ಕರ್ನಾಟಕ

karnataka

ETV Bharat / sitara

ವಿಷ್ಣು ದಾದಾಗೆ ನನ್ನ ಹೋಲಿಕೆ ಮಾಡ್ಬೇಡಿ: ಕಿಚ್ಚ ಸುದೀಪ್​​ ಈ ಮಾತು ಹೇಳಿದ್ಯಾಕೆ? - ಸ್ಯಾಂಡಲ್​ವುಡ್​ ಸುದ್ದಿ

ಕೋಟಿಗೊಬ್ಬ-3 ಚಿತ್ರದ​ ಲಿರಿಕಲ್​ ಹಾಡಿಗೆ ಅಭಿಮಾನಿಗಳು ಮತ್ತು ಮಾಧ್ಯಮದವರು ಕಿಚ್ಚನನ್ನು ವಿಷ್ಣು ದಾದಾಗೆ ಹೋಲಿಸಿದ್ದು, ಚರ್ಚೆಗೆ ಆಸ್ಪದ ನೀಡಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಸುದೀಪ್, ಅಭಿಮಾನಿಗಳಿಗೆ ಕಿವಿ ಮಾತು ಹೇಳಿದ್ದಾರೆ.

actor-sudeep-reaction-on-vishnuvardhan-kotigobba-3
ಕಿಚ್ಚ ಸುದೀಪ್

By

Published : May 2, 2020, 3:10 PM IST

ಕೋಟಿಗೊಬ್ಬ ಸಿಕ್ವೇಲ್​ ಮೂಲಕ ಮತ್ತೆ ತೆರೆ ಮೇಲೆ ಮೋಡಿ ಮಾಡಲು ಸಿದ್ದವಾಗಿರುವ ಕಿಚ್ಚ ಸುದೀಪ್,​ ವಿಷ್ಣುದಾದಾ ಕುರಿತು ಅಭಿಮಾನಿಗಳಿಗೆ ಕೆಲವೊಂದಿಷ್ಟು ಮಾತುಗಳನ್ನು ಹಂಚಿಕೊಂಡಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಕೋಟಿಗೊಬ್ಬ-3 ಚಿತ್ರ ಲಿರಿಕಲ್​ ಹಾಡಿಗೆ ಅಭಿಮಾನಿಗಳು ಮತ್ತು ಮಾಧ್ಯಮದವರು ಕಿಚ್ಚನನ್ನು ವಿಷ್ಣು ದಾದಾಗೆ ಹೋಲಿಸಿದ್ದು, ಚರ್ಚೆಗೆ ಆಸ್ಪದ ನೀಡಿದೆ.

ಜಾಲತಾಣದಲ್ಲಿ ಸದ್ದು ಮಾಡುತ್ತಿರುವ ಚಿತ್ರ

ಈ ಕುರಿತು ಟ್ವೀಟ್​ ಮಾಡಿರುವ ಅಭಿನಯ ಚಕ್ರವರ್ತಿ ‘ಕೋಟಿಗೊಬ್ಬ’ ಶುರು ಅಗಿದ್ದೇ ಅಪ್ಪಾಜಿ ವಿಷ್ಣು ಸಾರ್ ಇಂದ. ಅವರನ್ನು ರೀ ಪ್ಲೇಸ್ ಮಾಡುವುದಕ್ಕೆ ಯಾರಿಂದಲೂ ಸಾಧ್ಯವಿಲ್ಲ. ಅಂತಹ ಲೀಡರ್ ಅನ್ನು ನನಗೆ ಕಂಪೇರ್ ಮಾಡಬೇಡಿ. ನನ್ನ ಸಿನಿಮಾಗಳು ಬಹಳ ಚಿಕ್ಕವು ಎಂದಿದ್ದಾರೆ.

ಸುದೀಪ್ ಮಾತಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಅಲ್ಲದೆ ಪೈಲ್ವಾನ್​ನ ಸೌಜನ್ಯದ ಮಾತುಗಳಿಂದ ಚರ್ಚೆಯೂ ಸಹ ನಿರ್ಮಲವಾಗಿ ಕೊನೆಯಾಗಿದೆ. ಮೂರು ದಿನದಲ್ಲಿ ಕೋಟಿಗೊಬ್ಬ-3 ಚಿತ್ರದ 'ಆಕಾಶವೇ ಆಧರಿಸುವ' ಲಿರಿಕಲ್​ ಹಾಡನ್ನು ಯೂಟ್ಯೂಬ್​ನಲ್ಲಿ 5 ಮಿಲಿಯನ್ ಬಾರಿ ವೀಕ್ಷಣೆಯಾಗಿದೆ.

ABOUT THE AUTHOR

...view details