ್ತೊಮ್ಮೆ ತೆರೆಯ ಮೇಲೆ ಒಂದಾಗುತ್ತಿದ್ದಾರೆ.

ravichandran

By

Published : Aug 19, 2019, 6:45 PM IST

Updated : Aug 19, 2019, 7:25 PM IST

ಮಾಣಿಕ್ಯ ಚಿತ್ರದಲ್ಲಿ ಸುದೀಪ್ ಅವರ ನಿರ್ದೇಶನದಲ್ಲಿ ಪ್ರೇಮಲೋಕದ ದೊರೆ ರವಿಚಂದ್ರನ್ ನಟಿಸಿದ್ದರು. ಈಗ ರವಿಮಾಮನ ಡೈರೆಕ್ಷನ್​​ನ​ 'ರವಿ ಬೋಪಣ್ಣ' ಚಿತ್ರದಲ್ಲಿ ಗೆಸ್ಟ್ ರೋಲ್ ಪ್ಲೇ ಮಾಡಿದ್ದಾರೆ ಸ್ಯಾಂಡಲ್​​ವುಡ್​​ನ ರನ್ನ.

ಮಾಧ್ಯಮಗೋಷ್ಠಿಯಲ್ಲಿ ರವಿಚಂದ್ರನ್ ಹಾಗೂ ಸುದೀಪ್

ನಿನ್ನೆಯಷ್ಟೆ ರವಿ ಬೋಪಣ್ಣ ಶೂಟಿಂಗ್ ಸೆಟ್​ಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಸುದೀಪ್ ಹಾಗೂ ರವಿಚಂದ್ರನ್​ ಒಟ್ಟಾಗಿ ಕಾಣಿಸಿಕೊಂಡ್ರು. ಜತೆಗೆ ತಮ್ಮ ಸ್ನೇಹ-ಸಂಬಂಧ ಹಾಗೂ ಸಿನಿಮಾಗಳ ಬಗ್ಗೆ ಸಾಕಷ್ಟು ಮಾತಾಡಿದರು. ಈ ವೇಳೆ ಕಿಚ್ಚ ಸುದೀಪ್ ಅವರು ರವಿಚಂದ್ರನ್​ ಅವರಲ್ಲಿ ಒಂದು ಬೇಡಿಕೆ ಕೂಡ ಇಟ್ರು. 'ರವಿ ಸರ್ ಅವರು ಅವರ ಸ್ಟೈಲ್​ನಲ್ಲಿ ಸಿನಿಮಾ ಮಾಡಲಿ. ಏಕಾಂಗಿ ತರದ ಸಿನಿಮಾಗಳನ್ನು ಬಿಟ್ಟು ಮತ್ತೆ ನಿಮ್ಮ ಶೈಲಿಯಲ್ಲಿ ಕಲರ್​​ಫುಲ್ ಆಗಿ ಸಿನಿಮಾ ಮಾಡಿ. ಒಳ್ಳೆ ನಟಿ ಜೊತೆ ಗ್ಲಾಮರ್ ಆಗಿ ಸೂಪರ್ ಆಗಿರೋ ಹಾಡುಗಳು ಹಾಕಿಕೊಂಡು ಸಿನಿಮಾ ಮಾಡಿ ಎಂದು ಕಿಚ್ಚ ಕೇಳಿಕೊಂಡ್ರು.

Last Updated : Aug 19, 2019, 7:25 PM IST

ABOUT THE AUTHOR

...view details