ಕನ್ನಡ ಚಿತ್ರರಂಗದ ಅಭಿನಯ ಚಕ್ರವರ್ತಿ ಎಂದೇ ಕರೆಸಿಕೊಂಡಿರುವ ಸುದೀಪ್ ಕೆಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಹೀಗಾಗಿ ಕಳೆದ ಎರಡು ವಾರಗಳಿಂದ ಬಿಗ್ ಬಾಸ್ ಶೋ ಜೊತೆಗೆ ಸಾರ್ವಜನಿಕವಾಗಿ ಎಲ್ಲಿಯೂ ಕಾಣಿಸಿಕೊಳ್ಳದೆ ಮನೆಯಲ್ಲೇ ಚಿಕಿತ್ಸೆ ಪಡೆದು ವಿಶ್ರಾಂತಿ ಪಡೆಯುತ್ತಿದ್ದರು. ಸುದೀಪ್ ಅಭಿಮಾನಿಗಳಿಗೆ, ನಮ್ಮ ನೆಚ್ಚಿನ ನಟನಿಗೆ ಏನಾಗಿದೆ, ಹೇಗಿದ್ದಾರೆ? ಎನ್ನುವ ಆತಂಕವಿತ್ತು.
ಈ ಬಗ್ಗೆ ಟ್ವೀಟ್ ಮಾಡಿರುವ ಸುದೀಪ್, ನನಗಾಗಿ ಪ್ರಾರ್ಥಿಸಿದ ಮತ್ತು ಹಾರೈಸಿದ ಎಲ್ಲರಿಗೂ ಧನ್ಯವಾದಗಳು. ನಾನು ಈಗ ಉತ್ತಮವಾಗಿದ್ದೇನೆ. ಈ ವಾರ ನಿರೂಪಣೆಗೆ ಹಾಜರಾಗಲು ಎದುರು ನೋಡುತ್ತಿದ್ದೇನೆ. ನನಗೆ ಚಿಕಿತ್ಸೆ ನೀಡಿದ ಡಾ. ವೆಂಕಟೇಶ್ ಮತ್ತು ಡಾ. ವಿನಯ್ ಅವರಿಗೆ ಧನ್ಯವಾದಗಳು ಎಂದಿದ್ದಾರೆ.