ಸ್ಯಾಂಡಲ್ವುಡ್ನಲ್ಲಿ ಹಲವಾರು ಸೂಪರ್ ಹಿಟ್ ಸಿನಿಮಾಗಳನ್ನು ನೀಡಿರುವ ಮೋಹತ ತಾರೆ ರಮ್ಯಾಗೆ ಇಂದು ಹುಟ್ಟು ಹಬ್ಬದ ಸಂಭ್ರಮ. 38ನೇ ವಸಂತಕ್ಕೆ ಕಾಲಿಟ್ಟಿರುವ ನಟಿಗೆ ರಾಜ್ಯದೆಲ್ಲೆಡೆ ಅಭಿಮಾನಿಗಳು ಹಾಗೂ ಗಣ್ಯರಿಂದ ಶುಭಾಶಯ ತಿಳಿಸಲಾಗುತ್ತಿದೆ. ಇದೇ ಹಿನ್ನೆಲೆ ನಟಿ ರಮ್ಯಾಗೆ ಕಿಚ್ಚ ಸುದೀಪ್ ಹುಟ್ಟು ಹಬ್ಬದ ಶುಭ ಕೋರಿದ್ದಾರೆ.
'ಮೋಹಕತಾರೆ'ಗೆ ಬರ್ತ್ ಡೇ ವಿಶ್ ಮಾಡಿದ 'ಕಿಚ್ಚ' - Actor Sudeep greets Ramya's birthday
ಸುದೀಪ್ ಮತ್ತು ರಮ್ಯಾ ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ರಂಗ ಎಸ್‌ಎಸ್‌ಎಲ್‌ಸಿ, ಮುಸ್ಸಂಜೆ ಮಾತು, ಜಸ್ಟ್ ಮಾತ್ ಮಾತಲ್ಲಿ ಹಾಗೂ ಕಿಚ್ಚ-ಹುಚ್ಚ ಚಿತ್ರಗಳಲ್ಲಿ ಇಬ್ಬರು ಪರದೆ ಹಂಚಿಕೊಂಡಿದ್ದಾರೆ..
'ಮೋಹಕತಾರೆ'ಗೆ ಬರ್ತ್ ಡೇ ವಿಶ್ ಮಾಡಿದ 'ಕಿಚ್ಚ'
ಸುದೀಪ್ ಮತ್ತು ರಮ್ಯಾ ನಾಲ್ಕು ಸಿನಿಮಾಗಳಲ್ಲಿ ಒಟ್ಟಿಗೆ ನಟಿಸಿದ್ದಾರೆ. ರಂಗ ಎಸ್‌ಎಸ್‌ಎಲ್‌ಸಿ, ಮುಸ್ಸಂಜೆ ಮಾತು, ಜಸ್ಟ್ ಮಾತ್ ಮಾತಲ್ಲಿ ಹಾಗೂ ಕಿಚ್ಚ-ಹುಚ್ಚ ಚಿತ್ರಗಳಲ್ಲಿ ಇಬ್ಬರು ಪರದೆ ಹಂಚಿಕೊಂಡಿದ್ದಾರೆ.
ಇನ್ನು, ಟ್ವಿಟರ್ನಲ್ಲಿ ರಮ್ಯಾ ಹುಟ್ಟುಹಬ್ಬಕ್ಕೆ ಶುಭ ಕೋರಿರುವ ನಟ ಸುದೀಪ್, 'ನಿಮ್ಮೊಂದಿಗಿನ ಸಿನಿಪಯಣ ನೆನಪುಳಿಯುವಂತಹದ್ದು. ಯಾವಾಗಲೂ ಸಂತೋಷವಾಗಿರಿ, ಸಂತೋಷವಾಗಿ ಹುಟ್ಟುಹಬ್ಬ ಆಚರಿಸಿ ಎಂದು ಸುದೀಪ್ ಶುಭ ಕೋರಿದ್ದಾರೆ.